BollywoodCinemaLatest

ಸ್ಟಾರ್ ಮಕ್ಕಳು ಬೆಂದ ಮೊಟ್ಟೆಗಳಂತೆ: ಬಾಲಿವುಡ್ ಸ್ಟಾರ್ಸ್‌ಗೆ ಕಂಗನಾ ಕ್ಲಾಸ್

`ಧಾಕಡ್’ ನಟಿ ಕಂಗನಾ ಸಿನಿಮಾಗಳ ವಿಚಾರಕ್ಕಿಂತ ಕಾಂಟ್ರವರ್ಸಿಯಿಂದಲೇ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಇದೀಗ ಕಂಗನಾ ಬಾಲಿವುಡ್ ನೆಪೋಟಿಸಂ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ಕಂಗನಾ ಬಾಲಿವುಡ್ ಸ್ಟಾರ್ ಮಕ್ಕಳ ಕಾಲೆಳೆದಿದ್ದಾರೆ.

ಕಂಗನಾ ನಟನೆಯ `ಧಾಕಡ್’ ಚಿತ್ರದ ಪ್ರಮೋಷನ್‌ನಲ್ಲಿ ಬ್ಯುಸಿಯಿದ್ದಾರೆ. ಈ ಪ್ರಮೋಷನ್ ಮಧ್ಯೆಯೂ ಕಂಗನಾ ಕೊಟ್ಟಿರೊ ಹೇಳಿಕೆ ಭಾರೀ ಸದ್ದು ಮಾಡ್ತಿದೆ. ಕೆಲವು ದಿನಗಳ ಹಿಂದೆ ಹಿಂದಿ ಚಿತ್ರಗಳನ್ನು ದಕ್ಷಿಣ ಭಾರತದ ಸಿನಿಮಾಗಳಿಗೆ ಹೋಲಿಸಿ ಮಾತನಾಡಿದ್ದರು. ಇದೀಗ ಬಿಗ್ ಸ್ಟಾರ್ ಮಕ್ಕಳ ಲೈಫ್‌ಸ್ಟೈಲ್ ಬಗ್ಗೆ ಮಾತನಾಡಿ, ಅವರು ನೋಡಲು ಬೆಂದ ಮೊಟ್ಟೆಗಳಂತೆ ವಿಚಿತ್ರವಾಗಿರುತ್ತಾರೆ ಅಂತಾ ಕಂಗನಾ ಟಾಂಗ್ ಕೊಟ್ಟಿದ್ದಾರೆ.

ಬಾಲಿವುಡ್ ಸ್ಟಾರ್‌ಗಳ ನೆಪೋಟಿಸಂ ಕುರಿತು ಕಂಗನಾ ಮಾತಾನಾಡಿದ್ದು, ಬಾಲಿವುಡ್ ಸ್ಟಾರ್ ಮಕ್ಕಳು ವಿದೇಶಕ್ಕೆ ಓದಲು ಹೋಗುತ್ತಾರೆ. ಇಂಗ್ಲೀಷ್‌ನಲ್ಲೇ ಮಾತಾನಾಡುತ್ತಾರೆ. ಹಾಲಿವುಡ್ ಚಿತ್ರಗಳನಷ್ಟೇ ನೋಡುತ್ತಾರೆ. ಅವರ ಲೈಫ್‌ಸ್ಟೈಲ್ ವಿಭಿನ್ನವಾಗಿರುತ್ತದೆ. ಅವರು ಅಭಿಮಾನಿಗಳ ಜತೆ ಕನೆಕ್ಟ್ ಆಗೋದಾದರೂ ಹೇಗೆ ಹೇಳಿ. ನಾನು ಅವರನ್ನು ಟ್ರೋಲ್ ಮಾಡುತ್ತಿಲ್ಲ. ಆದರೆ ಅವರು ನೋಡಲು ಬೆಂದ ಮೊಟ್ಟೆಗಳಂತೆ ವಿಚಿತ್ರವಾಗಿರುತ್ತಾರೆ ಎಂದು ಬಿಟೌನ್ ಸ್ಟಾರ್ ಮಕ್ಕಳನ್ನು ಅಪಹಾಸ್ಯ ಮಾಡಿದ್ದಾರೆ.

ಇನ್ನು ʻಪುಷ್ಪʼ ಚಿತ್ರದಲ್ಲಿನ ಅಲ್ಲು ಅರ್ಜುನ್ ಪಾತ್ರ ಕಂಪೇರ್ ಮಾಡಿ, ʻಪುಷ್ಪʼ ಚಿತ್ರವನ್ನು ಕಂಗನಾ ಹೊಗಳಿದ್ದಾರೆ. ಪ್ರತಿಯೊಬ್ಬ ಕೂಲಿ ಕಾರ್ಮಿಕನೂ ಕೂಡ ಅಲ್ಲು ಅರ್ಜುನ್ ಪಾತ್ರಕ್ಕೆ ಕನೆಕ್ಟ್ ಆಗುತ್ತೆ. ಇವತ್ತಿನ ಯಾವ ಹೀರೋ ಕೂಲಿ ಕಾರ್ಮಿಕನಂತೆ ಕಾಣಿಸಿಕೊಳ್ತಾರೆ ಹೇಳಿ ಎಂದು ಕಂಗನಾ ಬಾಲಿವುಡ್‌ ಸ್ಟಾರ್ ಮಕ್ಕಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಟಾಲಿವುಡ್‌ನತ್ತ `ವೇದ’ ಚಿತ್ರದ ನಾಯಕಿ ಗಾನವಿ ಲಕ್ಷ್ಮಣ

ಕಂಗನಾ ರಣಾವತ್ ನಟನೆಯ ಬಹುನಿರೀಕ್ಷಿತ ಸಿನಿಮಾ ʻಧಾಕಡ್ʼ ಇದೇ ಮೇ 20ಕ್ಕೆ ರಿಲೀಸ್ ಆಗುತ್ತಿದೆ. ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿರೋ ಕಂಗನಾರನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

Leave a Reply

Your email address will not be published.

Back to top button