Bengaluru CityCinemaKarnatakaLatestMain PostSandalwood

ಟಾಲಿವುಡ್‌ನತ್ತ `ವೇದ’ ಚಿತ್ರದ ನಾಯಕಿ ಗಾನವಿ ಲಕ್ಷ್ಮಣ

Advertisements

ಸ್ಯಾಂಡಲ್‌ವುಡ್‌ಗೆ `ಹೀರೊ’ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಗಾನವಿ ಲಕ್ಷ್ಮಣ. ಇದೀಗ ಶಿವರಾಜ್‌ಕುಮಾರ್ 125ನೇ ಸಿನಿಮಾ `ವೇದ’ ಚಿತ್ರಕ್ಕೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಬಳಿಕ ಟಾಲಿವುಡ್‌ನತ್ತ ಗಾನವಿ ಮುಖ ಮಾಡಿದ್ದಾರೆ.

ಕಿರುತೆರೆಯ ಸೂಪರ್ ಹಿಟ್ `ಮಗಳು ಜಾನಕಿ’ ಸೀರಿಯಲ್‌ನಿಂದ ಬಣ್ಣದ ಲೋಕಕ್ಕೆ ಪರಿಚಿತರಾದ ನಟಿ, `ನೆನಪಿನ ಹುಡುಗಿಯೇ’ ಅಂತಾ ಹೀರೋ ರಿಷಬ್ ಶೆಟ್ಟಿಗೆ ಹೀರೋಯಿನ್ ಆಗಿ ಗಮನ ಸೆಳೆದರು. ಈಗ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ ನಾಯಕಿಯಾಗಿ ವೇದಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. `ವೇದ’ ಚಿತ್ರದ ಜೊತೆಗೆ ತೆಲುಗಿನ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಹರ್ಷ ನಿರ್ದೇಶನದ `ವೇದ’ ಚಿತ್ರ ಇದೊಂದು 1960ರ ದಶಕದ ಕಥೆಯಾಗಿದ್ದು, ಶಿವರಾಜ್‌ಕುಮಾರ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. `ವೇದ’ ಚಿತ್ರದಲ್ಲಿ ನಟಿ ಗಾನವಿ ಮೃದು ಸ್ವಭಾದ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಳ್ಳಿ ಹುಡುಗಿಯ ಲುಕ್‌ನಲ್ಲಿ ಪುಷ್ಪ ಎಂಬ ಪಾತ್ರಕ್ಕೆ ಗಾನವಿ ಜೀವತುಂಬಿದ್ದಾರೆ. ಹೀರೋ ಚಿತ್ರದ ವಿರುದ್ಧ ಪಾತ್ರದಲ್ಲಿ ಚಾಲೆಂಜಿಂಗ್ ರೋಲ್‌ನಲ್ಲಿ ಈ ನಟಿ ಕಾಣಿಸಿಕೊಂಡಿದ್ದಾರೆ.

ಚಿಕ್ಕಮಗಳೂರಿನ ಪ್ರತಿಭೆ ಗಾನವಿ ಇದೀಗ `ವೇದ’ ಚಿತ್ರದ ಜೊತೆ ಟಾಲಿವುಡ್‌ನಲ್ಲೂ ಡೆಬ್ಯೂ ಮಾಡ್ತಿದ್ದಾರೆ. ಸ್ಟಾರ್ ನಟ ಜಗಪತಿ ಬಾಬು ಸಿನಿಮಾದಲ್ಲಿ ಆಶಿಶ್ ಗಾಂಧಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರೋ ಗಾನವಿ ಜತೆಗೆ ಮಮತಾ ಮೋಹನ್ ದಾಸ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತೆಲುಗಿನ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಸದ್ಯ ಚಿತ್ರದ ಕುರಿತು ಅಪ್‌ಡೇಟ್ ಸಿಗಲಿದೆ. ಇದನ್ನೂ ಓದಿ: ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್‌ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ

`ವೇದ’ ಚಿತ್ರದ ಪೋಸ್ಟರ್‌ನಲ್ಲಿ ಶಿವಣ್ಣ ಲುಕ್ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿತ್ತು. `ವೇದ’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ರಿಲೀಸ್ ಮುಂಚೆ ಸಾಕಷ್ಟು ವಿಚಾರಗಳಿಂದ ವೇದ ಚಿತ್ರದ ಕುರಿತು ನಿರೀಕ್ಷೆ ಹೆಚ್ಚಾಗುತ್ತಿದೆ.ಚಿತ್ರ ರಿಲೀಸ್ ಆದಮೇಲೆ ಶಿವರಾಜ್‌ಕುಮಾರ್ ಮತ್ತು ಗಾನವಿ ಜೋಡಿ ಅದೆಷ್ಟರ ಮಟ್ಟಿಗೆ ಮೋಡಿ ಮಾಡಬಹುದು ಅಂತಾ ಕಾದು ನೋಡಬೇಕಿದೆ.

Leave a Reply

Your email address will not be published.

Back to top button