ಖಾಸಗಿ ಸಮಾರಂಭಗಳಲ್ಲಿ ದುಡ್ಡಿಗಾಗಿ ಡ್ಯಾನ್ಸ್ ಮಾಡುವ ಸಾಕಷ್ಟು ಕಲಾವಿದರು ಇದ್ದಾರೆ. ಮದುವೆ, ಬರ್ತಡೇ ಪಾರ್ಟಿ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ನಟ ನಟಿಯರು ದುಡ್ಡು ಪಡೆದು ನೃತ್ಯ ಮಾಡುತ್ತಾರೆ. ಆದರೆ, ನಾನು ಯಾವತ್ತೂ ಆ ರೀತಿಯಲ್ಲಿ ಡ್ಯಾನ್ಸ್ (Dance) ಮಾಡಿಲ್ಲ ಎಂದು ಕಂಗನಾ ರಣಾವತ್ (Kangana Ranaut) ಹೇಳಿಕೊಂಡಿದ್ದಾರೆ. ಆ ರೀತಿಯಲ್ಲಿ ಕುಣಿಯುವ ಕಲಾವಿದರಿಗೆ ಅವರು ಟಾಂಗ್ ಕೊಟ್ಟಿದ್ದಾರೆ.
ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರ ವಿಡಿಯೋವನ್ನು ಶೇರ್ ಮಾಡಿರುವ ಕಂಗನಾ, ತಮ್ಮ ನೆಚ್ಚಿನ ಲತಾ ಅವರ ಬಗ್ಗೆ ಕೆಲವು ಸಾಲುಗಳನ್ನೂ ಅವರು ಬರೆದಿದ್ದಾರೆ. ಖಾಸಗಿ ಸಮಾರಂಭವೊಂದರಲ್ಲಿ ಲತಾ ಅವರಿಗೆ ಹಾಡಲು ಕೇಳಿಕೊಳ್ಳಲಾಗಿತ್ತು. ಆ ಹಾಡಿಗೆ ದೊಡ್ಡಮೊತ್ತದಲ್ಲೇ ಹಣ ನೀಡುವುದಾಗಿಯೂ ಆಯೋಜಕರು ಹೇಳಿದ್ದರು. ಆದರೆ, ಹಾಡಲು ಲತಾ ನಿರಾಕರಿಸಿದರಂತೆ. ದುಡ್ಡಿಗಾಗಿ ನಾನು ಹಾಡಲಾರೆ ಎಂದು ಹೇಳಿದ್ದರಂತೆ. ಇದನ್ನೂ ಓದಿ: ಸಾನ್ಯ ಎಲಿಮಿನೇಷನ್ ನಂತರ ರೂಪೇಶ್ ಶೆಟ್ಟಿ ಎನರ್ಜಿ ಡಬಲ್ ಆಯ್ತು: ಅನುಪಮಾ
ಲತಾ ಅವರ ಮಾತುಗಳನ್ನು ಉಲ್ಲೇಖ ಮಾಡಿರುವ ಕಂಗನಾ, ನನಗೆ ಲತಾ ಅವರು ಯಾವತ್ತಿಗೂ ಆದರ್ಶ. ಅವರ ಮಾತನ್ನು ಒಪ್ಪುತ್ತೇನೆ ಮತ್ತು ಪಾಲಿಸಿಕೊಂಡು ಬಂದಿದ್ದೇನೆ ಎಂದಿರುವ ಕಂಗನಾ, ಈವರೆಗೂ ಅವರು ಯಾವತ್ತೂ ಹಣಕ್ಕಾಗಿ ಮದುವೆಯಲ್ಲ, ಪಾರ್ಟಿಯಲ್ಲಿ ಬರ್ತಡೇ ಸಮಾರಂಭದಲ್ಲಿ ನೃತ್ಯ ಮಾಡಿಲ್ಲವೆಂದು ಘೋಷಿಸಿಕೊಂಡಿದ್ದಾರೆ. ಈ ಮೂಲಕ ನೃತ್ಯ ಮಾಡುವವರಿಗೆ ತಿವಿದಿದ್ದಾರೆ.