ನಟ, ನಿರ್ಮಾಪಕ ಕಮಲ್ ಖಾನ್ (Kamal Khan) ಜೈಲಿನಿಂದ ಬಂದ ನಂತರ ಮೌನಕ್ಕೆ ಜಾರಿದ್ದಾರೆ. ಬಾಲಿವುಡ್ ಅಷ್ಟೇ ಅಲ್ಲ, ಭಾರತೀಯ ಸಿನಿಮಾಗಳನ್ನು ತನ್ನದೇ ಆದ ರೀತಿಯಲ್ಲಿ ವಿಮರ್ಶಿಸುತ್ತಿದ್ದ ಕಮಲ್, ಇನ್ಮುಂದೆ ಯಾವುದೇ ರೀತಿಯಲ್ಲೂ ಸಿನಿಮಾಗಳ (Cinema) ಬಗ್ಗೆ ರಿವ್ಯು ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ತಾವು ಇಂಥದ್ದೊಂದು ನಿರ್ಧಾರ ತಗೆದುಕೊಳ್ಳದೇ ಇರುವುದಕ್ಕೆ ಕಾರಣ ಬಾಲಿವುಡ್ ಮಾಫಿಯಾ (Mafia) ಎಂದೂ ಅವರು ಹೇಳಿಕೊಂಡಿದ್ದಾರೆ.
ಬಾಲಿವುಡ್ ನ (Bollywood) ಸಾಕಷ್ಟು ಸಿನಿಮಾಗಳಿಗೆ ನೆಗೆಟಿವ್ ರಿವ್ಯು ಕೊಟ್ಟಿದ್ದರು ಕಮಲ್ ಖಾನ್. ಅದಲ್ಲೇ, ಅನೇಕ ನಟರ ಬಗ್ಗೆ ಕಾಮೆಂಟ್ ಮಾಡಿದ್ದರು. ಈ ಕಾರಣಕ್ಕಾಗಿಯೇ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಜೈಲಿನಲ್ಲಿ(Jail) ಇರುವಾಗಲೇ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿ, ಮತ್ತೆ ಜೈಲಿಗೆ ಕಳುಹಿಸುವ ಪ್ರಯತ್ನ ಕೂಡ ನಡೆಯಿತು. ಇದೆಲ್ಲವೂ ಬಾಲಿವುಡ್ ಮಾಫಿಯಾದ ಒಂದು ಭಾಗ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ:`ಕಮಲಿ’ ಖ್ಯಾತಿಯ ಅಮೂಲ್ಯಗೌಡರ ಹಾಟ್ ಫೋಟೋ ವೈರಲ್
ಜೈಲಿನಲ್ಲಿ ಇರುವಾಗಲೇ ಕಮಲ್ ಖಾನ್ ಅವರನ್ನು ಕೊಲ್ಲುವ ಪ್ರಯತ್ನ ಕೂಡ ಮಾಡಲಾಗಿತ್ತಂತೆ. ಹಾಗಂತ ಕಮಲ್ ಪುತ್ರ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ನನ್ನ ತಂದೆಗೆ ರಕ್ಷಣೆ ಕೊಡಿ ಎಂದು ಅವರು ಕೇಳಿದ್ದರು. ಜಾಮೀನು ಸಿಕ್ಕು ಕಮಲ್ ಇದೀಗ ಹೊರಗೆ ಬಂದಿದ್ದಾರೆ. ಆದರೆ, ಇನ್ಮುಂದೆ ತಾವು ಸಿನಿಮಾಗಳನ್ನು ವಿಮರ್ಶೆ (Review) ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಬಾಲಿವುಡ್ ಮಾಫಿಯಾ ತಮಗೆ ಏನು ಬೇಕಾದರೂ ಮಾಡಬಹುದು ಎಂದು ಅವರು ಆತಂಕ ವ್ಯಕ್ತ ಪಡಿಸಿದ್ದಾರೆ.