ಇತ್ತಿಚೆಗಷ್ಟೇ `ಕಮಲಿ’ ಖ್ಯಾತಿಯ ನಿಂಗಿ ಅಲಿಯಾಸ್ ಅಂಕಿತಾ ಹಸೆಮಣೆ ಏರಿದ ಬೆನ್ನಲ್ಲೇ ಇದೇ ಧಾರಾವಾಹಿಯ ಮತ್ತೊಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಅನಿಕಾ ಅಲಿಯಾಸ್ ಗೇಬ್ರಿಯೆಲಾ ಮತ್ತು ಸುಹಾಸ್ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ.
View this post on Instagram
`ಕಮಲಿ’ ಖ್ಯಾತಿಯ ಗೇಬ್ರಿಯೆಲಾ ಅಲಿಯಾಸ್ ರಚನಾ ಹಾಗೂ ಸುಹಾಸ್ ಅವರ ಮಧ್ಯೆ ರಿಯಲ್ ಆಗಿ ಪ್ರೀತಿ ಅರಳಿದೆ. ಕಳೆದ ಮೂರು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಟ್ರೈಯಾಂಗಲ್ ಲವ್ ಸ್ಟೋರಿ: ರಾಕೇಶ್ ಅಡಿಗ ಪ್ರೇಮ ಪುರಾಣ

View this post on Instagram
ಇನ್ನು ನಟ ಸುಹಾಸ್ ಅವರೇ ಗೇಬ್ರಿಯೆಲಾ ಪ್ರೇಮ ನಿವೇದನೆ ಮಾಡಿದ್ದರು. ನಟಿ ಕೂಡ ಒಪ್ಪಿ, ಪರಸ್ಪರ ಮೂರು ವರ್ಷಗಳ ಕಾಲ ಪ್ರೀತಿ ಮಾಡಿ ಈಗ ಗುರುಹಿರಿಯರ ಸಮ್ಮತಿಯ ಮೇರೆ ಹೊಸ ಬಾಳಿಗೆ ಕಾಲಿಡುತ್ತಿಡುತ್ತಿದ್ದಾರೆ. ಇದೀಗ ಸುಹಾಸ್ ಪ್ರಪೋಸ್ ಮಾಡಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ನಟಿ ಶೇರ್ ಮಾಡಿದ್ದಾರೆ.

