ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್, ರಾಜಕಾರಣಕ್ಕೆ (Politics) ಪ್ರವೇಶ ಮಾಡುತ್ತಾರಾ? ಮುಂದಿನ ಲೋಕಸಭಾ (Lok Sabha) ಚುನಾವಣೆಯಲ್ಲಿ (Elections) ಭಾಗಿ ಆಗ್ತಾರಾ ಇಂಥದ್ದೊಂದು ಪ್ರಶ್ನೆ ಎದುರಾಗಿದೆ. ಅವರ ನಟನೆಯ ತೇಜಸ್ ಸಿನಿಮಾ ರಿಲೀಸ್ ಬೆನ್ನಲ್ಲೇ ಕಂಗನಾ ದ್ವಾರಕಾಗೆ ಬಂದಿಳಿದಿದ್ದಾರೆ. ದ್ವಾರಕಾಧೀಶನ ದರ್ಶನ ಪಡೆದು, ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಶ್ರೀಕೃಷ್ಣನ ಆಶೀರ್ವಾದ ನನ್ನ ಮೇಲೆ ಇದ್ದರೆ, ನಾನೂ ಕೂಡ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಮಾಧ್ಯಮದವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಕಂಗನಾ ರಾಜಕೀಯಕ್ಕೆ ಬರಲಿದ್ದಾರೆ. ಜೊತೆಗೆ ಅಭಿಮಾನಿಗಳ ಆಸೆಯವನ್ನೂ ವ್ಯಕ್ತಪಡಿಸಿದ್ದಾರೆ.
ಗೆಲ್ಲಲಿಲ್ಲ ತೇಜಸ್
ಕಂಗನಾ ರಣಾವತ್ (Kangana Ranaut) ಅವರ ನಿರೀಕ್ಷಿತ ಸಿನಿಮಾ ತೇಜಸ್ (Tejas) ಕೂಡ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿದೆ. ಬಾಲಿವುಡ್ ಬಾಕ್ಸ್ ಆಫೀಸ್ ಪಂಡಿತರ ಪ್ರಕಾರ ನವೆಂಬರ್ 1ರಂದು ಈ ಸಿನಿಮಾ ಗಳಿಕೆ ಮಾಡಿದ್ದು ಕೇವಲ 5 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಂಗನಾ ಅವರ ಚಿತ್ರಗಳು ಸೋಲು ಅನುಭವಿಸುತ್ತಿರುವುದರಿಂದ ಸಹಜವಾಗಿಯೇ ಕಂಗನಾ ಕಂಗಾಲು ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ಮೊನ್ನೆಯಷ್ಟೇ ತೇಜಸ್ ಸಿನಿಮಾವನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯ ನಾಥ್ ವೀಕ್ಷಿಸಿದ್ದರು. ಸಿನಿಮಾ ನೋಡಿ ಭಾವುಕರಾಗಿದ್ದರು. ಆ ಫೋಟೋವನ್ನು ಕಂಗನಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಆದರೆ, ಅಂದುಕೊಂಡಷ್ಟು ಸಿನಿಮಾ ಜನರಿಗೆ ತಲುಪಿಲ್ಲ ಎನ್ನುವುದು ಬಿಟೌನ್ ಲೆಕ್ಕಾಚಾರ.
ತೇಜಸ್ ಸಿನಿಮಾದ ಬಗ್ಗೆ ಕಂಗನಾ ಅವರಿಗೆ ಭಾರೀ ನಿರೀಕ್ಷೆ ಇತ್ತು. ವಾಯುಪಡೆಯ ಅಧಿಕಾರಿ ತೇಜಸ್ ಗಿಲ್ ಪಾತ್ರವನ್ನು ಕಂಗನಾ ನಿರ್ವಹಿಸಿದ್ದರಿಂದ ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಬರಲಿದೆ ಎಂದು ಅಂದಾಜಿಸಲಾಗಿತ್ತು. ಬಹುಶಃ ಆ ಅಂದಾಜು ತಪ್ಪಾಗಿದೆ. ಸಿನಿಮಾ ಬಿಡುಗಡೆ ಐದು ದಿನಗಳು ಕಳೆದರೂ, ಬಾಕ್ಸ್ ಆಫೀಸಿನಲ್ಲಿ ಮಾತ್ರ ಅಷ್ಟೇ ಚೇತರಿಕೆ ಕಂಡಿಲ್ಲ. ಮುಂದಿನ ದಿನಗಳಲ್ಲಿ ಉತ್ತಮವಾಗುತ್ತಾ ಕಾದು ನೋಡಬೇಕು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]