ಬಾಲಿವುಡ್ ಸಿಲಿಬ್ರೆಟಿಗಳಿಗಾಗಿ ಬಿಟೌನ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾ ಈದ್ ಪಾರ್ಟಿಯನ್ನು ಆಯೋಜನೆ ಮಾಡಿದ್ದರು. ಕೃತಿ ಕರಬಂಧ, ಸನ್ನಿ ಲಿಯೋನ್, ಜಾಕ್ವಲಿನ್ ಫರ್ನಾಂಡಿಸ್, ಏಕ್ತಾ ಕಪೂರ್, ಸೋನಾಕ್ಷಿ ಸಿನ್ಹಾ ಸೇರಿದಂತೆ ಬಾಲಿವುಡ್ ನ ಸಾಕಷ್ಟು ತಾರೆಯರು ಈ ಕೂಟದಲ್ಲಿ ಭಾಗಿಯಾಗಿದ್ದರು. ಆದರೆ, ಈದ್ ಪಾರ್ಟಿಯಲ್ಲಿ ಹೆಚ್ಚು ಮಿಂಚಿದ್ದು ಕಂಗನಾ ರಣಾವತ್. ಇದನ್ನೂ ಓದಿ : ಕೇಂದ್ರ ಸಚಿವ ಅನುರಾಗ್ ಠಾಕೂರ್ ಜತೆ ಸಿನಿರಂಗದ ಸಮಸ್ಯೆ ಚರ್ಚೆ
Advertisement
ಈದ್ ಆಚರಣೆಯಲ್ಲಿ ಇಡೀ ದೇಶವೇ ಸಂಭ್ರಮಿಸುತ್ತಿರುವಾಗ ಕಂಗನಾ ಕೂಡ ತುಸು ಹೆಚ್ಚೇ ಸಂಭ್ರಮದಲ್ಲಿದ್ದರು. ಅದಕ್ಕೆ ಕಾರಣ ಸಲ್ಮಾನ್ ನೀಡಿದ್ದ ಆತಿಥ್ಯ. ಸಲ್ಮಾನ್ ಕುಟುಂಬ ಪಾರ್ಟಿ ಏರ್ಪಡಿಸಿದಾಗ ಸಾಮಾನ್ಯವಾಗಿ ಕಂಗನಾ ಭಾಗಿಯಾಗುವುದಿಲ್ಲ ಎನ್ನುವ ಮಾತಿತ್ತು. ಈ ಬಾರಿ ಅದನ್ನು ಸುಳ್ಳಾಗಿಸಿ ಈದ್ ಪಾರ್ಟಿಯಲ್ಲಿ ಅವರು ಪಾಲ್ಗೊಂಡರು. ಹಾಗಾಗಿ ಕಂಗನಾ ಕಾರಿನಿಂದ ಇಳಿಯುತ್ತಿದ್ದಂತೆಯೇ ಅಷ್ಟೂ ಕ್ಯಾಮೆರಾಗಳು ಅವರನ್ನು ಸುತ್ತುವರೆದವು. ಇದನ್ನೂ ಓದಿ : ಹಿರಿಯ ರಂಗಕರ್ಮಿ, ಏಣಗಿ ಬಾಳಪ್ಪನವರ ಪತ್ನಿ ಲಕ್ಷ್ಮೀಬಾಯಿ ನಿಧನ
Advertisement
Advertisement
ಈದ್ ಪಾರ್ಟಿಯಲ್ಲಿ ಅದೆಷ್ಟು ಉತ್ಸಾಹದಿಂದ ಪಾಲ್ಗೊಂಡರು ಅಂದರೆ, ವಿವಿಧ ಭಂಗಿಯಲ್ಲಿ ಕಂಗನಾ ಕ್ಯಾಮೆರಾಗಳಿಗೆ ಫೋಸ್ ನೀಡಿದರು. ಕುಣಿದರು, ಹಾಯ್ ಹೇಳಿದರು ಲವಲವಿಕೆಯಿಂದಲೇ ಎಲ್ಲರೊಂದಿಗೂ ಮಾತನಾಡುವ ಮೂಲಕ ಅಚ್ಚರಿ ಮೂಡಿಸಿದರು. ಅಲ್ಲದೇ, ಅನೇಕರನ್ನು ತಾವಾಗಿಯೇ ಹೋಗಿ ಮಾತನಾಡಿಸಿದ್ದಾರೆ. ಹಾಗಾಗಿ ಕಂಗನಾ ನಡೆಗೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಇದನ್ನೂ ಓದಿ : ಶಿವಣ್ಣನ ಹುಲಿ ಅವತಾರ: ಬೈರಾಗಿ ಹಾಡಿಗೆ ಭೀಮನ ಬಲ
Advertisement
ಬಿಳಿ ಬಣ್ಣದ ಶರರಾ ಧರಿಸಿದ್ದ ಕಂಗನಾ, ಮಿರಿ ಮಿರಿ ಮಿಂಚುವಂತಹ ಆಭರಣಗಳನ್ನು ಧರಿಸಿದ್ದರು. ದೊಡ್ಡ ಕಿವಿಯೋಲೆಗಳು ಕಂಗನಾ ಅವರ ನಗುವನ್ನು ಮತ್ತಷ್ಟು ಹೆಚ್ಚಿಸಿದ್ದವು. ತೀರಾ ಮೇಕಪ್ ಇಲ್ಲದ ಅವರ ಮುಖದಲ್ಲಿ ಸಾವಿರ ನವಿಲುಗಳು ಕುಣಿಯುತ್ತಿದ್ದವು. ತುಸು ಗ್ಲಾಮರ್ ಆಗಿಯೇ ಕಾಣಿಸುತ್ತಿದ್ದ ಕಂಗನಾ ಇದೇ ಮೊದಲ ಬಾರಿಗೆ ಸಲ್ಮಾನ್ ಪಾರ್ಟಿಗೆ ಆಗಮಿಸಿದ್ದು ಸಾರ್ಥಕ ಎನ್ನುವಂತಿತ್ತು ಅವರು ನಡೆ ಮತ್ತು ನುಡಿ.