ಭರ್ತಿ 150 ಕೋಟಿಗೆ ಮಾರಾಟ ಆಯ್ತು ಕಮಲ್ ನಟನೆಯ `ಥಗ್ ಲೈಫ್’

Public TV
1 Min Read
Thug Life 3

ಫ್ಟರ್ ಎ ಲಾಂಗ್‌ಟೈಂ ಮಣಿರತ್ನಂ (Mani Ratnam) ಹಾಗೂ ಕಮಲ್ ಹಾಸನ್ (Kamal Haasan) ಕಾಂಬಿನೇಷನ್‌ನಲ್ಲಿ `ಥಗ್ ಲೈಫ್ (Thug Life) ‘ ಸಿನಿಮಾ ಮೂಡಿ ಬರ್ತಿದೆ. ಸಿನಿಮಾ ರಿಲೀಸ್‌ಗೂ ಮುನ್ನವೇ ಭಾರಿ ಮೊತ್ತಕ್ಕೆ ಓಟಿಟಿ ರೈಟ್ಸ್ ಸೇಲ್ ಆಗಿರೋದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ಬರೋಬ್ಬರಿ 149.7 ಕೋಟಿಗೆ ಸಿನಿಮಾದ ಓಟಿಟಿ ಹಕ್ಕನ್ನ ನೆಟ್‌ಫ್ಲಿಕ್ಸ್ ಸಂಸ್ಥೆ ತನ್ನ ತನ್ನದಾಗಿಸಿಕೊಂಡಿದೆ.

Thug Life 2

ಕಮಲ್ ಹಾಸನ್, ತ್ರಿಶಾ ಕೃಷ್ಣನ್, ಸಿಲಂಬರಸನ್, ಅಶೋಕ್ ಸೆಲ್ವನ್, ನಾಸರ್ ಸೇರಿದಂತೆ ಅತೀದೊಡ್ಡ ತಾರಾಗಣ `ಥಗ್ ಲೈಫ್’ ಸಿನಿಮಾದಲ್ಲಿದೆ. ಈಗಾಗಲೇ ಚಿತ್ರತಂಡ ಬಿಟ್ಟಿರುವ ಮೇಕಿಂಗ್‌ನಿಂದಲೇ ಇಡೀ ದೇಶದ ಗಮನಸೆಳೆದಿರುವ ಈ ಸಿನಿಮಾ ರಿಲೀಸ್‌ಗೂ ಮುನ್ನವೇ ಕ್ರೇಜ್ ಕ್ರಿಯೇಟ್ ಮಾಡಿದೆ. ಕಮಲ್ ಹಾಸನ್ ಫ್ಯಾನ್ಸ್ ಈ ಸುದ್ದಿ ಕೇಳಿ ರಣಕೇಕೆ ಹಾಕಿದ್ದಾರೆ.

Thug Life 1

`ಪೊನ್ನಿಯನ್ ಸೆಲ್ವನ್’ ಪಾರ್ಟ್-2 ಸಿನಿಮಾದ ನಂತರ ಮಣಿರತ್ನಂ ನಿರ್ದೇಶನಕ್ಕೆ ಕೈಹಾಕಿದ ಸಿನಿಮಾ `ಥಗ್ ಲೈಫ್’. ಹೀಗಾಗಿನೇ ಸಿನಿಮಾ ರಿಲೀಸ್‌ಗೂ ಮುನ್ನವೇ ಭಾರಿ ಸೌಂಡ್ ಮಾಡ್ತಿದೆ. ಹತ್ತತ್ತಿರ 150 ಕೋಟಿಗೆ ಈ ಸಿನಿಮಾ ಓಟಿಟಿ ಹಕ್ಕು ಸೇಲ್ ಮಾಡಿ ಕಮಾಲ್ ಮಾಡ್ತಿದೆ. ಹಾಗಾಗಿ ಕಮಲ್ ಹಾಸನ್ ಹಾಗೂ ಮಣಿರತ್ನಂ ಕಾಂಬಿನೇಷನ್‌ಗೆ ಇರೋ ತಾಕತ್ತು ಇದೇ ಅಂತಾ ಅವರ ಅಭಿಮಾನಿ ಬಳಗ ಕೂಗಿ ಹೇಳುತ್ತಿದೆ.

ಪ್ಯಾನ್ ಇಂಡಿಯಾ ಕಾನ್ಸೆಪ್ಟ್ನಲ್ಲಿ ತಯಾರಾಗಿರುವ `ಥಗ್ ಲೈಫ್’ ಸಿನಿಮಾ ಭಾರತದಾದ್ಯಂತ ಸುತ್ತಿ ಶೂಟಿಂಗ್ ಮಾಡಿದೆ. ಇನ್ನು ಥಿಯೇಟರ್‌ಗೆ ಬರುವ ಮುನ್ನವೇ ಭರ್ಜರಿ ಮೊತ್ತಕ್ಕೆ ಓಟಿಟಿ ಹಕ್ಕು ಮಾರಾಟವಾಗಿರೋದು ಇಡೀ ಚಿತ್ರತಂಡಕ್ಕೆ ಎಲ್ಲಿಲ್ಲದ ಸಂಭ್ರಮ. ರಿಲೀಸ್ ಆಗಿ ಬಾಕ್ಸಾಫೀಸ್‌ನಲ್ಲಿ ಹೇಗೆಲ್ಲ ಸದ್ದು ಮಾಡುತ್ತೆ ಕಾದು ನೋಡ್ಬೇಕು.

Share This Article