ಬಾಲಿವುಡ್‌ನ ವಿವಾದಿತ ನಟಿ ಕಂಗನಾ ರಣಾವತ್ ಮತ್ತೆ ಸುದ್ದಿಯಲ್ಲಿ ಸುದ್ದಿಯಲ್ಲಿದ್ದಾರೆ. ಇಂದಿರಾ ಗಾಂಧಿ ಅವರ ಬಯೋಪಿಕ್‌ನಲ್ಲಿ ನಟಿಸುತ್ತಿರುವ ಬೆನ್ನಲ್ಲೇ ಕಂಗನಾ ಮುಂದಿನ ಸಿನಿಮಾ ಬಗ್ಗೆ ಅಪ್‌ಡೇಟ್ ಸಿಕ್ಕಿದೆ. ಉಗ್ರರಿಂದ ಹತ್ಯೆಯಾಗಿದ್ದ ಕಾಶ್ಮೀರಿ ಗಾಯಕಿಯ ಪಾತ್ರದಲ್ಲಿ ಕಂಗನಾ ಕಾಣಿಸಿಕೊಳ್ಳಲಿದ್ದಾರೆ.

ಮಧುರ್ ಭಂಡಾರ್ಕರ್ ಈಗ ಉಗ್ರರಿಂದ ಹತ್ಯೆಯಾಗಿದ್ದ ಕಾಶ್ಮೀರಿ ಗಾಯಕಿಯ ಕಥೆಯನ್ನ ತೆರೆಯ ಮೇಲೆ ತೋರಿಸಲು ಸಜ್ಜಾಗಿದ್ದಾರೆ. ಈ ಪಾತ್ರಕ್ಕೆ ಕಂಗನಾ ಸೂಕ್ತ ಎಂದೇನಿಸಿ ನಟಿಯ ಬಳಿ ಮಾತನಾಡಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಕಾಶ್ಮೀರ ಇನ್ನಷ್ಟು ಕಥೆ ಹೊರ ಬೀಳೋದು ಗ್ಯಾರೆಂಟಿ ಅಂತಿದೆ ಬಿಟೌನ್ ಬಳಗ. ಅಷ್ಟಕ್ಕೂ ಈ ಸಿನಿಮಾ ಬಗ್ಗೆ ಮಧುರ್ ಮತ್ತು ಕಂಗನಾ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.


