BollywoodLatestMain Post

ಧಾಕಡ್‌ ಚಿತ್ರ ರಿಲೀಸ್ ಹಿನ್ನೆಲೆ ಕಂಗನಾ ರಣಾವತ್ ಟೆಂಪಲ್ ರನ್

ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ `ಧಾಕಡ್’ ಸಿನಿಮಾ ತೆರೆಗೆ ಅಬ್ಬರಿಸಲು ಸಜ್ಜಾಗಿದೆ. `ಧಾಕಡ್’ ರಿಲೀಸ್‌ಗೂ ಮುನ್ನ ಕಂಗನಾ ರಣಾವತ್ ತಿರುಮಲಕ್ಕೆ ಬಂದು ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಕಂಗನಾ ತಿರುಮಲಕ್ಕೆ ಬಂದಿರೋ ಫೋಟೋಗಳು ಭಾರೀ ವೈರಲ್‌ ಆಗುತ್ತಿದೆ.

ಕಂಗನಾ ರಣಾವತ್ ನಟನೆಯ ಬಹುನಿರೀಕ್ಷಿತ ಚಿತ್ರ `ಧಾಕಡ್’ ಇದೇ ಮೇ 20ಕ್ಕೆ ತೆರೆಗೆ ಅಬ್ಬರಿಸಲು ಸಜ್ಜಾಗಿದೆ. ಚಿತ್ರದ ರಿಲೀಸ್ ಹಿನ್ನೆಲೆ ಕಂಗನಾ ಮತ್ತು ಚಿತ್ರತಂಡ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಇದೀಗ ತಿರುಮಲಕ್ಕೆ ಬಂದಿರುವ ಫೋಟೋಗಳು ವೈರಲ್ ಆಗಿವೆ. ಬಾಲಿವುಡ್ ನಟಿ ಕಂಗನಾ ಆಗಮನದ ಹಿನ್ನೆಲೆ ದೇವಸ್ಥಾನದ ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿತ್ತು.

 

View this post on Instagram

 

A post shared by Kangana Dhaakad (@kanganaranaut)

`ಧಾಕಡ್’ ಚಿತ್ರತಂಡದೊಂದಿಗೆ ತಿರುಪತಿ ದೇವರಿಗೆ ಪೂಜೆ ಸಲ್ಲಿಸಿದ ಕಂಗನಾ ಅವರು ಆರ್ಶೀವಾದ ಪಡೆದುಕೊಂಡಿದ್ದಾರೆ. ಸಹೋದರಿ ರಂಗೋಲಿ ಚಂಡೇಲ್ ಸೇರಿದಂತೆ ಕುಟುಂಬದ ಸದಸ್ಯರು ಮತ್ತು ಆಪ್ತರ ಜತೆ ದೇವರ ದರ್ಶನ ಪಡೆದಿದ್ದಾರೆ. ಬಾಲಿವುಡ್‌ನಲ್ಲಿ ಸೌತ್ ರಂಗದ ಸಿನಿಮಾಗಳು ಹೆಚ್ಚು ಸೌಂಡ್‌ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಿಂದಿಯ ಯಾವ ಚಿತ್ರ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಮಾಡುವಲ್ಲಿ ಸೋತಿದೆ. ಹಾಗಾಗಿ ಸಹಜವಾಗಿ `ಧಾಕಡ್’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ಹಾಗಾಗಿ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿ ಕಂಗನಾ ಮತ್ತು ಟೀಮ್ ದೇವರ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ರಾಗಿಣಿ ಮದುವೆಯಲ್ಲಿ ಪಾಲ್ಗೊಂಡ ರಶ್ಮಿಕಾ ಮಂದಣ್ಣ: ಫ್ಲೈಟ್ ಡಿಲೆಯಾಗಿ ಒದ್ದಾಡಿದ ನಟಿ

 

View this post on Instagram

 

A post shared by Kangana Dhaakad (@kanganaranaut)

`ಧಾಕಡ್’ ಚಿತ್ರದ ಫಸ್ಟ್ ಲುಕ್ ಮತ್ತು ಟ್ರೇಲರ್‌ನಲ್ಲಿ ಸಖತ್ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿರೋ ಕಂಗನಾ ಟ್ಯಾಲೆಂಟ್ ನೋಡಿ ಇತ್ತೀಚೆಗೆ ಸಲ್ಮಾನ್ ಖಾನ್ ಟ್ರೇಲರ್ ಶೇರ್ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ರು. ರಿಲೀಸ್ ಬಳಿಕ ಅದೆಷ್ಟರ ಮಟ್ಟಿಗೆ ಸೌಂಡ್ ಮಾಡಬಹುದು ಅಂತಾ ಕಾದು ನೋಡಬೇಕಿದೆ.

Leave a Reply

Your email address will not be published.

Back to top button