Connect with us

Bengaluru City

#MeToo ಅನ್ನೋದು ದೊಡ್ಡ ರೋಗ-ಶೃತಿ ಹರಿಹರನ್ ವಿರುದ್ಧ ಹಿರಿಯ ನಟ ರಾಜೇಶ್ ಕಿಡಿ

Published

on

ಬೆಂಗಳೂರು: ದೇಶಾದ್ಯಂತ #MeToo ಗಾಳಿ ಹವಾ ಎದ್ದಿದ್ದು, ಇದೀಗ ಸ್ಯಾಂಡಲ್ ವುಡ್ ನಲ್ಲಿಯೂ #MeToo ಆರೋಪಗಳು ಒಂದೊಂದಾಗಿಯೇ ಹೊರಬರುತ್ತಿದೆ. ಸಂಜನಾ ಗಲ್ರಾಣಿಯ ಬೆನ್ನಲ್ಲೇ ನಟಿ ಶೃತಿ ಹರಿಹರನ್ ಅವರು ಇಂದು ನಟ ಅರ್ಜುನ್ ಸರ್ಜಾ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. ಈ ಕುರಿತು ಹಿರಿಯ ನಟ ಹಾಗೂ ಅರ್ಜುನ್ ಸರ್ಜಾ ಅವರ ಮಾವ ರಾಜೇಶ್ ಅವರು ಶೃತಿ ಹರಿಹರನ್ ವಿರುದ್ಧ ಕಿಡಿಕಾರಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಜೇಶ್, ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನನಗೆ ತಿಳಿದಿರುವಂತೆ ಅರ್ಜುನ್ ಅವರನ್ನು ಸುಮಾರು ವರ್ಷಗಳಿಂದ ನೋಡುತ್ತಿದ್ದೇನೆ. ಸೌಂದರ್ಯ ಹಾಗೂ ಇನ್ನಿತರ ಕಲಾವಿದರ ಜೊತೆ ಅಭಿನಯಿಸಿದ್ದಾರೆ. ಅಷ್ಟು ಮಾತ್ರವಲ್ಲದೇ ಇಂದಿನ ಅಲ್ಲ ಹಳೆಯ ಕನ್ನಡ ಹಿರೋಯಿನ್ ಗಳ ಜೊತೆ ಅರ್ಜುನ್ ನಟನೆ ಮಾಡಿದ್ದಾರೆ. ಆದ್ರೆ ಅವರ ವಿರುದ್ಧ ಒಂದೂ ದೂರು ಇಲ್ಲ. ಇದೊಂದು ರೋಗ ಶುರುವಾಗಿದೆ. 8-10 ವರ್ಷದ ಹಿಂದಿನದ್ದನ್ನು ತೆಗೆದು ರಗಳೆ ಮಾಡುವುದು ಸರಿಯೇ? ಈ ಮೂಲಕ ಸಿನಿಮಾ ರಂಗಕ್ಕೆ ಕೆಟ್ಟ ಹೆಸರು. ಸಿನಿಮಾ ಹೀರೋಗಳು ಕೆಟ್ಟವರು ಅಂತ ಆಪಾದನೆ ಮಾಡುವುದು ಯಾವ ನ್ಯಾಯ ಅಂತ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು #MeToo- ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಆರೋಪ

ಅರ್ಜುನ್ ಅಂತ ಹುಡುಗ ಅಲ್ಲ. ಒಳ್ಳೆಯ ಹುಡುಗ. ಸಂಭಾವಿತ ವ್ಯಕ್ತಿ ನಮ್ಮ ಅರ್ಜುನ್. ಇನ್ನೊಬ್ಬರ ಬಗ್ಗೆ ಕೆಣಕೋದಾಗಲಿ, ಆಪಾದನೆ ಮಾಡೋದಾಗಲಿ ಅಥವಾ ಕಾಮುಕ ದೃಷ್ಟಿಯಿಂದ ನೋಡೋದಾಗಲಿ ಸರಿಯಲ್ಲ ಅಂತ ಶೃತಿ ವಿರುದ್ಧ ರಾಜೇಶ್ ಕೆಂಡಾಮಂಡಲರಾಗಿದ್ದಾರೆ.

ನಿನ್ನೆ-ಮೊನ್ನೆ ಬಂದ ನಟಿಯರು. ಇವರಿಗೆಲ್ಲ ಸರಿಯಾಗಿ ಕನ್ನಡ ಮಾತಾಡೋಕೆ ಬರಲ್ಲ. ಇವರೆಲ್ಲ ಅರ್ಜುನ್ ಮೇಲೆ ಏನು ಆಪಾದನೆ ಮಾಡೋದು. ಇವಳ ಮೇಲೆ ಕೇಸ್ ಹಾಕಿ ಮಾನನಷ್ಟ ಮೊಕದ್ದಮೆ ಹೂಡಲು ಬಾಕಿಯಿದೆ ಅಂತ ಹೇಳಿದ್ರು.

8-10 ವರ್ಷದ ಹಿಂದಿನ ಕೇಸನ್ನು ಮೆಲುಕು ಹಾಕುವ ಇವರು ಆ ಸಂದರ್ಭಗಳಲ್ಲಿ ಯಾಕೆ ಹೇಳಿಲ್ಲ ಅಂತ ಕಿಡಿಕಾರಿದ್ರು. ಇದನ್ನೂ ಓದಿ: #MeToo ಅಭಿಯಾನವನ್ನು ಸಮರ್ಥಿಸಿಕೊಂಡ್ರು ಶೃತಿ ಹರಿಹರನ್

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=Pvb9crCfEe4

Click to comment

Leave a Reply

Your email address will not be published. Required fields are marked *