CinemaLatestMain PostSandalwood

ಯಂಗ್ ಅಂಡ್ ಎನರ್ಜಿಟಿಕ್ ಸ್ಟಾರ್ ಶಿವಣ್ಣನ ಹುಟ್ಟುಹಬ್ಬಕ್ಕೆ ಶುಭಕೋರಿದ ರಾಜಕೀಯ ಗಣ್ಯರು

Advertisements

ರುನಾಡ ಚಕ್ರವರ್ತಿ, ಚಂದನವನ ಸ್ಟಾರ್ ಶಿವರಾಜ್‍ಕುಮಾರ್ ಇಂದು 60ರ ಹರೆಯಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಚಂದನವನ ಸೇರಿದಂತೆ ಇತರೇ ಭಾಷೆಯ ಗಣ್ಯರು ಸಹ ಶಿವಣ್ಣನಿಗೆ ಹುಟ್ಟುಹಬ್ಬದ ಶುಭ ಕೋರುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಶಿವಣ್ಣ ಸಿನಿಮಾರಂಗದ ಜೊತೆಗೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತ ರಾಜಕೀಯ ಗಣ್ಯರಿಗೂ ಆಪ್ತರಾಗಿದ್ದಾರೆ. ಅವರ ವಿಶೇಷ ದಿನಕ್ಕೆ ರಾಜಕೀಯ ಗಣ್ಯರು ಶುಭಕೋರಿ ಕೂನಲ್ಲಿ ಫೋಟೋ ಶೇರ್ ಮಾಡಿದ್ದಾರೆ.

ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರು, ಕನ್ನಡ ಚಿತ್ರರಂಗದ ಖ್ಯಾತ ಕಲಾವಿದ, ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ತಮ್ಮ ಮೇಲಿರಲಿ, ತಮ್ಮ ನೇತೃತ್ವದಲ್ಲಿ ಕನ್ನಡ ಚಿತ್ರೋದ್ಯಮ ಇನ್ನೂ ಹೆಚ್ಚು ಯಶಸ್ಸು ಕೀರ್ತಿ ಗಳಿಸಲಿ ಎಂದು ಹಾರೈಸುತ್ತೇನೆ ಎಂದು ಶಿವಣ್ಣನ ಹಳೆಯ ಫೋಟೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಶಿವರಾಜ್‌ಕುಮಾರ್ ನಟನೆಯ `ಘೋಸ್ಟ್’ ಚಿತ್ರದ ಲುಕ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು, ನಟಸಾರ್ವಭೌಮನ ಪುತ್ರ, ಕರುನಾಡ ಚಕ್ರವರ್ತಿ, ಸಿನಿರಂಗದಲ್ಲಿ 35 ವರ್ಷ ಪೂರೈಸಿ, 125ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಇಂದಿಗೂ ನಮ್ಮೆಲ್ಲರ ನೆಚ್ಚಿನ ನಟನಾಗಿ 60ರ ವಸಂತಕ್ಕೆ ಕಾಲಿಡುತ್ತಿರುವ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ದೀರ್ಘಾಯುಷ್ಯ ಕೊಟ್ಟು ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದಿದ್ದಾರೆ.

Koo App

ನಟಸಾರ್ವಭೌಮನ ಪುತ್ರ, ಕರುನಾಡ ಚಕ್ರವರ್ತಿ, ಸಿನಿರಂಗದಲ್ಲಿ 35 ವರ್ಷ ಪೂರೈಸಿ, 125ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಇಂದಿಗೂ ನಮ್ಮೆಲ್ಲರ ನೆಚ್ಚಿನ ನಟನಾಗಿ 60ರ ವಸಂತಕ್ಕೆ ಕಾಲಿಡುತ್ತಿರುವ, ಹ್ಯಾಟ್ರಿಕ್ ಹೀರೋ ಶ್ರೀ ಶಿವರಾಜ್ ಕುಮಾರ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ದೀರ್ಘಾಯುಷ್ಯ ಕೊಟ್ಟು ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ.

Dr. Murugesh R Nirani (@murugesh_nirani) 12 July 2022

ಹೊಂಬಾಳೆ ಫಿಲಂಸ್ ತಂಡ, ನಮ್ಮೆಲ್ಲರ ಹೆಮ್ಮೆಯ ನಟ, ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್‍ಕುಮಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ತಮ್ಮ ಕಲಾ ಸೇವೆ ಸದಾ ಸ್ಫೂರ್ತಿ. ನಿಮ್ಮ ನಿರಂತರ ಕಲಾಸೇವೆಗಾಗಿ ಹೊಂಬಾಳೆ ಫಿಲಂಸ್ ತಂಡದಿಂದ ಶುಭ ಹಾರೈಸಿದೆ.

ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು, ಸ್ಯಾಂಡಲ್‍ವುಡ್‍ನ ಹ್ಯಾಟ್ರಿಕ್ ಹೀರೋ ಡಾ.ಶಿವರಾಜಕುಮಾರ್ ಅವರಿಗೆ ಹುಟ್ಟುಹಬ್ಬದ ಹೃತ್ಪೂರ್ವಕ ಶುಭಾಶಯಗಳು. ಭಗವಂತ ತಮಗೆ ಉತ್ತಮ ಕೃಪೆ ಸದಾ ತಮ್ಮ ಮೇಲಿರಲಿ, ತಮ್ಮಿಂದ ಕನ್ನಡ ಚಿತ್ರರಂಗದ ಕೀರ್ತಿ ಮತ್ತಷ್ಟು ಹೆಚ್ಚಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಶಿವರಾಜ್ ಕುಮಾರ್ ಬರ್ತಡೇ : ಏನೆಲ್ಲ ಸ್ಪೆಷಲ್ ಗೊತ್ತಾ?

Koo App

ಕನ್ನಡದ ಹಿರಿಯ ನಟ, ಹ್ಯಾಟ್ರಿಕ್ ಹೀರೋ @NimmaShivanna ಅವರಿಗೆ 60ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಸುಧೀರ್ಘ ಚಲನಚಿತ್ರ ರಂಗದ ಪಯಣದಲ್ಲಿ ಕನ್ನಡದ ಜನತೆಯನ್ನು ಅಮೋಘವಾಗಿ ರಂಜಿಸಿದ್ದೀರಿ, ಅಭಿಮಾನಿಗಳು ಕೂಡ ತಮ್ಮ ಹೃದಯ ಸಿಂಹಾಸನದಲ್ಲಿ ನಿಮಗೆ ವಿಶೇಷ ಸ್ಥಾನ ಕೊಟ್ಟಿದ್ದಾರೆ. ನಿಮ್ಮ ಈ ಪಯಣ ಹೀಗೆ ಮುಂದುವರೆಯಲಿ ಹಾಗೂ ಅಭಿಮಾನಿಗಳನ್ನು ಇನ್ನಷ್ಟು ರಂಜಿಸುವ ಶಕ್ತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

Pralhad Joshi (@joshipralhad) 12 July 2022

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಕನ್ನಡದ ಹಿರಿಯ ನಟ, ಹ್ಯಾಟ್ರಿಕ್ ಹೀರೋ @NimmaShivanna ಅವರಿಗೆ 60ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಸುಧೀರ್ಘ ಚಲನಚಿತ್ರ ರಂಗದ ಪಯಣದಲ್ಲಿ ಕನ್ನಡದ ಜನತೆಯನ್ನು ಅಮೋಘವಾಗಿ ರಂಜಿಸಿದ್ದೀರಿ, ಅಭಿಮಾನಿಗಳು ಕೂಡ ತಮ್ಮ ಹೃದಯ ಸಿಂಹಾಸನದಲ್ಲಿ ನಿಮಗೆ ವಿಶೇಷ ಸ್ಥಾನ ಕೊಟ್ಟಿದ್ದಾರೆ. ನಿಮ್ಮ ಈ ಪಯಣ ಹೀಗೆ ಮುಂದುವರೆಯಲಿ ಹಾಗೂ ಅಭಿಮಾನಿಗಳನ್ನು ಇನ್ನಷ್ಟು ರಂಜಿಸುವ ಶಕ್ತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಶುಭ ಕೋರಿದ್ದಾರೆ.

Live Tv

Leave a Reply

Your email address will not be published.

Back to top button