ಬೀದರ್: ಬಸವಣ್ಣನ ಕರ್ಮಭೂಮಿಯಲ್ಲಿ ಹಲವು ದಶಕಗಳಿಂದ ಬಸವ ಭಕ್ತರು ಒಟ್ಟಾಗಿ ಹಬ್ಬದ ರೀತಿ ಸಂಭ್ರಮಿಸುತ್ತಿದ್ದ ಐತಿಹಾಸಿ ಕಲ್ಯಾಣ ಪರ್ವ (Kalyana Parva) ಕಾರ್ಯಕ್ರಮ ಈ ಬಾರಿ ಇಬ್ಭಾಗವಾಗಿದೆ.
Advertisement
ಬಸವಕಲ್ಯಾಣದಲ್ಲಿ (BasavaKalyana) ನಡೆಯುತ್ತಿರುವ 21ನೇಯ ಐತಿಹಾಸಿಕ ಕಲ್ಯಾಣ ಪರ್ವ ಕಾರ್ಯಕ್ರಮ ಎರಡು ಕಡೆ ಆಯೋಜನೆ ಮಾಡಿದ್ದು ಬಸವ ಭಕ್ತರಲ್ಲಿ ಅಸಮಾಧಾನ ಮೂಡಿಸಿದೆ. ಪ್ರತಿ ವರ್ಷ ಕಲ್ಯಾಣ ಪರ್ವ ಕಾರ್ಯಕ್ರಮ ಒಂದು ಕಡೆ ಬೃಹತ್ ವೇದಿಕೆಯಲ್ಲಿ ನಡೆಯುತ್ತಿತ್ತು. ಆದರೆ ಈ ಬಾರಿ ಕೂಡಲಸಂಗಮ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಡಾ. ಗಂಗಾದೇವಿ ನೇತೃತ್ವದಲ್ಲಿ ಒಂದು ಕಾರ್ಯಕ್ರಮ ಹಾಗೂ ಚೆನ್ನಬಸವಾನಂದ ಸ್ವಾಮೀಜಿ ನೇತೃತ್ವದಲ್ಲಿ ಮತ್ತೊಂದು ಕಲ್ಯಾಣ ಪರ್ವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಇದನ್ನೂ ಓದಿ: RSS ಬ್ರಿಟಿಷರಿಗೆ ಸಹಾಯ ಮಾಡ್ತಾ ಇತ್ತು, ಸಾವರ್ಕರ್ ಸ್ಟೈಫಂಡ್ ಪಡೆದುಯುತ್ತಿದ್ದರು: ರಾಗಾ
Advertisement
Advertisement
ಪೀಠಾಧ್ಯಕ್ಷರುಗಳ ವೈಯಕ್ತಿಕ ಪ್ರತಿಷ್ಠೆಯಿಂದ ಕಲ್ಯಾಣ ಪರ್ವ ಕಾರ್ಯಕ್ರಮ ಇಬ್ಭಾಗವಾಗಿದ್ದು, ಸಾವಿರಾರು ಬಸವ ಭಕ್ತರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಡಾ. ಗಂಗಾದೇವಿ ಮಲತಾಯಿ ಇದ್ದಂತೆ. ಹೀಗಾಗಿ ಹೊಡೆಯೋದು, ಹೊಡೆಸೋದು ಅಷ್ಟೇ ಮಲತಾಯಿಗೆ ಗೊತ್ತು ಎಂದು ಚೆನ್ನಬಸವಾನಂದ ಬಣದ ಬಸವ ಭಕ್ತರು ಕಾರ್ಯಕ್ರಮದಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ. ಇದನ್ನೂ ಓದಿ: ಟಿಪ್ಪು ಎಕ್ಸ್‌ಪ್ರೆಸ್‌ಗೆ ಒಡೆಯರ್ ಎಕ್ಸ್‌ಪ್ರೆಸ್ ಬೋರ್ಡ್ ನೇತಾಕಿದ ರೈಲ್ವೆ ಇಲಾಖೆ