ಲಕ್ನೋ: ಉತ್ತರ ಪ್ರದೇಶ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ಒಂದು ಜಿಲ್ಲೆ-ಒಂದು ಉತ್ಪನ್ನ ಕಾರ್ಯಕ್ರಮದ ಬ್ರಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಹೆಸರನ್ನು ಘೋಷಿಸಿದೆ. ಇದನ್ನೂ ಓದಿ: ಗಾಂಧಿ ಜಯಂತಿ ವಿಶೇಷ – ವಿಜಯಪುರದ ಗ್ರಾಮ ಸಭೆ ವೀಕ್ಷಣೆ ಮಾಡಲಿದ್ದಾರೆ ಮೋದಿ
ಶುಕ್ರವಾರ ನಟಿ ಕಂಗನಾ ರಣಾವತ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮನೆಗೆ ಭೇಟಿ ನೀಡಿದ್ದರು. ರಾಜ್ಯದ 75 ಜಿಲ್ಲೆಗಳಾದ್ಯಂತ ಉತ್ಪನ್ನ – ನಿರ್ದಿಷ್ಟ ಸಂಪ್ರದಾಯಿಕ ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರ ಒಂದು ಜಿಲ್ಲೆ-ಒಂದು ಉತ್ಪನ್ನ(ಒಡಿಒಪಿ) ಕಾರ್ಯಕ್ರಮವನ್ನು ಆರಂಭಿಸಿದೆ.
Advertisement
Advertisement
ಈ ಕುರಿತಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನವನೀತ್ ಸೆಹಗಲ್ ಟ್ವಿಟ್ಟರ್ನಲ್ಲಿ, ಖ್ಯಾತ ನಟಿ ಕಂಗನಾ ರಣಾವತ್ ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ಭೇಟಿಯಾದರು. ಅವರಿಗೆ ಒಡಿಒಪಿ ಉತ್ಪನ್ನವನ್ನು ನೀಡಿದರು. ಕಂಗನಾ ಅವರು ಒಡಿಒಪಿಗೆ ನಮ್ಮ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪತಿ ಇಲ್ಲದ ಮೇಲೆ ಬದುಕಿ ಪ್ರಯೋಜನವಿಲ್ಲ – ಡೆತ್ನೋಟ್ ಬರೆದು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
Advertisement
Famous Actress Kangana Ranawat met @myogiadityanath Hon’ble Chief Minister UP, who presented her with an @UP_ODOP product. Kangna ji will be our Brand Ambassador for ODOP @CMOfficeUP pic.twitter.com/XUJTiStRqv
— Navneet Sehgal (@navneetsehgal3) October 1, 2021
Advertisement
ಇದೇ ವೇಳೆ ಕಂಗನಾ ರಣಾವತ್ ಯೋಗಿ ಆದಿತ್ಯನಾಥ್ ಅವರು ಮಾಡುತ್ತಿರುವ ಕೆಲಸಗಳ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂತರ ಯೋಗಿ ಆದಿತ್ಯನಾಥ್ ಅವರು ಕೂಡ ಅಯೋಧ್ಯೆ ಮಂದಿರಕ್ಕೆ ಭೇಟಿ ನೀಡುವಂತೆ ಕಂಗನಾಗೆ ವಿನಂತಿಸಿದರು.