ತಮಿಳು ಸಿನಿಮಾ ನಿರ್ದೇಶಕಿ ಲೀಲಾ ಮಣಿಮೇಕಲೈ ಅವರ ಕಾಳಿ ಚಿತ್ರವನ್ನು ತಡೆಕೋರಿ ಸಲ್ಲಿಸಲಾಗಿದ್ದ ಮನವಿಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಲೀನಾ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಅಲ್ಲದೇ, ಆ.6 ರಂದು ಕೋರ್ಟ್ ಮುಂದೆ ಹಾಜರಾಗುವಂತೆ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಮೂರ್ತಿ ಅಭಿಷೇಕ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಕಾಳಿ ಚಿತ್ರಕ್ಕೆ ತಡೆಯಾಜ್ಞೆ ನೀಡಲು ಸದ್ಯ ಆಗದು, ಮೊದಲು ಪ್ರತಿವಾದಿ ಹೇಳಿಕೆ ನೀಡಬೇಕು. ಪ್ರತಿವಾದಿಯ ಹೇಳಿಗೆ ಅಗತ್ಯವಿರುವ ಕಾರಣಕ್ಕಾಗಿ ಸಮನ್ಸ್ ನೀಡಿದೆ.
ಕಾಳಿ ಕೈಲಿ ಸಿಗರೇಟು ಮತ್ತು ಎಲ್ಜಿಬಿಟಿಕ್ಯೂ ಧ್ವಜ ನೀಡಿ ಅವಮಾನಿಸಿದ್ದಾರೆ ಎಂದು ಲೀನಾ ಮೇಲೆ ಹಲವು ದೂರುಗಳು ದಾಖಲಾಗಿದ್ದವು. ಕೆಲ ಕಡೆ ಪ್ರತಿಭಟನೆಯನ್ನು ಕೂಡ ಮಾಡಲಾಯಿತು. ಆದರೂ, ಲೀನಾ ಸುಮ್ಮನಾಗಲಿಲ್ಲ. ಶಿವ ಪಾರ್ವತಿ ಕೈಲಿ ಸಿಗರೇಟು ನೀಡಿ ಮತ್ತೆ ಅವಮಾನಿಸಿದರು. ಹಾಗಾಗಿ ಲೀನಾ ವಿರುದ್ಧ ಪ್ರತಿಭಟನೆ ಜೋರಾಗಿದೆ. ಈ ಚಿತ್ರವು ಪ್ರದರ್ಶನ ಆಗದಂತೆ ತಡೆಯಬೇಕೆಂದು ಹಲವು ಕಡೆ ದೂರು ಕೂಡ ದಾಖಲಾಗಿವೆ. ಇದನ್ನೂ ಓದಿ:ಯಂಗ್ ಅಂಡ್ ಎನರ್ಜಿಟಿಕ್ ಸ್ಟಾರ್ ಶಿವಣ್ಣನ ಹುಟ್ಟುಹಬ್ಬಕ್ಕೆ ಶುಭಕೋರಿದ ರಾಜಕೀಯ ಗಣ್ಯರು
ಭಾರತದಾದ್ಯಂತ ಅನೇಕ ಕಡೆ ಲೀನಾ ಮೇಲೆ ದೂರುಗಳು ದಾಖಲಾದರು, ಲೀನಾ ಮಾತ್ರ ಸುಮ್ಮನೆ ಕುಳಿತಿಲ್ಲ. ಮತ್ತೆ ಮತ್ತೆ ಕಾಳಿ ಮತ್ತು ಹಿಂದೂ ದೇವರಗಳನ್ನು ಇಟ್ಟುಕೊಂಡು ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ ಕೆಲಸವನ್ನು ಮಾಡುತ್ತಲೇ ಇದ್ದಾರೆ.