ತಮಗೆ ಸಿನಿಮಾದಲ್ಲಿ ಪಾತ್ರ ಕೊಡಿಸುವುದಾಗಿ ಹೇಳಿ ಮೋಸ ಮಾಡಿದ್ದಾರೆ ಎಂದು ಬಿಜೆಪಿ ನಾಯಕ ಮಯಾಂಕ್ ಮಧುರ್(Mayank Madhur) ಆರೋಪ ಮಾಡಿದ್ದಾರೆ. ಈ ಕುರಿತು ಅವರು ಕಾನೂನು ಕ್ರಮಕ್ಕೂ ಮುಂದಾಗಿದ್ದಾರೆ. ಮಾಧ್ಯಮವೊಂದರಲ್ಲಿ ಮಾತನಾಡಿರುವ ಮಾಯಂಕ್, ‘ಕಂಗನಾ ನನ್ನಿಂದ ಕೆಲಸ ಮಾಡಿಸಿಕೊಂಡು ಪಾತ್ರ ಕೊಡಿಸದೇ ಮೊಸ (cheating) ಮಾಡಿದರು’ ಎಂದಿದ್ದಾರೆ.
ಸದ್ಯ ಕಂಗನಾ ರಣಾವತ್ (Kangana Ranaut) ಅವರು ತೇಜಸ್ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಮೊನ್ನೆಯಷ್ಟೇ ಈ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಘೋಷಣೆ ಮಾಡಿದ್ದರು. ಪೈಲಟ್ ತೇಜಸ್ ಗಿಲ್ ಅವರ ಜೀವನವನ್ನು ಆಧರಿಸಿದ ಸಿನಿಮಾದಲ್ಲಿ ಕಂಗನಾ, ತೇಜಸ್ ಅವರ ಪಾತ್ರವನ್ನು ಮಾಡಿದ್ದಾರೆ. ಈ ಪಾತ್ರದ ಚಿತ್ರೀಕರಣಕ್ಕಾಗಿ ರಕ್ಷಣಾ ಸಚಿವರನ್ನು ಭೇಟಿ ಮಾಡಿಸಲು ಮಯಾಂಕಾಗೆ ಕಂಗನಾ ಕೇಳಿದ್ದರಂತೆ. ಮಾಯಂಕ್ ಅದರ ವ್ಯವಸ್ಥೆಯನ್ನೂ ಮಾಡಿದ್ದರಂತೆ. ಇದನ್ನೂ ಓದಿ:ಪಡ್ಡೆಹುಡುಗರ ನಿದ್ದೆಗೆಡಿಸಿದ ‘ನಾಗಿಣಿ 2’ ಖ್ಯಾತಿಯ ನಮ್ರತಾ
ತೇಜಸ್ (Tejas) ಸಿನಿಮಾದ ಶೂಟಿಂಗ್ ನ ಅನುಮತಿ ಪಡೆಯುವುದಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿಸಿದರೆ, ಮಯಾಂಕ್ ಅವರಿಗೆ ಆ ಸಿನಿಮಾದಲ್ಲಿ 15 ನಿಮಿಷಗಳ ಕಾಲ ತೆರೆಯ ಮೇಲಿರುವ ಪಾತ್ರವನ್ನು ಕೊಡಿಸುವುದಾಗಿ ಭರವಸೆ ನೀಡಿದ್ದರಂತೆ. ರಕ್ಷಣಾ ಸಚಿವರ ಜೊತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನೂ ಮಯಾಂಕ್ ಭೇಟಿ ಮಾಡಿಸಿದ್ದರಂತೆ. ಆದರೆ, ಕಂಗನಾ ಅಂದುಕೊಂಡಂತೆ ನಡೆದುಕೊಳ್ಳಲಿಲ್ಲ ಎಂದಿದ್ದಾರೆ.
ಕಂಗನಾ ಅವರನ್ನು ಮಗಳ ರೀತಿಯಲ್ಲಿ ನೋಡುತ್ತಿದ್ದೆ. ಅವರು ಪಾತ್ರವನ್ನು ಕೊಡಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ, ಅವರು ಮೋಸ ಮಾಡಿದರು. ಇದರ ವಿರುದ್ಧ ಕಾನೂನು ಮೊರೆ ಹೋಗಲು ಸಾಧ್ಯವಾ ಎಂದು ಯೋಚಿಸುತ್ತಿದ್ದೇನೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
Web Stories