ನಿನ್ನೆಯಷ್ಟೇ ಬಿಜೆಪಿ ತನ್ನ ಲೋಕಸಭಾ (Lok Sabha) ಚುನಾವಣೆಯ 5ನೇ ಪಟ್ಟಿ ಘೋಷಣೆ ಮಾಡಿದೆ. ಈ ಪಟ್ಟಿಯಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut)ಗೆ ತವರು ರಾಜ್ಯ ಹಿಮಾಚಲ ಪ್ರದೇಶದ (Himachal Pradesh) ಮಂಡಿ (Mandi) ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ಕಂಗನಾ ಮಂಡಿ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
- Advertisement -
ಹಲವು ತಿಂಗಳುಗಳಿಂದ ಕಂಗನಾ ರಣಾವತ್ ರಾಜಕೀಯಕ್ಕೆ ಬರುತ್ತಾರೆ ಎನ್ನುವ ಸುದ್ದಿ ಇತ್ತು. ಅವರು ಕೂಡ ಕೃಷ್ಣ ಕಣ್ಬಿಟ್ಟರೆ ರಾಜಕೀಯಕ್ಕೆ ಬರೋದು ದೊಡ್ಡ ವಿಷಯವೇ ಅಲ್ಲ ಎಂದೂ ಹೇಳಿದ್ದರು. ಜೊತೆಗೆ ರಾಜಕೀಯ ಮುಖಂಡರನ್ನು ಭೇಟಿ ಮಾಡುವ ಮೂಲಕ ಟಿಕೆಟ್ ಬೇಡಿಕೆಯನ್ನೂ ಇಟ್ಟಿದ್ದರು.
- Advertisement -
- Advertisement -
ಇದೀಗ ಕೊನೆಗೂ ಕಂಗನಾಗೆ ಟಿಕೆಟ್ ಘೋಷಣೆ ಆಗಿದೆ. ಇಂದಿನಿಂದ ಮಂಡಿ ಕ್ಷೇತ್ರದಾದ್ಯಂತ ನಟಿ ಪ್ರವಾಸ ಮಾಡಲಿದ್ದಾರೆ. ಇಂದು ಮಂಡಿ ಕ್ಷೇತ್ರದ ಮುಖಂಡರ ಜೊತೆ ಭೇಟಿಗಳು ನಿಗದಿ ಆಗಿವೆ. ಅಧಿಕೃತವಾಗಿ ಇಂದಿನಿಂದ ಸಕ್ರೀಯ ರಾಜಕಾರಣದಲ್ಲಿ ಕಂಗನಾ ಇರಲಿದ್ದಾರೆ.