ನಗರ ಭಾಗದಲ್ಲೂ ಕಂಬಳ ಕಹಳೆ- ಕಾಂತಾರದಿಂದ ಮತ್ತಷ್ಟು ರಂಗೇರಿದ ಹವಾ

Public TV
2 Min Read
KAMBALA 5

ಮಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳ ಒಂದು ಕಾಲದಲ್ಲಿ ಗ್ರಾಮೀಣ ಪ್ರದೇಶಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಇದೀಗ ನಗರ ಪ್ರದೇಶದಲ್ಲೂ ಕಂಬಳ (Kambala) ದ ಕಹಳೆ ಮೊಳಗಿದೆ. ಕಾಂತಾರ (Kantara) ಸಿನಿಮಾದ ಬಳಿಕವಂತೂ ಕಂಬಳ ಪ್ರೇಮಿಗಳ ಸಂಖ್ಯೆ ಜಾಸ್ತಿಯಾಗಿದೆ. ನಗರದೊಳಗೆ ನಡೆದ ಮಂಗಳೂರು ಕಂಬಳಕ್ಕೆ ಲಕ್ಷಾಂತರ ಮಂದಿ ಸೇರಿರೋದೇ ಇದಕ್ಕೆ ಸಾಕ್ಷಿ.

KAMBALA 3

ಹೌದು. ಹಿಂದೆಲ್ಲ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಕಂಬಳ ನಡೆಯುತ್ತಿದ್ದು, ಅದಕ್ಕೆ ಪುರುಷರು ಮಾತ್ರ ಹೋಗೋದು ವಾಡಿಕೆಯಾಗಿತ್ತು. ನಗರವಾಸಿಗಳು ಗ್ರಾಮೀಣ ಪ್ರದೇಶಕ್ಕೆ ಕಂಬಳ ವೀಕ್ಷಿಸಲು ಹೋಗುತ್ತಿರಲಿಲ್ಲ. ಹೀಗಾಗಿ ನಗರವಾಸಿಗಳು ಕಂಬಳದಿಂದ ವಂಚಿತರಾಗುತ್ತಿದ್ದರು. ಈ ಕಾರಣಕ್ಕಾಗಿಯೇ ಕಳೆದ ಆರು ವರ್ಷದ ಹಿಂದೆ ನಿವೃತ್ತ ಸೈನಿಕ ಬ್ರಿಜೇಶ್ ಚೌಟ ನೇತೃತ್ವದ ಯುವಕರ ತಂಡ ಮಂಗಳೂರಿನ ಬಂಗ್ರ ಕೂಳೂರು ಗೋಲ್ಡ್ ಫಿಂಚ್ ಸಿಟಿ (Gold Finch City) ಯಲ್ಲಿ ಕಂಬಳವನ್ನು ಆರಂಭಗೊಳಿಸಿದ್ದು, ಇದೀಗ ಲಕ್ಷಾಂತರ ಮಂದಿ ಸೇರೋ ಅದ್ದೂರಿ ಕಂಬಳವಾಗಿದೆ.

KAMBALA 1

ಆರನೇ ವರ್ಷದ ರಾಮ-ಲಕ್ಷ್ಮಣ ಜೋಡುಕರೆ ಕಂಬಳ ಈ ಬಾರಿಯೂ ಅದ್ದೂರಿಯಾಗಿ ನಡೆದಿದ್ದು, ದೇಶ ವಿದೇಶಗಳಿಂದ ಬಂದ ಲಕ್ಷಾಂತರ ಮಂದಿ ಕಂಬಳವನ್ನು ಪ್ರಶಂಸಿಸಿದರು. ತುಳುನಾಡಿನ ಜಾನಪದ ಕ್ರೀಡೆಯನ್ನು ಉಳಿಸಿ ಬೆಳೆಸಬೇಕು ಜೊತೆಗೆ ನಗರವಾಸಿಗಳೂ ಕಂಬಳದಿಂದ ವಂಚಿತರಾಗಬಾರದು ಅನ್ನೋದು ಆಯೋಜಕರ ಆಶಯವಾಗಿದೆ. ಇದನ್ನೂ ಓದಿ: ಜೈಪುರಕ್ಕೆ ಹೋಗಿ ಕೈ ಮುರಿದುಕೊಂಡಿದ್ದೆ – ಕಬಡ್ಡಿ ಆಡಿ ನೆನಪು ಹಂಚಿಕೊಂಡ ಹೊರಟ್ಟಿ

KAMBALA 2

ಕಂಬಳ ಅನ್ನೋದು ಅದು ವಯಸ್ಸಾದವರಿಗೆ, ಪುರುಷರಿಗೆ ಮಾತ್ರ ಅಂದು ಕೊಂಡಿದ್ದವರಿಗೆ ಈ ಬಾರಿ ತೆರೆಕಂಡ ಕಾಂತಾರ ಚಿತ್ರ ಹೊಸ ನಿರೀಕ್ಷೆ ಮೂಡಿಸಿದೆ. ಕಂಬಳ ಅಂದರೆ ಏನು ಅನ್ನೋದನ್ನು ಕಾಂತಾರ ಚಿತ್ರ ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ. ರಿಷಬ್ ಶೆಟ್ಟಿ (Rishab Shetty) ಅಷ್ಟೊಂದು ಕಷ್ಟಕರವಾದ ಕೋಣಗಳನ್ನು ಓಡಿಸೋದನ್ನು ಕರಗತ ಮಾಡಿ ಕೋಣ ಓಡಿಸಿದ್ದು ಸ್ವತಃ ಅವರಿಗೆ ಟ್ರೈನಿಂಗ್ ಕೊಟ್ಟ ಬೈಂದೂರು ಮಹೇಶ್ ಪೂಜಾರಿಯೂ ಇಂದಿಗೂ ಸ್ಮರಿಸುತ್ತಾರೆ.

KAMBALA

ಕಂಬಳ ಅಂದ್ರೆ ಸಿನಿಮಾದಲ್ಲೋ, ಮೊಬೈಲ್ ನಲ್ಲೋ ನೋಡುತ್ತಿದ್ದ ನಗರವಾಸಿಗಳೂ ಕಂಬಳವನ್ನು ಕಣ್ಣಾರೆ ಕಾಣಬೇಕೆಂಬ ಆಸೆಯಿಂದ ನಗರದೊಳಗಾದ ಕಂಬಳವನ್ನು ವೀಕ್ಷಿಸಲು ಬಂದಿದ್ದರು. ಯುವಕ -ಯುವತಿಯರೇ ಅತೀ ಹೆಚ್ಚು ಸಂಖ್ಯೆಯಲ್ಲಿ ಬಂದು ಈ ಕಂಬಳವನ್ನು ವೀಕ್ಷಿಸಿದರು.

KAMBALA 4

ಈ ಕಂಬಳ ಎರಡು ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆದಿದ್ದು ಎಲ್ಲಾ ವಿಭಾಗಗಳಲ್ಲೂ ಪ್ರಥಮ ಸ್ಥಾನಕ್ಕೆ 2 ಪವನ್ ಚಿನ್ನ, ಎರಡನೇ ಸ್ಥಾನಕ್ಕೆ ಒಂದು ಪವನ್ ಚಿನ್ನವನ್ನು ಬಹುಮಾನವನ್ನಾಗಿ ಕೊಡಲಾಗುತ್ತದೆ. ಸದ್ಯ ಕಂಬಳ ನಗರ ಪ್ರದೇಶದ ಜನರನ್ನೂ ಹೆಚ್ಚು ಹೆಚ್ಚು ಆಕರ್ಷಿಸುತ್ತಿದೆ ಅನ್ನೋದಕ್ಕೆ ಇಲ್ಲಿ ಸೇರಿದ ಅಪಾರ ಜನಸ್ತೋಮವೇ ಸಾಕ್ಷಿ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *