ಬೆಂಗಳೂರು: ಬಾವುಟದ ವಿಷಯ ಎಳೆದು ತಂದು ಕನ್ನಡಿಗರಿಗೆ ಕೇಂದ್ರದ ಮೇಲೆ ಕೋಪತರಿಸಲು ರಾಜ್ಯಸರ್ಕಾರ ಮುಂದಾಗುತ್ತಿದೆ ಎಂದು ನಟ ಜಗ್ಗೇಶ್ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ನಾಡ ಧ್ವಜ ರೂಪಿಸಲು ರಾಜ್ಯ ಸರ್ಕಾರ ಮುಂದಾಗುತ್ತಿರುವುದನ್ನು ವಿರೋಧಿಸಿ ನಟ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
ಟ್ವೀಟ್ ಮಾಡಿರೋ ನವರಸ ನಾಯಕ, ಇದು ಚುನಾವಣೆ ಹತ್ತಿರವಿರಬೇಕಾದರೆ ನಡೆಯುವ ವ್ಯೂಹ. ತಮ್ಮ ಸರ್ಕಾರದ ಹುಳುಕು ಮುಚ್ಚಲು ಹಾಗೂ ಜನರ ಗಮನ ಬೇರೆಡೆ ಸೆಳೆಯಲು ಬಾವುಟದ ಭಾವನೆಯನ್ನು ಬಳಸುತ್ತಿದ್ದಾರೆ. ಇದು ಚಾಣಕ್ಯ ತಂತ್ರದ ರಾಜಕೀಯ ದಾಳ ಅಂತ ಕಿಡಿಕಾರಿದ್ದಾರೆ.
Advertisement
ಕನ್ನಡದ ಬಾವುಟ ವಿಷಯತಂದು ಕನ್ನಡಿಗರಿಗೆ ಕೇಂದ್ರದಮೇಲೆ ಕೋಪತರಿಸುವ ಹುನ್ನಾರ ಭಾಸವಾಗುತ್ತಿದೆ!ಅದುಚುನಾವಣೆ ಹತ್ತಿರ ಇರಬೇಕಾದರೆ ನಡೆಯುವವ್ಯೊಹ! #BSYBJP #Bjpkarnataka
— ನವರಸನಾಯಕ ಜಗ್ಗೇಶ್ (@Jaggesh2) July 19, 2017
Advertisement
ತಮ್ಮ ಸರಕಾರದ ಹುಳುಕು ಮುಚ್ಚಲು! ಜನರ ಗಮನ ಬೇರೆಡೆ ಸೆಳೆಯಲು ಭಾವನಾತ್ಮಕ ಭಾವನೆಯ ಕನ್ನಡದ ಬಾವುಟ ಬಳಸುತ್ತಿದ್ದಾರೆ!ಇದು ಚಾಣಿಕ್ಯತಂತ್ರದ ರಾಜಕೀಯದಾಳ! #Bjpkarnataka
— ನವರಸನಾಯಕ ಜಗ್ಗೇಶ್ (@Jaggesh2) July 19, 2017
Advertisement
ತಾಯಿಚಾಮುಂಡಿ ನಾಡದೇವತೆ ಅವಳ ಹಣೆಯ ಕೆಂಪುಕುಂಕುಮ ಗಧ್ಧದ ಮೇಲಿನ ಹರಿಶಿನ ತೆಗೆದು ಮಾಡಿದ್ದೆ ಕನ್ನಡದ ದ್ವಜ "ಹಳದಿಕೆಂಪು"ಹೆಮ್ಮೆಯ ಕನ್ನಡಿಗರ ಬಾವುಟ!ಸಿರಿಗನ್ನಡಂಗೆಲ್ಗೆ. https://t.co/qf3SEthwOz
— ನವರಸನಾಯಕ ಜಗ್ಗೇಶ್ (@Jaggesh2) July 19, 2017
ಹೆಗಲಮೇಲೆ ಕನ್ನಡ ಶಾಲು ಹಾಕಿಕೊಳ್ಳುವ ಮೊದಲು ಕನ್ನಡಕ್ಕೆ ತನ್ನಜೀವನ ಅರ್ಪಿಸಿ ಮಕ್ಕಳನ್ನು ಕಳೆದುಕೊಂಡು ಬರಿಗೈಯಲ್ಲಿ ಅಂತ್ಯಕಂಡ ಮಾ.ರಾಮಮೂರ್ತಿ ಚರಿತ್ರೆ ಓದಿ #ಕನ್ನಡಿಗ
— ನವರಸನಾಯಕ ಜಗ್ಗೇಶ್ (@Jaggesh2) July 19, 2017