Kalki 2898 AD: ರಿಲೀಸ್ ಆದ 4 ದಿನದಲ್ಲಿ 500 ಕೋಟಿ ಕಲೆಕ್ಷನ್ ಮಾಡಿದ ಪ್ರಭಾಸ್ ಸಿನಿಮಾ

Public TV
1 Min Read
prabhas

ಡಾರ್ಲಿಂಗ್ ಪ್ರಭಾಸ್ (Prabhas), ದೀಪಿಕಾ ಪಡುಕೋಣೆ ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಜೂನ್ 27ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಿತ್ತು. ಬಿಡುಗಡೆಯಾದ 4 ದಿನಕ್ಕೆ 500 ಕೋಟಿ ರೂ. ಕಲೆಕ್ಷನ್ ಮಾಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಇದನ್ನೂ ಓದಿ:ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೆಂಬ ಹಂಬಲ ಈ ಬಾರಿಯೂ ಕೈಗೂಡುತ್ತಿಲ್ಲ: ಗಣೇಶ್

deepika padukone

ಈ ಸಿನಿಮಾದ ಕತೆ ನಡೆಯುವುದು ಕಲಿಯುಗದ ಅಂತ್ಯದಲ್ಲಿ ಎಂದು ನಿರ್ದೇಶಕ ತೋರಿಸಿ ಕೊಟ್ಟಿದ್ದಾರೆ. 6000 ಸಾವಿರ ವರ್ಷಗಳ ನಡುವೆ ನಡೆವ ಕತೆಯಿದು. 3 ಗಂಟೆಯಲ್ಲಿ ಹೇಳಲು ಸಾಧ್ಯವಿಲ್ಲ. ಎರಡನೇ ಭಾಗದಲ್ಲಿ ಕಲ್ಕಿ ಚಿತ್ರ ಹಲವು ಟ್ವಿಸ್ಟ್‌ಗಳೊಂದಿಗೆ ಬರಲಿದೆ. ಮೊದಲ ಭಾಗದಲ್ಲೇ ಸಾಕಷ್ಟು ಕೌತುಕ ಮೂಡಿಸಿದ ಕಾರಣ ಚಿತ್ರ ಈಗ ಗೆದ್ದು ಬೀಗಿದೆ. 500 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.

ಅಂದಹಾಗೆ, ಸಿನಿಮಾ ರಿಲೀಸ್‌ಗೂ ಮುನ್ನ 2 ಭಾಗಗಳಲ್ಲಿ ಬರಲಿದೆ ಎಂದು ಚಿತ್ರತಂಡ ಘೋಷಿಸಿರಲಿಲ್ಲ. ಈಗ ಸಿನಿಮಾ ನೋಡಿದವರಿಗೆ ಇದು ಖಾತ್ರಿಯಾಗಿದೆ. ಚಿತ್ರದ ಬಗ್ಗೆ ಇನ್ನೂ ಕಥೆ ಹೊರಬರೋದು ಬಾಕಿಯಿದೆ. ಇದು ಆರಂಭವಷ್ಟೇ, ಕಲ್ಕಿ ಭಾಗ 2ರಲ್ಲಿ ಮತ್ತಷ್ಟು ಮಾಹಿತಿ ಸಿಗಲಿದೆ.

ವೈಜಯಂತಿ ಮೂವೀಸ್ ನಿರ್ಮಾಣದ ಈ ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ (Deepika Padukone) ಜೊತೆ ಬಿಗ್ ಬಿ, ಕಮಲ್ ಹಾಸನ್, ದಿಶಾ ಪಟಾನಿ ಸೇರಿದಂತೆ ಹಲವರು ನಟಿಸಿದ್ದಾರೆ. ಮೃಣಾಲ್ ಠಾಕೂರ್, ವಿಜಯ್ ದೇವರಕೊಂಡ, ರಾಜಮೌಳಿ, ರಾಮ್ ಗೋಪಾಲ್ ವರ್ಮಾ,ದುಲ್ಕರ್ ಸಲ್ಮಾನ್ ಗೆಸ್ಟ್ ರೋಲ್‌ನಲ್ಲಿ ನಟಿಸಿದ್ದಾರೆ.

Share This Article