ಕಲಬುರಗಿ: ದಿನೇ ದಿನೇ ಮಕ್ಕಳ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ ಎಂಬುವುದು ಸತ್ಯ. ಆದರೆ ಈ ನಡುವೆ ಉತ್ತರ ಕರ್ನಾಟಕದಲ್ಲಿ (Uttar Karnataka) ಮಕ್ಕಳ ಕಳ್ಳರ ವದಂತಿ ಹೆಚ್ಚಾಗಿದ್ದು, ಶಂಕೆ ವ್ಯಕ್ತವಾದವರ ಮೇಲೆ ಹಲ್ಲೆ ನಡೆಸಲಾಗಿದೆ. ಹೌದು, ಮಕ್ಕಳ ಕಳ್ಳರೆಂದು (Child Thieves) ಭಾವಿಸಿ ಇಬ್ಬರು ಮಹಿಳೆಯರಿಗೆ ಗ್ರಾಮಸ್ಥರು ಥಳಿಸಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆ ಚಿಂಚೋಳಿ ತಾಲೂಕಿನ ಪೋಲಕಪಳ್ಳಿ ಗ್ರಾಮದಲ್ಲಿ ನಡೆದಿದೆ.
Advertisement
ತೆಲಂಗಾಣದ (Telangana) ಕೊತ್ಲಾಪುರ ಗ್ರಾಮದಿಂದ ಪೋಲಕಪಳ್ಳಿ ಗ್ರಾಮಕ್ಕೆ ಮಹಿಳೆಯರಿಬ್ಬರು ಆಗಮಿಸಿದ್ದರು. ಈ ವೇಳೆ ಇವರನ್ನೇ ಕಳ್ಳಿಯರು ಎಂದು ಭಾವಿಸಿದ ಗ್ರಾಮಸ್ಥರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಬಳಿಕ ಚಿಂಚೋಳಿ ಪೊಲೀಸರಿಗೆ (Chincholi Police) ಮಹಿಳೆಯರನ್ನು ಒಪ್ಪಿಸಿದ್ದರು. ಇದನ್ನೂ ಓದಿ: ಚೆಕ್ ಬೌನ್ಸ್ ಪ್ರಕರಣ – ಶಾಸಕ ಎಂ.ಪಿ ಕುಮಾರಸ್ವಾಮಿಗೆ ಜಾಮೀನು ರಹಿತ ವಾರೆಂಟ್
Advertisement
Advertisement
ನಂತರ ಈ ಸಂಬಂಧ ವಿಚಾರಣೆ ನಡೆಸಿದ ಪೊಲೀಸರಿಗೆ ಥಳಿತಕ್ಕೊಳಗಾದ ಇಬ್ಬರು ಮಹಿಳೆಯರು ಗ್ರಾಮದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಬಂದಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕಿಸೆಯಲ್ಲಿ ಸಿಕ್ತು ಕಾಂಡೋಮ್‌ನ ರಶೀದಿ- ಮಹಿಳಾ ಪೇದೆಯಿಂದ ಗೆಳೆಯನಿಗೇ ಶೂಟೌಟ್