ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಬಹುನಿರೀಕ್ಷಿತ ‘ಸಿಖಂದರ್’ (Sikandar) ಸಿನಿಮಾಗೆ ಸೌತ್ ಸ್ಟಾರ್ ನಟಿ ಕಾಜಲ್ ಅಗರ್ವಾಲ್ (Kajal Aggarwal) ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಬಾಲಿವುಡ್‌ನ ಬಿಗ್ ಆಫರ್‌ವೊಂದನ್ನು ನಟಿ ಬಾಚಿಕೊಂಡಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಈಗಾಗಲೇ ‘ಸಿಖಂದರ್’ ಸಿನಿಮಾದ ಶೂಟಿಂಗ್ ಭರದಿಂದ ನಡೆಯುತ್ತಿದೆ. ಸಲ್ಮಾನ್ ಖಾನ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ನಂತರ ಮತ್ತೋರ್ವ ನಟಿ ಕಾಜಲ್ ಚಿತ್ರಕ್ಕೆ ಸಾಥ್ ನೀಡುತ್ತಿದ್ದಾರೆ. ಅವರು ‘ಸಿಖಂದರ್’ ಸಲ್ಮಾನ್ (Salman Khan) ಜೊತೆ ಪ್ರಮುಖ ಪಾತ್ರದಲ್ಲಿ ‘ಮಗಧೀರ’ ನಟಿ ಕಾಣಿಸಿಕೊಳ್ತಿದ್ದಾರೆ ಎನ್ನಲಾಗಿದೆ. ಆದರೆ ನಟಿಯ ಎಂಟ್ರಿಯ ಹಾಗೂ ಆ ಪಾತ್ರದ ಕುರಿತು ಚಿತ್ರತಂಡ ಅಧಿಕೃತವಾಗಿ ತಿಳಿಸುವವರೆಗೂ ಕಾಯಬೇಕಿದೆ.
ಕಾಜಲ್ ಎಂಟ್ರಿಯ ಬಗ್ಗೆ ಗುಸು ಗುಸು ಶುರುವಾಗ್ತಿದ್ದಂತೆ ಸಿನಿಮಾ ಕುರಿತು ಫ್ಯಾನ್ಸ್‌ಗೆ ನಿರೀಕ್ಷೆ ಹೆಚ್ಚಾಗಿದೆ. ಸಲ್ಮಾನ್, ರಶ್ಮಿಕಾ, ಕಾಜಲ್ ಈ ಮೂವರನ್ನು ತೆರೆಯ ಮೇಲೆ ಕಣ್ತುಂಬಿಕೊಳ್ಳೋಕೆ ಫ್ಯಾನ್ಸ್ ಕಾಯ್ತಿದ್ದಾರೆ. ಇದನ್ನೂ ಓದಿ:‘ಕಾಂತ’ ಚಿತ್ರಕ್ಕಾಗಿ ಕೈಜೋಡಿಸಿದ ರಾಣಾ ದಗ್ಗುಬಾಟಿ, ದುಲ್ಕರ್ ಸಲ್ಮಾನ್
ಇನ್ನೂ ಈ ಚಿತ್ರವನ್ನು ಸ್ಟಾರ್ ಡೈರೆಕ್ಟರ್ ಎ.ಆರ್ ಮುರಗದಾಸ್ ನಿರ್ದೇಶನ ಮಾಡ್ತಿದ್ದಾರೆ. ಚಿತ್ರದಲ್ಲಿ ಪ್ರತೀಕ್ ಬಬ್ಬರ್, ಸತ್ಯರಾಜ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಮುಂದಿನ ವರ್ಷ ಸಿನಿಮಾ ರಿಲೀಸ್ ಆಗಲಿದೆ.