ಕ್ಯಾನ್ಬೆರಾ: ಕಾಡು ಪ್ರಾಣಿಯಾಗಿರುವ ಕಾಂಗರೂವನ್ನು(Kangaroo) ಸಾಕು ಪ್ರಾಣಿಯಾಗಿ(Man) ಸಾಕುತ್ತಿದ್ದ 77 ವರ್ಷದ ವ್ಯಕ್ತಿಯನ್ನು ಕಾಂಗರೂವೇ ಕೊಂದಿರಬಹುದು ಎಂಬ ಶಂಕೆಯನ್ನು ಆಸ್ಟ್ರೇಲಿಯಾ ಪೊಲೀಸರು ವ್ಯಕ್ತಪಡಿಸಿದ್ದಾರೆ.
86 ವರ್ಷಗಳಲ್ಲಿಯೇ ಇಂತಹದೊಂದು ಘಟನೆ ಮೊದಲ ಬಾರಿಗೆ ವರದಿಯಾಗಿದೆ. ಪಶ್ಚಿಮ ಆಸ್ಟ್ರೇಲಿಯಾದ(Australia) ಜನ ನಿಭೀಡ ಪ್ರದೇಶ ದಕ್ಷಿಣ ಪಟ್ಟಣವಾದ ರೆಡ್‍ಮಂಡ್‍ನಲ್ಲಿ ವ್ಯಕ್ತಿ ಗಂಭೀರ ಗಾಯಗಳೊಂದಿಗೆ ಪತ್ತೆಯಾಗಿದ್ದು, ವ್ಯಕ್ತಿ ಮೇಲೆ ಕಾಂಗರೂ ದಾಳಿ ನಡೆಸಿರಬಹುದು ಎಂದು ಪೊಲೀಸರು(Police) ತಿಳಿಸಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಬೆಂಕಿ ಅವಘಡ – 8 ಮಂದಿ ದುರ್ಮರಣ
Advertisement
Advertisement
ತೀವ್ರ ಗಾಯದಿಂದ ಬಳಲುತ್ತಿದ್ದರಿಂದ ಆಂಬುಲೆನ್ಸ್(Ambulance) ಕರೆದೊಯ್ದು ವ್ಯಕ್ತಿಯನ್ನು ಹೊತ್ತೊಯ್ಯುತ್ತಿದ್ದ ವೇಳೆ ಆತ ಸಾವನ್ನಪ್ಪಿದ್ದಾನೆ. ಇದೇ ಸಂದರ್ಭದಲ್ಲಿ ಕಾಂಗರೂ ಆಂಬುಲೆನ್ಸ್‌ಗೆ ಅಡ್ಡ ಕೂಡ ಹಾಕಿತ್ತು. ಆದರೆ ತುರ್ತು ಪರಿಷ್ಥಿತಿ ಇದ್ದಿದ್ದರಿಂದ ಕಾಂಗರೂಗೆ ಗುಂಡು ಹಾರಿಸಿ ಕೊಲ್ಲಬೇಕಾಯಿತು. ಈ ಕಾಂಗರೂವನ್ನು ವ್ಯಕ್ತಿ ಸಾಕು ಪ್ರಾಣಿಯಾಗಿ ಸಾಕುತ್ತಿದ್ದ ಎಂದು ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಆಹಾರ ಪದಾರ್ಥಗಳು ದುಬಾರಿ – ಚಿಲ್ಲರೆ ಹಣದುಬ್ಬರ ಶೇ.7ಕ್ಕೆ ಏರಿಕೆ
Advertisement
Advertisement
ಗಂಡು ಪಾಶ್ಚಾತ್ಯ ಬೂದು ಬಣ್ಣದ(Western Grey) ಕಾಂಗರೂಗಳು 2.2 ಮೀಟರ್ (ಏಳು ಅಡಿಗಿಂತ ಹೆಚ್ಚು) ಉದ್ದ ಮತ್ತು 70 ಕೆಜಿ (154 ಪೌಂಡ್) ವರೆಗೆ ಬೆಳೆಯುತ್ತದೆ.1936ರಲ್ಲಿ ಕೊನೆಯದಾಗಿ ಕಾಂಗರೂ ವ್ಯಕ್ತಿಯನ್ನು ಕೊಂದಿತ್ತು. 38 ವರ್ಷದ ವ್ಯಕ್ತಿ ವಿಲಿಯಂ ಕ್ರೂಕ್‍ಶಾಂಕ್ ಎಂಬವರು ಕಾಮಗರೂ ದಾಳಿಗೆ ಬಲಿಯಾಗಿದ್ದರು. ದೊಡ್ಡ ಕಾಂಗರೂನಿಂದ ಎರಡು ನಾಯಿಗಳನ್ನು ರಕ್ಷಿಸಲು ಪ್ರಯತ್ನಿಸಿದ ವೇಳೆ ವ್ಯಕ್ತಿ ಮೇಲೆ ಕಾಂಗರೂ ಅಟ್ಯಾಕ್ ಮಾಡಿ ಕೊಂದಿತ್ತು ಎಂದು ಆಸ್ಟ್ರೇಲಿಯಾದ ಮಾಧ್ಯಮವೊಂದು ವರದಿ ಮಾಡಿದೆ.