DistrictsKalaburagiKarnatakaLatestMain Post

PSI ನೇಮಕಾತಿ ಅಕ್ರಮ – ಕಲಬುರಗಿಯ ಫಿಂಗರ್ ಪ್ರಿಂಟ್ಸ್ DYSP ಆರ್.ಆರ್.ಹೊಸಮನಿ ಸಸ್ಪೆಂಡ್

ಕಲಬುರಗಿ: ಇತ್ತೀಚೆಗೆ PSI ನೇಮಕಾತಿ ಅಕ್ರಮ ಸುದ್ದಿ ಎಲ್ಲಾ ಕಡೆ ಭಾರೀ ಸದ್ದು ಮಾಡುತ್ತಿದೆ. ನೇಮಕಾತಿಯಲ್ಲಿ ಅಕ್ರಮ ಮಾಡಿದವರನ್ನು ಬಿಡಬಾರದು ಎಂದು ಪ್ರತಿಪಕ್ಷಗಳು ಆಗ್ರಹ ಮಾಡುತ್ತಿವೆ. ಈಗ ಡಿವೈಎಸ್‍ಪಿ ಆರ್.ಆರ್.ಹೊಸಮನಿ ಅಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದು ಅವರನ್ನು ಅಮಾನತು ಮಾಡಲಾಗಿದೆ.

ಕಲಬುರಗಿಯ ಫಿಂಗರ್ ಪ್ರಿಂಟ್ಸ್ ಡಿವೈಎಸ್‍ಪಿ ಆರ್.ಆರ್.ಹೊಸಮನಿ ಹಾಗೂ ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದಿಲೀಪ್ ಸಾಗರ್ ಅವರು ಕರ್ತವ್ಯದಲ್ಲಿ ಲೋಪವೆಸಗಿದ ಹಿನ್ನೆಲೆ ಸಸ್ಪೆಂಡ್ ಮಾಡಬೇಕು ಎಂದು ಡಿಜಿ ಆದೇಶ ಹೊರಡಿಸಿದೆ. ಇದನ್ನೂ ಓದಿ:  ಬೆಂಜ್ ಕಾರಲ್ಲಿ ಬಂದು ಲಕ್ಷ, ಲಕ್ಷ ರೂ. ಮರಳು ಹಫ್ತಾ ವಸೂಲಿ – ಹೈಟೆಕ್ ದರೋಡೆಕೋರ ಅರೆಸ್ಟ್

ಡಿಜಿ ಆದೇಶದ ನಂತರ ಕಲಬುರಗಿ ಜ್ಞಾನಜ್ಯೋತಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಹೊಸಮನಿ ಹಾಗೂ ದಿಲೀಪ್ ಸಾಗರ್ ಅವರನ್ನು 2 ಗಂಟೆಗಳ ಕಾಲ ವಿಚಾರಣೆ ಮಾಡಲಾಗಿದೆ. ಸಿಐಡಿ ಎಸ್.ಪಿ.ರಾಘವೇಂದ್ರ ಅವರ ನೇತೃತ್ವದಲ್ಲಿ ವಿಚಾರಣೆ ನಡೆದಿದ್ದು, ಅವರನ್ನು ಅಮಾನತು ಮಾಡಲಾಗಿದೆ.

ಪಿಎಸ್‍ಐ ನೇಮಕಾತಿ ಹಿನ್ನೆಲೆ ಅಕ್ರಮ ಪ್ರಕರಣ ಕುರಿತು ವಿಚಾರಣೆ ನಡೆಯುತ್ತಿದ್ದು, ಏಳು ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ. ಬೆಂಗಳೂರಿನ ಇಬ್ಬರು ಪೇದೆಗಳನ್ನು ಸಹ ಅಮಾನತು ಮಾಡಿ ಆದೇಶ ಮಾಡಲಾಗಿದೆ.

ಅಮಾನತು ಆದ 6 ಕಾನ್ಸ್ ಸ್ಟೇಬಲ್, 1 ಸಬ್ ಇನ್ಸ್‌ಪೆಕ್ಟರ್ ಬಂಧನ
ಯಶವಂತಗೌಡ – ಇನ್ಸ್‌ಪೆಕ್ಟರ್ (ಬೆಂಗಳೂರು)
ಮಮ್ತೇಶ್ – ಕಾನ್ಸ್ ಸ್ಟೇಬಲ್ (ಬೆಂಗಳೂರು)
ಯಶ್ವಂತ್ ದೀಪು – ಕಾನ್ಸ್ ಸ್ಟೇಬಲ್ (ಬೆಂಗಳೂರು)
ಗಜೇಂದ್ರ – ಕಾನ್ಸ್ ಸ್ಟೇಬಲ್ (ಬೆಂಗಳೂರು )
ರುದ್ರೇಗೌಡ – ಸಿಎಆರ್ ಪೊಲೀಸ್ (ಕಲುಬುರಗಿ)
ಐಯಾಳಿ ದೇಸಾಯಿ – ಗನ್ ಮ್ಯಾನ್ (ಕಲುಬುರಗಿ)
ಚೇತನ್ – ಜೈಲರ್ (ಕಲುಬುರಗಿ)

ದೋಷಾರೋಪ ಪಟ್ಟಿಯ ಬಳಿಕ ಆರೋಪ ಸಾಬೀತಾದ್ರೆ ಕೆಲಸದಿಂದ ವಜಾ ಮಾಡಿ ಆದೇಶ ಹೊರಡಿಸಲಿದ್ದಾರೆ. ಇದನ್ನೂ ಓದಿ:  ಪ್ರಶ್ನೆಪತ್ರಿಕೆ ಲೀಕ್ ಪ್ರಕರಣ- ಪ್ರೊ. ನಾಗರಾಜು ಸಸ್ಪೆಂಡ್ ಮಾಡಿ ಮೈಸೂರು ವಿವಿ ಆದೇಶ

Leave a Reply

Your email address will not be published.

Back to top button