ಮುಂಬೈ: ಬಾಲಿವುಡ್ ನಟಿ ಕಾಜೋಲ್‍ಗೆ ಕೊರೊನಾ ಸೋಂಕು ದೃಢಪಟ್ಟಿದೆ.
ದೇಶಾದ್ಯಂತ ಕೊರೊನಾ 3ನೇ ಅಲೆ ಆರ್ಭಟ ನಡೆಸುತ್ತಿದೆ. ಇತ್ತೀಚೆಗೆ ಅನೇಕ ಸೆಲೆಬ್ರಿಟಿಗಳು ಕೊರೊನಾ ಸೋಂಕಿಗೆ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ನಟಿ ಕಾಜೋಲ್‍ಗೆ ಕೊರೊನಾ ಪಾಸಿಟಿವ್ ಬಂದಿದೆ. ಸದ್ಯ ಈ ಕುರಿತಂತೆ ಇನ್‍ಸ್ಟಾಗ್ರಾಮ್‍ನಲ್ಲಿ ಮಾಹಿತಿ ನೀಡಿರುವ ಕಾಜೋಲ್ ತಮ್ಮ ಪ್ರೀತಿಯ ಪುತ್ರಿ ನೈಸಾ ದೇವಗನ್ ಫೋಟೋವನ್ನು ಶೇರ್ ಮಾಡಿ ಆಕೆಯನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
Kajol tests COVID-19 positive
Read @ANI Story | https://t.co/eObLJjnocM
#kajol #COVID19Positive pic.twitter.com/rzyhMRdOsQ
— ANI Digital (@ani_digital) January 30, 2022
ಫೋಟೋದಲ್ಲಿ ನೈಸಾ ದೇವಗನ್ ಮೆಹೆಂದಿ ಹಾಕಿಸಿಕೊಂಡು ಪೋಸ್ ನೀಡಿರುವುದನ್ನು ಕಾಣಬಹುದಾಗಿದೆ. ನೆಗಡಿ ಹೊಂದಿರುವ ನನ್ನ ಮೂಗನ್ನು ತೋರಿಸಲು ನನಗೆ ಇಷ್ಟವಿಲ್ಲ. ನಾನು ವಿಶ್ವದ ಸಿಹಿಯಾದ ನಗುವನ್ನು ಪೋಸ್ಟ್ ಮಾಡುತ್ತೇನೆ ಮಿಸ್ ಯೂ ನೈಸಾ ದೇವ್‍ಗನ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ತಮ್ಮ ಜೊತೆ ಸಮಯ ಕಳೆಯುವಂತೆ ನಿರ್ದೇಶಕರೊಬ್ಬರು ಹೇಳಿದ್ದರು- ಕಾಸ್ಟಿಂಗ್ ಕೌಚ್ ಬಗ್ಗೆ ದಿವ್ಯಾಂಕ ಮಾತು
View this post on Instagram
ಸದ್ಯ ನಿರ್ದೇಶಕಿ ರೇವತಿ ಆ್ಯಕ್ಷನ್ ಕಟ್ ಹೇಳುತ್ತಿರುವ ದಿ ಲಾಸ್ಟ್ ಹುರ್ರೇ ಎಂಬ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಕಾಜೋಲ್ ಪುತ್ರಿ ನೈಸಾ ಪ್ರಸ್ತುತ ಸಿಂಗಾಪುರದ ಗ್ಲಿಯನ್ ಇನ್‍ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್‍ನಲ್ಲಿ ಅಂತರರಾಷ್ಟ್ರೀಯ ಹಾಸ್ಪಿಟಾಲಿಟಿ ಅಧ್ಯಯನ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಶಾಲಾ ಶಿಕ್ಷಣಕ್ಕಾಗಿ ಸಿಂಗಾಪುರದಲ್ಲಿದ್ದರು. ಇದನ್ನೂ ಓದಿ: ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ