ಕೇಪ್‌ಟೌನ್: ಮಹಿಳಾ ಪೊಲೀಸ್ ಅಧಿಕಾರಿಯೊಬ್ಬಳು (Police Officer) ತನ್ನ ಗೆಳೆಯನ (Boyfriend) ಕಿಸೆಯಲ್ಲಿ ಕಾಂಡೋಮ್‌ನ (Condom) ರಶೀದಿ ಸಿಕ್ಕಿದ ಕಾರಣ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ದಕ್ಷಿಣ ಆಫ್ರಿಕಾದ (South Africa) ಡರ್ಬನ್‌ನಲ್ಲಿ ನಡೆದಿದೆ.
ವರದಿಗಳ ಪ್ರಕಾರ, ಮಹಿಳಾ ಪೊಲೀಸ್ ಮೊದಲು ತನ್ನ ಗೆಳೆಯನ ಪ್ಯಾಂಟ್ ಕಿಸೆಯಲ್ಲಿ ಕಾಂಡೋಮ್‌ನ ರಶೀದಿಯನ್ನು ಪತ್ತೆ ಹಚ್ಚಿದ್ದಾಳೆ. ಬಳಿಕ ಈ ವಿಚಾರಕ್ಕೆ ಆಕೆ ಗೆಳೆಯನೊಂದಿಗೆ ಜಗಳವಾಡಿದ್ದಾಳೆ. ಜಗಳ ಅತಿರೇಕಕ್ಕೆ ತಿರುಗಿ, ಆಕೆ ತನ್ನ ಪೊಲೀಸ್ ಇಲಾಖೆಯ ಗನ್ ಅನ್ನೇ ಬಳಸಿ ಗುಂಡಿಕ್ಕಿದ್ದಾಳೆ. ಇದನ್ನೂ ಓದಿ: 5 ದಿನ ನಾಪತ್ತೆಯಾಗಿದ್ದ ಯುವತಿ ರೆಸಾರ್ಟ್‌ನಲ್ಲಿ ಶವವಾಗಿ ಪತ್ತೆ- ಕಾಂಗ್ರೆಸ್ ಆರೋಪವೇನು?
Advertisement
Advertisement
ಘಟನೆಯ ಬಳಿಕ ಆಕೆ ತಾನಾಗಿಯೇ ಪೊಲೀಸರ ಮುಂದೆ ಶರಣಾಗಿದ್ದಾಳೆ. ಆಕೆಯನ್ನು ಬಳಿಕ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ತನ್ನ ಗೆಳೆಯನ ಬಳಿ ಕಾಂಡೋಮ್‌ನ ರಶೀದಿ ನೋಡಿ ಆಕೆ ಗುಂಡಿಕ್ಕಿ ಕೊಂದಿರುವುದರಿಂದ ನ್ಯಾಯಾಲಯ ಆಕೆಗೆ ಜಾಮೀನು ನೀಡಿದೆ.
Advertisement
Advertisement
ಇದೀಗ ಡರ್ಬನ್ ಪೊಲೀಸರು ಪ್ರಕರಣದ ಬೆನ್ನು ಬಿದ್ದಿದ್ದು, ಗೆಳೆಯನನ್ನೇ ಕೊಂದ ಮಹಿಳಾ ಪೊಲೀಸ್ ಅಧಿಕಾರಿಯ ಮಾನಸಿಕ ಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಗಾಂಜಾ ಮಿಶ್ರಿತ ಚಾಕ್ಲೇಟ್ ಮಾರಾಟ- ರಾಯಚೂರಿನಲ್ಲಿ ಅಬಕಾರಿ ಪೊಲೀಸರ ದಾಳಿ