ಕಲಬುರಗಿ: ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ನ.20ರಂದು ಚುನಾವಣೆ ನಡೆಯಲಿದೆ.
Advertisement
ಅಂದು ನಗರದ ಟೌನ್‍ಹಾಲ್ ಸಭಾಂಗಣದಲ್ಲಿ ಚುನಾವಣೆ ನಡೆಯಲಿದೆ. ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಮೇಯರ್ ಸ್ಥಾನ ಹಿಂದುಳಿದ ಪ್ರವರ್ಗ (ಬಿ)ಕ್ಕೆ ಮೀಸಲಾಗಿದೆ. ಇದೇ ಸಂದರ್ಭದಲ್ಲಿ ಪಾಲಿಕೆ ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಮನೆಗಳ ಮೇಲೆ ಪೊಲೀಸರ ದಾಳಿ
Advertisement
Advertisement
ಒಟ್ಟು 55 ವಾರ್ಡ್‍ಗಳಿಗೆ ಚುನಾವಣೆ ನಡೆದಿತ್ತು. ಬಿಜೆಪಿ 24, ಕಾಂಗ್ರೆಸ್ 27 ಮತ್ತು ಜೆಡಿಎಸ್ 4 ಸದಸ್ಯರನ್ನು ಒಳಗೊಂಡಿದೆ. ಕಲಬುರಗಿ ಮೇಯರ್ ಸ್ಥಾನ ಅಲಂಕರಿಸಲು ಜೆಡಿಎಸ್ ಬೆಂಬಲವೇ ನಿರ್ಣಾಯಕ. ಹೀಗಾಗಿ ಜೆಡಿಎಸ್ ನಡೆ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಜಮ್ಮು & ಕಾಶ್ಮೀರ: ಜಾಕ್ ಸ್ಲಿಪ್ ಆಗಿ ಗಾಯಗೊಂಡು ಕೋಮಾದಲ್ಲಿದ್ದ ಕಾಫಿನಾಡಿನ ಯೋಧ ಸಾವು