– ಯುವತಿ ಆರೋಪ ಎಲ್ಲ ಸುಳ್ಳು ಎಂದ ಪೇದೆ
ಕಲಬುರಗಿ: ಪೊಲೀಸ್ ಪೇದೆಯೊಬ್ಬರು ಸುಮಾರು 10 ವರ್ಷಗಳ ಕಾಲ ಯುವತಿಯನ್ನು ಪ್ರೀತಿಸಿ ಈಗ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನರೋಣಾ ಪೊಲೀಸ್ ಠಾಣೆಯ ಪೇದೆ ಆನಂದ ಮತ್ತು ನಾನು ಪರಸ್ಪರ ಸುಮಾರು 10 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದೆವೆ. ಆದರೆ ಬೇರೊಬ್ಬ ಯುವತಿಯ ಜೊತೆ 2015ರಲ್ಲಿ ಮದುವೆಯಾಗಿ ನನಗೆ ವಂಚಿಸಿದ್ದಾನೆಂದು ಯುವತಿ ದೂರಿದ್ದಾರೆ.
Advertisement
ಯುವತಿ ಹೇಳೋದು ಏನು?
ಆನಂದ ಮತ್ತು ನನ್ನ ನಡುವೆ ಪ್ರೇಮಾಂಕುರವಾಗಿ ಸುಮಾರು 10 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದೆವು. ಹೆಚ್ಚಿನ ವಿದ್ಯಭ್ಯಾಸಕ್ಕೆ ಬೇರೆ ಬೇರೆ ಕಡೆ ಹೋಗಿ ಓದುತ್ತಿದ್ದೆವು. ನಂತರ ನನಗೆ ಗೊತ್ತಿಲ್ಲದೆ 2015ರಲ್ಲಿ ಬೇರೊಬ್ಬ ಯುವತಿಯನ್ನು ಮದುವೆಯಾಗಿದ್ದಾನೆ. ಮದುವೆ ಆಗಿದೆ ಎಂದು ತಿಳಿದ ತಕ್ಷಣ, 2015ರಲ್ಲಿ ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ನಂತರ ಈ ದೂರನ್ನು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Advertisement
ಅವನು ಮದುವೆಯಾದ ನಂತರ ಕೇಸ್ ವಿಚಾರವಾಗಿ ರಾಜಿಮಾಡಿಕೊಳ್ಳಲು ಮನೆಗೆ ಕರೆಸಿಕೊಂಡು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.
Advertisement
ಎಂದಿನಂತೆ ಕೇಸ್ ವಿಚಾರವಾಗಿ ಉದಯನ ನರೋಣಾ ಪೊಲೀಸ್ ವಸತಿ ನಿಲಯದ ಮನೆಗೆ ಹೋದಾಗ, ಆನಂದ, ಹೆಂಡತಿ, ಹಾಗೂ ಅತ್ತೆ ನನ್ನ ಮೇಲೆ ಹಲ್ಲೆ ನಡೆಸಿದರು. ಪೊಲೀಸರಿಗೆ ತಿಳಿಸಿದರೆ ನನಗೆ ದಾರಿ ತಪ್ಪಿಸುತ್ತಿದ್ದಾರೆ. ನನಗೆ ನ್ಯಾಯ ಕೊಡಿಸುತ್ತಿಲ್ಲ. ನನ್ನ ಮತ್ತು ಆನಂದನ ನಡುವೆ ನಡೆದ ಸಂಭಾಷಣೆ, ಮೆಸೇಜ್, ವಿಡಿಯೋ ಎಲ್ಲಾ ದಾಖಲೆಗಳಿದ್ದರೂ ನನಗೆ ನ್ಯಾಯಸಿಗುತ್ತಿಲ್ಲ ಎಂದು ಅಳುತ್ತಾ ಅಂಗಲಾಚಿದ್ದಾರೆ. ಆದರೆ ಪೊಲೀಸರು ಎಲ್ಲರೂ ಒಂದಾಗಿ ನನಗೆ ನ್ಯಾಯ ಕೊಡಿಸದೆ ನನ್ನ ದಾರಿತಪ್ಪಿಸುತ್ತಿದ್ದಾರೆ ಎಂದು ಪೋಲೀಸರ ವಿರುದ್ಧ ದೂರಿದ್ದಾರೆ.
Advertisement
ಪೊಲೀಸ್ ಪೇದೆ ಹೇಳೋದು ಏನು?
ನನಗೂ ಸಾವಿತ್ರಿಗೂ ಪರಿಚಯ ಮಾತ್ರ, ನನ್ನನ್ನು ಮದುವೆಯಾಗು ಎಂದು ನನಗೆ ಹಿಂಸೆ ಮಾಡುತ್ತಿದ್ದಾಳೆ. ನನ್ನನ್ನು ಮಾದುವೆಯಾಗಿದ್ದೇನೆಂದು ದಾಖಲೆಗಳನ್ನು ಕೋರ್ಟ್ ನಲ್ಲಿ ತೋರಿಸುವುದಾಗಿ ಬ್ಲಾಕ್ಮೇಲ್ ಮಾಡುತ್ತಿದ್ದಾಳೆ. ನನಗೂ ಸಾವಿತ್ರಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಇಂದು ಸಾವಿತ್ರಿಯು ನನ್ನ ಮನೆಗೆ ಬಂದು, ನನ್ನ ತುಂಬು ಗರ್ಭಿಣಿ ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದಾಳೆಂದು ಪೊಲೀಸ್ ಪೇದೆ ಆನಂದ ಯುವತಿಯ ವಿರುದ್ಧ ಆರೋಪಿಸಿದ್ದಾರೆ.