ಇದೇ ಶುಕ್ರವಾರ ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾ ರಿಲೀಸ್ ಆಗುತ್ತಿದೆ. ಬಿಡುಗಡೆಗೂ ಮುನ್ನ ಈ ಸಿನಿಮಾ ಕೋಟಿ ಕೋಟಿ ಬಾಚಿಕೊಂಡಿದೆ ಎಂದು ಬಾಕ್ಸ್ ಆಫೀಸ್ ರಿಪೋರ್ಟ್ ಹೇಳುತ್ತಿದೆ. ಹೀಗಾಗಿ ದಕ್ಷಿಣದ ಸಿನಿಮಾವೊಂದು ಮತ್ತೆ ಬಾಲಿವುಡ್ ಮಂದಿಯನ್ನು ನಿದ್ದೆಗೆಡಿಸಿದೆ. ಆರ್.ಆರ್.ಆರ್ ಮತ್ತು ಕೆಜಿಎಫ್ 2 ನಂತರ ವಿಕ್ರಮ್ ಕೂಡ ಬಾಕ್ಸ್ ಆಫೀಸಿನಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಲಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನಿಗೆ ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಅವಮಾನ
Advertisement
ಕಮಲ್ ಹಾಸನ್, ವಿಜಯ್ ಸೇತು ಪತಿ ಮತ್ತು ಫಾಸಿಲ್ ಕಾಂಬಿನೇಷನ್ ನ ಸಿನಿಮಾ ಇದಾಗಿದ್ದರಿಂದ ಸಿನಿಮಾ ರಿಲೀಸ್ ಗೂ ಮುನ್ನ 250 ಕೋಟಿ ರೂಪಾಯಿ ಬಾಚಿದೆಯಂತೆ. ಸಿನಿಮಾ ಬಿಡುಗಡೆಗೆ ಇನ್ನೂ ಎರಡು ದಿನ ಇರುವಾಗಲೇ ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಬೋರ್ಡ್ ಕೂಡ ಬಿದ್ದಿದೆಯಂತೆ. ತಮಿಳು ನಾಡಿನಲ್ಲಿ ಮೊದಲೆರಡು ದಿನಗಳ ಟಿಕೆಟ್ ಗಳು ಖಾಲಿ ಖಾಲಿ. ಹಿಂದಿಯಲ್ಲೂ ಸಿನಿಮಾ ಕೂಡ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?
Advertisement
Advertisement
ಈಗಾಗಲೇ ಈ ಚಿತ್ರದ ಬಗ್ಗೆ ತಮಿಳಿನಲ್ಲಿ ವಿರೋಧವೂ ಕೇಳಿ ಬಂದಿದೆ. ಅಲ್ಲದೇ, ಸೆನ್ಸಾರ್ ಮಂಡಳಿಯು ಸಿನಿಮಾದಲ್ಲಿ ಹಿಂಸೆ ಇದ್ದ ಕಾರಣದಿಂದಾಗಿ 13 ಕಡೆ ಕತ್ತರಿ ಪ್ರಯೋಗ ಮಾಡಿದೆ. ಈ ಎಲ್ಲದರ ಮಧ್ಯಯೂ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆಯಂತೆ. ಹಾಗಾಗಿ ನಾಲ್ಕು ಸಾವಿರ ಚಿತ್ರಮಂದಿರಗಳಲ್ಲಿ ವಿಕ್ರಮ್ ಸಿನಿಮಾ ತೆರೆ ಕಾಣುತ್ತಿದೆ.