ಕಲಬುರಗಿಯಲ್ಲಿ 140ಕ್ಕೂ ಹೆಚ್ಚು ದೇವಸ್ಥಾನಗಳ ತೆರವಿಗೆ ಜಿಲ್ಲಾಡಳಿತ ಸಜ್ಜು

Public TV
1 Min Read
kbg 2 2

ಕಲಬುರಗಿ: ಅನಧಿಕೃತ ದೇವಸ್ಥಾನಗಳ ತೆರವಿಗೆ ಸುಪ್ರಿಂ ಕೋರ್ಟ್ ಆದೇಶ ಹಿನ್ನೆಲೆ ಕಲಬುರಗಿಯಲ್ಲಿ 140 ಕ್ಕೂ ಅಧಿಕ ದೇವಸ್ಥಾನಗಳ ಪಟ್ಟಿಯನ್ನು ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ಮಾಡಿಕೊಂಡಿದೆ.

FotoJet 10 6

ಮೊದಲ ಹಂತದಲ್ಲಿ 30 ದೇವಸ್ಥಾನಗಳನ್ನ ತೆರವು ಮಾಡಲು ಪಾಲಿಕೆ ಸಿದ್ದತೆ ಮಾಡಿಕೊಳ್ಳುತ್ತಿದೆ. ಆದರೆ ದೇವಸ್ಥಾನ ತೆರವಿಗೆ ಸ್ಥಳೀಯರಿಂದ ವಿರೋಧ ವ್ಯಕ್ತಪಡಿಸುತ್ತಿದ್ದು, ಮುಖಂಡರ ಜೊತೆ ಚರ್ಚಿಸಿ ನಂತರ ತೆರವು ಕಾರ್ಯಚರಣೆಗೆ ಮಾಡಲು ಪಾಲಿಕೆ ಸಿದ್ದತೆ ನಡೆಸಿದೆ. ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ- ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ

FotoJet 9 4

ಈ ಹಿಂದೆ ಆಗಸ್ಟ್ 18 ರಂದು ಕಲಬುರಗಿಯ ಯಮುನಾ ನಗರದಲ್ಲಿರುವ ಅದಿ ಬಸವಣ್ಣ ದೇವಸ್ಥಾನ ತೆರವಿಗೆ ಮುಂದಾಗಿದ್ದ ಪಾಲಿಕೆ ಅಧಿಕಾರಿಗಳಿಗೆ ಸಾರ್ವಜನಿಕರು ಚಳಿ ಬಿಡಿಸಿದ್ದರು. ಪ್ರತಿಭಟನೆ ಮಾಡಿ ಸಾರ್ವಜನಿಕರು ತಮ್ಮ ಆಕ್ರೋಶ ಹೊರ ಹಾಕಿದ್ದರು.  ಇದನ್ನೂ ಓದಿ: ಫ್ಲೈಓವರ್ ಮೇಲಿಂದ ಬಿದ್ದು ಅಪಘಾತವಾದ ಸ್ಥಳದಲ್ಲೇ ಮತ್ತೊಂದು ಅಪಘಾತ

ರಾಜ್ಯದಲ್ಲೆಡೆ ದೇವಸ್ಥಾನಗಳ ತೆರವಿಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಪಾಲಿಕೆ ಅಧಿಕಾರಿಗಳು ದೇವಸ್ಥಾನದ ತಂಟೆಗೆ ಬಂದ್ರೆ ಸುಮ್ಮನೆ ಬಿಡೋದಿಲ್ಲ, ಹಿಂದೂ ವಿರೋಧಿ ಚಟುವಟಿಕೆ ಮಾಡಿದ್ರೆ ನಮ್ಮ ಜೀವ ಹೊದರು ತೆರವು ಮಾಡೋದಕ್ಕೆ ಬಿಡೋದಿಲ್ಲ, ನಮ್ಮ ಜೀವ ಬಿಡುತ್ತೇವೆ ಹೊರತು ದೇವಸ್ಥಾನದ ಒಂದು ಕಲ್ಲು ತೆಗೆಯೋದಕ್ಕೂ ಬಿಡೋದಿಲ್ಲ ಎಂದಿದ್ದಾರೆ.

ದೇವಸ್ಥಾನದ ಒಂದು ಕಲ್ಲು ತೆಗೆಯಬೇಕಾದ್ರೆ ನಮ್ಮ ಹೆಣದ ಮೇಲೆಯೆ ಕಾಲಿಟ್ಟು ತೆಗೆಯಬೇಕು ಎಂದು ಸ್ಥಳೀಯರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *