ಕಲಬುರಗಿ: ದೇಶದಲ್ಲೇ ಮೊದಲ ಕೊರೊನಾ ಸಾವಾಗಿದ್ದು ಕಲಬುರಗಿ ಜಿಲ್ಲೆಯಲ್ಲಿ. ಈವರೆಗೂ ಜಿಲ್ಲೆಯಲ್ಲಿ ಮೂವರು ಮೃತಪಟ್ಟಿದ್ದು ಜನತೆಯನ್ನ ಮತ್ತಷ್ಟು ಆತಂಕಕ್ಕೆ ದೂಡಿದೆ.
ಹೌದು. ದೇಶದಲ್ಲೇ ಕೊರೊನಾ ಮಹಾಮಾರಿಗೆ ಮೊದಲ ಸಾವು ಸಂಭವಿಸಿದ್ದು ಇದೇ ಕಲಬುರಗಿ ಜಿಲ್ಲೆಯಲ್ಲಿ. ಈವರೆಗೂ ಮೂವರು ಸಾವನ್ನಪ್ಪಿದ್ದು, 16 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಕೊರೊನಾಗೆ ಸಾವನ್ನಪ್ಪಿದ್ದ ಮೊದಲ ವ್ಯಕ್ತಿ ದುಬೈನಿಂದ ಸೋಂಕು ತಗುಲಿ ಸಾವನ್ನಪ್ಪಿದ್ರು. ಇನ್ನುಳಿದ ಇಬ್ಬರು ದೆಹಲಿಯ ಜಮಾತ್‍ಗೆ ಹೋಗಿ ಬಂದವರಿಂದ ಸೋಂಕು ತಗುಲಿ ಸಾವನ್ನಪ್ಪಿದ್ರು. ಈ ಮೂಲಕ ಕರ್ನಾಟಕದಲ್ಲಿ ಕೊರೊನಾಗೆ ಅತೀ ಹೆಚ್ಚು ಸಾವನ್ನಪ್ಪಿದ ಜಿಲ್ಲೆ ಎಂಬ ಕುಖ್ಯಾತಿಗೆ ತೊಗರಿ ಕಣಜ ಕಲಬುರಗಿ ಜಿಲ್ಲೆ ಸೇರಿಕೊಂಡಿದೆ.
Advertisement
Advertisement
ಡಿಸಿಎಂ ಖಡಕ್ ವಾರ್ನಿಂಗ್:
ಕೊರೊನಾ ತಡೆಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಜಿಲ್ಲಾ ಉಸ್ತುವಾರಿಗಳನ್ನ ನೇಮಕ ಮಾಡಿದ್ದಾರೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಗೋವಿಂದ ಕಾರಜೋಳ ಜಿಲ್ಲೆಯಲ್ಲಿ ಕೊರೊನಾ ತಡೆಗೆ ಕ್ರಮಕೈಗೊಳ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಪ್ರತಿಯೊಬ್ಬರ ಸ್ಕ್ರೀನಿಂಗ್ ನಡೆಸಬೇಕು ಅಂತ ಜಿಲ್ಲಾಧಿಕಾರಿಗೆ ಡಿಸಿಎಂ ಗೋವಿಂದ ಕಾರಜೋಳ ಖಡಕ್ ಸೂಚನೆ ನೀಡಿದ್ದಾರೆ.
Advertisement
Advertisement
ಈವೆರೆಗೂ ಮೃತಪಟ್ಟ ಮೂವರು ಕೂಡ ಕಲಬುರಗಿ ಉತ್ತರ ಕ್ಷೇತ್ರದವರೇ ಆಗಿದ್ದಾರೆ. ಅಷ್ಟೇ ಅಲ್ಲ ಇನ್ನುಳಿದ ಬಹುತೇಕ ಕೊರೋನಾ ಪಾಸಿಟಿವ್ ಪ್ರಕರಣಗಳೂ ಸಹ ಇದೇ ಕ್ಷೇತ್ರದಲ್ಲಿ ದಾಖಲಾಗಿರೋದು.
ಒಟ್ಟಾರೆ ದಿನೇ ದಿನೇ ಕೊರೊನಾ ಕೇಸ್ ಹೆಚ್ಚಾಗ್ತಿರೋದಕ್ಕೆ ತಕ್ಷಣವೇ ಇಡೀ ಕ್ಷೇತ್ರವನ್ನ ಸೀಲ್‍ಡೌನ್ ಮಾಡಬೇಕಿದೆ. ಆಗ ಮಾತ್ರ ಕೊರೋನಾ ಶರವೇಗದಲ್ಲಿ ಹರಡ್ತಿರೋದಕ್ಕೆ ಕೊಂಚ ಬ್ರೇಕ್ ಹಾಕಬಹುದಾಗಿದೆ.