ಕಾಂಗ್ರೆಸ್‌ಗೆ ಇಂದಿರಾ ಗಾಂಧಿ 3ನೇ ಮಗ ಶಾಕ್? – ಪುತ್ರನ ಜೊತೆ ಕಮಲ್‌ನಾಥ್ ಬಿಜೆಪಿ ಸೇರ್ಪಡೆ?

Public TV
2 Min Read
KAMAL NATH RESIGNS

– ಇಂಡಿಯಾ ಮೈತ್ರಿಕೂಟಕ್ಕೆ ಶಾಕ್ ಮೇಲೆ ಶಾಕ್!

ನವದೆಹಲಿ: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ಗೆ ಶಾಕ್ ಸರಣಿ ಮುಂದುವರಿದಿದೆ. ಒಂದೆಡೆ ಐ.ಎನ್.ಡಿ.ಐ.ಎ ಒಕ್ಕೂಟದಿಂದ (INDIA Alliance) ಒಬ್ಬೊಬ್ಬರೇ ಜಾಗ ಖಾಲಿ ಮಾಡುತ್ತಿದ್ದರೆ, ಮತ್ತೊಂದೆಡೆ ದಶಕಗಳ ಕಾಲ ಅಧಿಕಾರ ಅನುಭವಿಸಿದ ನಾಯಕರು ಗುಡ್‌ಬೈ ಹೇಳ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಅಶೋಕ್ ಚೌಹಾಣ್ ಬಳಿಕ ಮಧ್ಯಪ್ರದೇಶದಲ್ಲಿ ಶಾಕ್ ಎದುರಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ 3ನೇ ಮಗ ಎಂದೇ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೇಂದ್ರ ಸಚಿವ, ಮಧ್ಯಪ್ರದೇಶ ಸಿಎಂ ಆಗಿದ್ದ ಕಮಲ್‌ನಾಥ್ (Kamal Nath) ಇದೀಗ ಬಿಜೆಪಿಗೆ ಜಂಪ್ ಆಗುತ್ತಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ರೈತರ ಪ್ರತಿಭಟನೆಗೆ ಮಣಿಯಿತಾ ಸರ್ಕಾರ – ರೈತ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚನೆ ಪ್ರಸ್ತಾಪಿಸುವ ಸಾಧ್ಯತೆ?

india meeting 2

ಛಿಂದ್ವಾರ ಸಂಸದ, ಪುತ್ರ ನಕುಲ್‌ನಾಥ್ ಜೊತೆ ಸೇರಿ ಕಮಲ್‌ನಾಥ್ 12 ಕ್ಕೂ ಹೆಚ್ಚು ಶಾಸಕರ ಜೊತೆಗೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಫೆ.22ಕ್ಕೆ ಮಧ್ಯಪ್ರದೇಶ ಪ್ರವೇಶವಾಗುವ ಹೊತ್ತಲ್ಲೇ ಈ ವಿಚಾರ ಕೇಳಿಬಂದಿದೆ.

ಆದರೆ ಈ ವದಂತಿಗಳನ್ನು ಕಮಲ್‌ನಾಥ್ ಅಲ್ಲಗಳೆದಿದ್ದಾರೆ. ಪಕ್ಷಕ್ಕೆ ಯಾವುದೇ ರಾಜೀನಾಮೆ ಕೊಟ್ಟಿಲ್ಲ. ಆದರೆ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ಬೇಸರವಾಗಿದೆ. ಐದು ದಶಕಗಳ ಹಿಂದೆ ಇದ್ದ ಸಂಘಟನೆ ಈಗ ಇಲ್ಲ ಎಂದು ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನಾನು ಬಿಜೆಪಿ ಸೇರೋದಾರೆ ಎಲ್ಲರಿಗೂ ತಿಳಿಸಿಯೇ ಸೇರ್ಪಡೆ ಆಗ್ತೇನೆ ಎಂದಿದ್ದಾರೆ. ಇತ್ತ, ಕಮಲನಾಥ್ ಕಾಂಗ್ರೆಸ್ ತೊರೆಯಲ್ಲ. ನಾನು ಅವರ ಜೊತೆ ಮಾತಾಡಿದ್ದೇನೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: 2029ರಲ್ಲಿ ಆಪ್‌ನಿಂದ ಬಿಜೆಪಿ ಮುಕ್ತ – 3ನೇ ಬಾರಿ ವಿಶ್ವಾಸಮತ ಗೆದ್ದ ಕೇಜ್ರಿವಾಲ್‌

AKHILESH YADAV

ಎಸ್‌ಪಿಯ 10 ಶಾಸಕರು ಯೋಗಿ ಬಲೆಗೆ?
ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದಿಂದ 10 ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಸಮಾಜವಾದಿ ಪಕ್ಷದ 10 ಶಾಸಕರು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಬಲೆ ಬೀಳಲಿದ್ದಾರೆ ಎನ್ನಲಾಗಿದೆ.

ನವಜೋತ್ ಸಿಂಗ್ ಸಿಧು ಬಿಜೆಪಿ ಸೇರ್ಪಡೆ?
ಮತ್ತೊಂದು ಕಡೆ ಪಂಜಾಬ್‌ನ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ಸಹ ಬಿಜೆಪಿ ಸೇರುವ ಮಾತುಗಳು ಕೇಳಿಬರುತ್ತಿವೆ. ಫೆ.22 ರ ನಂತರ ಸಿಧು ಕಾಂಗ್ರೆಸ್ ಪಕ್ಷದ ಮೂವರು ಶಾಸಕರೊಂದಿಗೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಏಕಾಏಕಿ ಮಲ್ಲಿಕಾರ್ಜುನ ಖರ್ಗೆಗೆ Z+ ಸೆಕ್ಯೂರಿಟಿ

ಇಂಡಿಯಾ ಒಕ್ಕೂಟಕ್ಕೆ ಶಾಕ್!
ಐಎನ್‌ಡಿಐಎ ಮೈತ್ರಿಕೂಟದಿಂದ ಮಮತಾ ಬ್ಯಾನರ್ಜಿ ಔಟ್ ಆಗಿದ್ದಾರೆ. ಕಾಂಗ್ರೆಸ್ ಮೈತ್ರಿ ತೊರೆದು ನಿತೀಶ್ ಕುಮಾರ್ ಎನ್‌ಡಿಎ ಒಕ್ಕೂಟ ಸೇರಿದ್ದಾರೆ. ಲೋಕಸಭಾ ಚುನಾವಣೆ ಹೊತ್ತಲ್ಲೇ ಇಂಡಿಯಾ ಒಕ್ಕೂಟದಿಂದ ದೆಹಲಿ ಸಿಎಂ ಕೇಜ್ರಿವಾಲ್ ಕೂಡ ಹೊರಕ್ಕೆ ಬಂದಿದ್ದಾರೆ. ಇತ್ತ ಕರ್ನಾಟಕದಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಜಗದೀಶ್ ಶೆಟ್ಟರ್ ಘರ್‌ವಾಪ್ಸಿ ಆಗಿದ್ದಾರೆ. ಮಹಾರಾಷ್ಟçದಲ್ಲಿ ಅಶೋಕ್ ಚವಾಣ್ ಬಿಜೆಪಿ ಸೇರಿದ್ದಾರೆ.

Share This Article