ವಿಜಯಪುರ: ಜಿಲ್ಲೆಯ ಕೋಲಾರ ಪಟ್ಟಣದಲ್ಲಿರುವ ದಿಗಂಬರೇಶ್ವರ ಮಠದ ಪೀಠಾಧಿಪತಿ ಕಲ್ಲಿನಾಥ ಸ್ವಾಮೀಜಿ ಅವರಿಗೆ ಬಂಧನದ ಭೀತಿ ಎದುರಾಗಿದೆ.
ಕೋಲಾರದವರಾದ ಸುವರ್ಣ ಶಿರಾನಿ ಎಂಬವರ ಮಗ ಬಸವರಾಜು ಕಳೆದ ತಿಂಗಳು 20ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಮಗನ ಸಾವಿಗೆ ಸಂಬಂಧಿಸಿದಂತೆ ಕೋಲ್ಹಾರದ ದಿಗಂಬರೇಶ್ವರ ಮಠದ ಕಲ್ಲಪ್ಪಯ್ಯ ಅಲಿಯಾಸ್ ಕಲ್ಲಿನಾಥ ಸ್ವಾಮೀಜಿ, ಸಹೋದರ ಸಂಕಪ್ಪಯ್ಯ ಮತ್ತು ರವಿಂದ್ರ ಶಿರಾನಿ ಕಿರುಕುಳ ಕಾರಣ ಎಂದು ಕೋಲ್ಹಾರ ಪೊಲೀಸ್ ಠಾಣೆಯಲ್ಲಿ ಡಿಸೆಂಬರ್ 22 ರಂದು ಸುವರ್ಣ ಶಿರಾನಿ ದೂರು ದಾಖಲಿಸಿದ್ದರು.
ಪೊಲೀಸರು ಆರೋಪಿಗಳು ಪಟ್ಟಣದಲ್ಲೆ ಓಡಾಡಿದರು ಬಂಧಿಸಿರಲಿಲ್ಲ. ನಂತರ ಸ್ವಾಮೀಜಿ ಸೇರಿದಂತೆ ಆರೋಪಿಗಳು ಜಿಲ್ಲಾ ಸೆಷನ್ಸ್ ಕೋರ್ಟ್‍ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಸ್ವಾಮೀಜಿಯ ಅರ್ಜಿ ವಜಾಗೊಳಿಸಿ ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಕೋರ್ಟ್ ಆದೇಶ ನೀಡಿದೆ.
ಇದರಿಂದ ಬಂಧನದ ಭೀತಿಯಿಂದ ಕಲ್ಲಿನಾಥ ಸ್ವಾಮೀಜಿ ಮಠದಿಂದ ಕಾಲ್ಕಿತ್ತಿದ್ದಾರೆ. ದೂರು ದಾಖಲಾಗಿ 20 ದಿನಗಳಾದರೂ ಬಂಧಿಸದ ಕೋಲಾರ ಠಾಣೆ ಪೊಲೀಸರ ವಿರುದ್ಧ ಬಸವರಾಜು ತಾಯಿ ಸುವರ್ಣ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv