CinemaLatestMain PostSouth cinema

ವಿಕ್ರಮ್ ಸಿನಿಮಾದಿಂದ ಕಮಲ್ ಹಾಸನ್ ಗಳಿಸಿದ್ದು 300 ಕೋಟಿ – ಬಂದ ಹಣದಿಂದ ಸಾಲ ತೀರಿಸ್ತೀನಿ ಅಂದ ನಟ

Advertisements

ತ್ತು ದಿನಗಳ ಹಿಂದೆಯಷ್ಟೇ ವಿಶ್ವದಾದ್ಯಂತ ರಿಲೀಸ್ ಆಗಿರುವ ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಧೂಳ್ ಎಬ್ಬಿಸುತ್ತಿದೆ. ನಿರೀಕ್ಷೆ ಮಾಡದೇ ಇರುವಷ್ಟು ಅದು ಹಣ ತಂದುಕೊಡುತ್ತಿದೆ. ಎರಡನೇ ವಾರಕ್ಕೂ ಶರವೇಗದಲ್ಲಿ ಮುನ್ನುಗ್ಗುತ್ತಿರುವ ಚಿತ್ರವು ಹತ್ತು ದಿನಕ್ಕೆ ಬರೋಬ್ಬರಿ 300 ಕೋಟಿ ಗಳಿಸಿದೆ ಎಂದು ಅಂದಾಜು ಮಾಡಲಾಗಿದೆ. ಹಾಗಾಗಿ ಸಹಜವಾಗಿಯೇ ಸಿನಿಮಾ ತಂಡ ಖುಷಿ ಆಗಿದೆ.

ವಿಕ್ರಮ್ ಸಿನಿಮಾ ನೂರು ಕೋಟಿ ಕ್ಲಬ್ ಸೇರುತ್ತಿದ್ದಂತೆಯೇ ನಿರ್ದೇಶಕ ಲೋಕೇಶ್ ಕನಗರಾಜ್ ಅವರಿಗೆ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು ಕಮಲ್. ಅಲ್ಲದೇ, ಈ ಚಿತ್ರಕ್ಕಾಗಿ ಕೆಲಸ ಮಾಡಿದ ಸಹ ನಿರ್ದೇಶಕರು ಬೈಕ್ ನೀಡಿದ್ದರು. ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ನಟಿಸಿದ್ದ ನಟ ಸೂರ್ಯ ಅವರಿಗೆ ದುಬಾರಿ ವಾಚ್ ನೀಡಿದ್ದರು. ಇದೀಗ ವಿಕ್ರಮ್ ಸಿನಿಮಾದಿಂದ ಬಂದಿರುವ ಹಣವನ್ನು ಸಾಲದ ಮರುಪಾವತಿಗೆ ಬಳಸಿಕೊಳ್ಳುತ್ತಾರಂತೆ. ಇದನ್ನೂ ಓದಿ: ನಾನು ‘ಸಂಚಾರಿ ವಿಜಯ್’ ಹಾಗೂ ರಾಷ್ಟ್ರೀಯ ಹೆದ್ದಾರಿ 4 : ನಿರ್ದೇಶಕ ಮಂಸೋರೆ ಮನದಾಳ

ಮಾಧ್ಯಮಗಳ ಜೊತೆ ಮಾತನಾಡಿದ ಕಮಲ್ ಹಾಸನ್, “ನಾನು ಈ ಸಿನಿಮಾ ಚೆನ್ನಾಗಿಯೇ ದುಡ್ಡು ಮಾಡುತ್ತದೆ ಎಂದು ಹೇಳಿದೆ. ಸುಮ್ನೆ ಹೇಳುತ್ತಾನೆ ಅಂದುಕೊಂಡರು. ಇದೀಗ ಹಣ ಹರಿದು ಬರುತ್ತಿದೆ. ಮೊದಲು ನನ್ನ ಸಾಲಗಳನ್ನು ಮರುಪಾವತಿ ಮಾಡುತ್ತೇನೆ. ಕುಟುಂಬ ಮತ್ತು ಸ್ನೇಹಿತರಿಗೆ ಸಹಾಯ ಮಾಡುವೆ. ನೆಮ್ಮದಿಯಾಗಿ ಊಟ ಮಾಡುವೆ. ಸಾಲ ತೀರಿದ ನಂತರ ಒಳ್ಳೆಯ ಮನುಷ್ಯನಾಗಿ ಬದುಕುವೆ ಎಂದು ಹೇಳಿದ್ದಾರೆ ಕಮಲ್.

 

 

Live Tv

Leave a Reply

Your email address will not be published.

Back to top button