ಈವರೆಗೂ ಬಾಲಿವುಡ್ ನಲ್ಲಿನ ನೆಪೋಟಿಸಂ (Nepotism) ಬಗ್ಗೆ ಮಾತನಾಡುತ್ತಿದ್ದರು ನಟಿ ಕಂಗನಾ ರಣಾವತ್. ಹಿಂದಿ ಸಿನಿಮಾ ರಂಗದಲ್ಲಿನ ನೆಪೋಟಿಸಂ ಬಗ್ಗೆ ಸಾಕಷ್ಟು ಬಾರಿ ಅವರು ಮಾತನಾಡಿದ್ದಾರೆ. ಅದರಿಂದಾಗಿ ಕಷ್ಟವನ್ನೇ ಎದುರಿಸಿದ್ದಾರೆ. ಇದೀಗ ರಾಜಕಾರಣಕ್ಕೂ ಎಂಟ್ರಿ ಕೊಟ್ಟಿರುವ ಕಂಗನಾ, ಇಲ್ಲಿನ ನೆಪೋಟಿಸಂ ಬಗ್ಗೆ ಟೀಕಿಸಿದ್ದಾರೆ.
Advertisement
ಮೊದಲಿನಿಂದಲೂ ನಾನು ಕಾಂಗ್ರೆಸ್ ಅನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಅದಕ್ಕೆ ಕಾರಣ ಕುಟುಂಬ ರಾಜಕಾರಣ. ರಾಹುಲ್ ಗಾಂಧಿ (Rahul Gandhi) ಹೆಸರನ್ನು ನೇರವಾಗಿಯೇ ತಗೆದುಕೊಳ್ಳುತ್ತೇನೆ. ಈ ನೆಪೋಟಿಸಂ ಅಂತ್ಯವಾಗಬೇಕು. ಎಲ್ಲರಿಗೂ ಅವಕಾಶ ಸಿಗಬೇಕು ಎಂದು ಕಂಗನಾ ರಣಾವತ್ ಕಟು ನುಡಿಯಲ್ಲೇ ಟೀಕೆ ಮಾಡಿದ್ದಾರೆ.
Advertisement
Advertisement
ಸದ್ಯ ಲೋಕಸಭಾ ಅಖಾಡದಲ್ಲಿ ಕಸರತ್ತು ಮಾಡುತ್ತಿದ್ದಾರೆ ನಟಿ ಕಂಗನಾ ರಣಾವತ್. ಇದೇ ವೇಳೆಯಲ್ಲಿ ಮಾಧ್ಯಮಗಳ ಜೊತೆಯೂ ಅವರು ಮಾತನಾಡಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲಿನ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ಸೂಪರ್ ಸ್ಟಾರ್ ಅನಿಸಿಕೊಂಡ ಶಾರುಖ್ (Shahrukh Khan) ಕೂಡ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಸೋಲುಂಡಿದ್ದಾರೆ. ನಾನು ಮತ್ತು ಶಾರುಖ್ ಈ ಯುಗದ ಕೊನೆಯ ಸೂಪರ್ ಸ್ಟಾರ್ಸ್ ಎಂದು ಬಣ್ಣಿಸಿಕೊಂಡಿದ್ದಾರೆ.
Advertisement
ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ಮಿಂಚಿನ ಸಂಚಾರವನ್ನೂ ಕಂಗನಾ ಕೈಗೊಂಡಿದ್ದಾರೆ. ಸಖತ್ ಚುರುಕಾಗಿ ಕೆಲಸ ಮಾಡುತ್ತಿದ್ದಾರೆ. ನಿನ್ನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರನ್ನು ಭೇಟಿ ಮಾಡಿ ತಮ್ಮ ಕ್ಷೇತ್ರದ ಬಗ್ಗೆ ಹಾಗೂ ರಾಜಕೀಯ ನಡೆಯ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ಮಾಹಿತಿಯನ್ನು ಸ್ವತಃ ಅವರೇ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಕೂಡ ಮಾಡಿಕೊಂಡಿದ್ದಾರೆ.
ಬಿಜೆಪಿ ತನ್ನ ಲೋಕಸಭಾ (Lok Sabha) ಚುನಾವಣೆಯ 5ನೇ ಪಟ್ಟಿ ಘೋಷಣೆ ಮಾಡಿ, ಈ ಪಟ್ಟಿಯಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut)ಗೆ ತವರು ರಾಜ್ಯ ಹಿಮಾಚಲ ಪ್ರದೇಶದ (Himachal Pradesh) ಮಂಡಿ (Mandi) ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ಕಂಗನಾ ಮಂಡಿ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿನ ಸ್ಥಳೀಯ ಮುಖಂಡರೊಂದಿಗೆ ಮಾತುಕತೆ ಕೂಡ ಆಡುತ್ತಿದ್ದಾರೆ.