-ಉಮೇಶ್ ಜಾಧವ್ ಫ್ಲೆಕ್ಸ್ ಗಳಲ್ಲಿ ಕಮಲ ನಾಯಕರ ಫೋಟೋ ಮಿಂಚಿಂಗ್
ಕಲಬುರಗಿ: ಕಾಂಗ್ರೆಸ್‍ಗೆ ಕೈ ಕೊಟ್ಟು ಬಿಜೆಪಿ ಸೇರಲು ಡಾ.ಉಮೇಶ್ ಜಾಧವ್‍ಗೆ ಬಂಜಾರಾ ಸಮುದಾಯದ ಮುಖಂಡರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದ್ದು, ಇತ್ತ ಕಲಬುರಗಿಯಲ್ಲಿ ಜಾಧವ್ ವರ್ಸಸ್ ಖರ್ಗೆ ಬೆಂಬಲಿಗರ ಫ್ಲೆಕ್ಸ್ ವಾರ್ ಮುಂದುವರಿದಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ಕ್ಷೇತ್ರದ ಅತೃಪ್ತ ಕಾಂಗ್ರೆಸ್ ಶಾಸಕ ಡಾ.ಉಮೇಶ್ ಜಾಧವ್ ಫೋಟೋ ಇರುವ ಬ್ಯಾನರ್‍ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಫೋಟೋ ನಾಪತ್ತೆಯಾಗಿದೆ. ಬ್ಯಾನರ್ ಅಷ್ಟೇ ಅಲ್ಲ ಡಾ.ಜಾಧವ್ ಅಧ್ಯಕ್ಷತೆಯ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲೂ ಪ್ರಿಯಾಂಕ್ ಹೆಸರು ಇಲ್ಲವಾಗಿದೆ.
Advertisement
Advertisement
ಸ್ವಾಗತ ಬ್ಯಾನರ್‍ನಲ್ಲಿ ಡಾ.ಉಮೇಶ್ ಜಾಧವ್ ಜೊತೆ ಬಿಜೆಪಿ ಮುಖಂಡರ ಫೋಟೋಗಳು ರಾರಾಜಿಸುತ್ತಿವೆ. ಬಿಜೆಪಿ ಮುಖಂಡ ಸುಭಾಷ್ ರಾಠೋಡ್ ಸೇರಿದಂತೆ ಹಲವು ನಾಯಕರ ಫೋಟೋಗಳನ್ನು ಹಾಕಲಾಗಿದೆ.
Advertisement
ಫೆಬ್ರವರಿ 24ರಂದು ಕಲಬುರಗಿ ಜಿಲ್ಲೆಯ ಕಾಳಗಿಯಲ್ಲಿ ಸಂತ ಸೇವಾಲಾಲ ಮಹಾರಾಜರ 280ನೇ ಜಯಂತ್ಯೋತ್ಸವ ಕಾರ್ಯಕ್ರಮ ಇದೆ. ಈ ಕಾರ್ಯಕ್ರಮವನ್ನು ಕಾಳಗಿ ಪಟ್ಟಣದ ಸಂತ ಸೇವಾಲಾಲ ಜಯಂತ್ಯೋತ್ಸವ ಸಮಿತಿಯಿಂದ ಆಯೋಜನೆ ಮಾಡಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv