ನಿರ್ದೇಶಕನ ಜೊತೆ ಕಮಲ್ ಹಾಸನ್ ಪುತ್ರಿಯ ಪ್ರಣಯ

Public TV
1 Min Read
Inimel 2

ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ (Shruti Haasan) ಮತ್ತು ಹೆಸರಾಂತ ನಿರ್ದೇಶಕ ಲೋಕೇಶ್ ಕನಕರಾಜು (Lokesh Kankaraju) ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿರುವ ವಿಡಿಯೋವೊಂದು ತಮಿಳು ಚಿತ್ರ ರಂಗದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಕಲಾವಿದರಿಗೆ ಆಕ್ಷನ್ ಕಟ್ ಹೇಳುತ್ತಿದ್ದ ಲೋಕೇಶ್, ಇದೇನು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ.

Inimel 3

ಹೌದು, ಸದ್ಯ ಬಿಡುಗಡೆ ಆಗಿರುವ ಇನಿಮಲ್ (Inimel) ಹೆಸರಿನ ವಿಡಿಯೋದಲ್ಲಿ ಶ್ರುತಿ ಹಾಸನ್ ಮತ್ತು ಲೋಕೇಶ್ ಕನಕರಾಜು ಮೈ ಚಳಿ ಬಿಟ್ಟು ನಟಿಸಿದ್ದಾರೆ. ಅದರಲ್ಲೂ ರೊಮ್ಯಾಂಟಿಕ್ ದೃಶ್ಯದಲ್ಲಿ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಇದ್ಯಾವ ವಿಡಿಯೋ? ಯಾವುದಕ್ಕೆ ಮಾಡಿದ್ದು ಎನ್ನುವ ವಿವರಗಳು ಲಭ್ಯವಿಲ್ಲ. ಆದರೆ, ಇದೇ 25ನೇ ತಾರೀಖು ಎಲ್ಲದಕ್ಕೂ ಉತ್ತರ ಸಿಗಲಿದೆ.

Inimel 1

ಬಲ್ಲ ಮೂಲಗಳ ಪ್ರಕಾರ ಇದೊಂದು ವಿಡಿಯೋ ಸಾಂಗ್ ಎಂದು ಹೇಳಲಾಗುತ್ತಿದೆ. ಈ ವಿಡಿಯೋ ಸಾಂಗ್ ಗೆ ಕಮಲ್ ಹಾಸನ್ ಅವರೇ ಸಾಹಿತ್ಯ ಬರೆದಿದ್ದಾರೆ. ಸಂಗೀತ ಸಂಯೋಜನೆ ಮತ್ತು ನಿರ್ದೇಶನವನ್ನು ಶ್ರುತಿ ಹಾಸನ್ ಮಾಡಿದ್ದಾರೆ. ಲೋಕೇಶ್ ಇದೇ ಮೊದಲ ಬಾರಿಗೆ ಶ್ರುತಿ ಜೊತೆ ಬಣ್ಣ ಹಚ್ಚಿದ್ದಾರೆ.

 

ಸ್ವತಃ ಕಮಲ್ ಹಾಸನ್ ಅವರೇ ಈ ವಿಡಿಯೋವನ್ನು ನಿರ್ಮಾಣ ಮಾಡಿದ್ದಾರೆ. ಸೋಮವಾರದಿಂದ ಹೆಚ್ಚಿನ ಮಾಹಿತಿಯೊಂದಿಗೆ ಈ ವಿಡಿಯೋ ರಿಲೀಸ್ ಆಗಲಿದೆ.

Share This Article