ಸಲ್ಮಾನ್ ಖಾನ್ (Salman Khan) ನಟನೆಯ ‘ಸಿಕಂದರ್’ (Sikandar) ಚಿತ್ರದ ಟ್ರೈಲರ್ ರಿಲೀಸ್ ಆಗಿ ಅಭಿಮಾನಿಗಳ ಮೆಚ್ಚುಗೆ ಪಡೆದಿದೆ. ಈ ಚಿತ್ರದ ಟ್ರೈಲರ್‌ನಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಒಬ್ಬರೇ ಅಲ್ಲ, ಕನ್ನಡದ ನಟ ಕಿಶೋರ್ (Kishore) ಕೂಡ ಮಿಂಚಿದ್ದಾರೆ. ‘ಸಿಕಂದರ್’ನಲ್ಲಿ ಕನ್ನಡ ಪ್ರತಿಭೆಗಳ ಹವಾ ಜೋರಾಗಿದೆ.
‘ಸಿಕಂದರ್’ ಸಿನಿಮಾದಲ್ಲಿ ಸಲ್ಮಾನ್ ಖಾನ್‌ಗೆ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಟ್ರೈಲರ್‌ನಲ್ಲಿ ಇಬ್ಬರ ರೊಮ್ಯಾನ್ಸ್ ಹೈಲೈಟ್ ಆಗಿದೆ. ಸಿನಿಮಾದಲ್ಲಿ ಬಾಲಿವುಡ್ ಮಂದಿಗಿಂತ ದಕ್ಷಿಣದ ಕಲಾವಿದರಿಗೆ ಚಿತ್ರತಂಡ ಮಣೆ ಹಾಕಿದೆ. ಇದನ್ನೂ ಓದಿ:ರಶ್ಮಿಕಾ ಅಪ್ಪನಿಗೆ ಇಲ್ಲದಿರೋ ತೊಂದರೆ ನಿಮ್ಮಗ್ಯಾಕೆ- ಟ್ರೋಲಿಗರಿಗೆ ಸಲ್ಮಾನ್ ಖಾನ್ ತಿರುಗೇಟು
ಇನ್ನೂ ಕನ್ನಡಿಗ ಕಿಶೋರ್ ಬಹುಭಾಷಾ ನಟನಾಗಿ ಸೈ ಎನಿಸಿಕೊಂಡಿದ್ದಾರೆ. ಯಾವುದೇ ಭಾಷೆಯ ಸಿನಿಮಾ ಆಗಿದ್ರೂ ಪಾತ್ರ ಕೊಟ್ಟರೂ ಕಿಶೋರ್ ಆ ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತಾರೆ. ಆ ಪಾತ್ರವೇ ತಾವಾಗಿ ನಟಿಸುತ್ತಾರೆ. ಇದೀಗ ‘ಸಿಕಂದರ್’ ಸಿನಿಮಾದಲ್ಲಿ ಅವರು ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ.
ಸಲ್ಮಾನ್ ಖಾನ್ ಮುಂದೆ ಕಿಶೋರ್ ತೊಡೆ ತಟ್ಟಿದ್ದಾರೆ. ಟ್ರೈಲರ್‌ನಲ್ಲಿ ಚಿಕ್ಕದಾಗಿ ಸಲ್ಮಾನ್ ಮತ್ತು ಕಿಶೋರ್ ಫೈಟ್ ಸೀನ್ ತೋರಿಸಲಾಗಿದೆ. ಇಬ್ಬರ ನಡುವೆ ಜುಗಲ್‌ಬಂದಿ ಇರೋದು ಖಾತ್ರಿಯಾಗಿದೆ. ಈಗಾಗಲೇ ಟ್ರೈಲರ್ ನೋಡಿ ಮೆಚ್ಚಿರೋ ಅಭಿಮಾನಿಗಳಿಗೆ ಸಿನಿಮಾದಲ್ಲಿ ಕಿಶೋರ್ ಪಾತ್ರ ಹೇಗಿರಲಿದೆ? ಎಂಬುದರ ಬಗ್ಗೆ ಕುತೂಹಲವಿದೆ.
ಇನ್ನೂ ಈ ಚಿತ್ರದಲ್ಲಿ ‘ಮಗಧೀರ’ ನಟಿ ಕಾಜಲ್, ‘ಬಾಹುಬಲಿ’ ಖ್ಯಾತಿಯ ಕಟ್ಟಪ್ಪ ಅಲಿಯಾಸ್ ಸತ್ಯರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಸೌತ್‌ನ ಖ್ಯಾತ ನಿರ್ದೇಶಕ ಎ.ಆರ್ ಮುರುಗದಾಸ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದೇ ಮಾ.30ರಂದು ‘ಸಿಕಂದರ್’ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಸಿನಿಮಾ ನೋಡಲು ಕನ್ನಡದ ಪ್ರೇಕ್ಷಕರು ಕೂಡ ಎದುರು ನೋಡ್ತಿದ್ದಾರೆ.