ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಮತ್ತು ಗೌತಮ್ ಅಪ್ಪ, ಅಮ್ಮ ಆಗಿದ್ದಾರೆ. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದ ಕಾಜಲ್ ಅಗರ್ವಾಲ್ ಸೋಮವಾರ ಗಂಡು ಮಗುವಿಗೆ ಜನ್ಮನೀಡಿದ್ದಾರೆ.
Advertisement
ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಕಾಜಲ್ ಹಾಗೂ ಮಗು ಇಬ್ಬರು ಕೂಡ ಆರೋಗ್ಯವಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ. ಆದರೆ ತಮ್ಮ ಪ್ರೀತಿಯ ಪುಟ್ಟ ಕಂದನನ್ನು ಮನೆಗೆ ವೆಲ್‍ಕಮ್ ಮಾಡುತ್ತಿರುವ ಬಗ್ಗೆ ಕಾಜಲ್ ಆಗಲಿ ಗೌತಮ್ ಆಗಲಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿಲ್ಲ. ಇದನ್ನೂ ಓದಿ: ಮಗಳ ಮದುವೆಯ ಫೋಟೋ ಶೇರ್ ಮಾಡಿ ಭಾವುಕರಾದ ಆಲಿಯಾ ತಾಯಿ
Advertisement
Advertisement
ಇತ್ತೀಚೆಗಷ್ಟೇ ಕಾಜಲ್ ಅಗರ್ವಾಲ್ ಸೀಮಂತ ಕಾರ್ಯಕ್ರಮ ಬಹಳ ಸರಳವಾಗಿ ಮತ್ತು ಸಾಂಪ್ರದಾಯಕವಾಗಿ ನೆರವೇರಿತ್ತು. ಇನ್ನೂ ಈ ಫೋಟೋಗಳನ್ನು ಕಾಜಲ್ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದರು. ಅಲ್ಲದೇ ಈ ಕಾರ್ಯಕ್ರಮದಲ್ಲಿ ಕೇವಲ ಕುಟುಂಬಸ್ಥರು ಮತ್ತು ಆತ್ಮೀಯರಿಗಷ್ಟೇ ಆಹ್ವಾನಿಸಲಾಗಿತ್ತು.
Advertisement
View this post on Instagram
ಕಳೆದ ಕೆಲವು ದಿನಗಳ ಹಿಂದೆ ದುಬೈನಲ್ಲಿ ಕಾಜಲ್ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಸಖತ್ ಸ್ಟೈಲಿಶ್ ಆಗಿ ಪೋಸ್ ನೀಡಿದ್ದ ಕಾಜಲ್ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಕಾಜಲ್ ಆಗಾಗ ಪ್ರವಾಸ, ಸಮಾರಂಭದ ಫೋಟೊಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿರುತ್ತಾರೆ ಇದನ್ನೂ ಓದಿ: ತಮ್ಮ ವೆಯ್ಟ್ ಲಾಸ್ ಜರ್ನಿ ಬಗ್ಗೆ ಹೇಳಿದ ಕಾಶ್ಮೀರಿ ಪಂಡಿತಾ
ಕಾಜಲ್ ಹಾಗೂ ಗೌತಮ್ ಕಿಚ್ಲು ೨೦೨೦ರ ಅಕ್ಟೋಬರ್ ೩೦ರಂದು ವಿವಾಹವಾಗಿದ್ದರು. ೨೦೨೨ರ ಆರಂಭದಲ್ಲಿ ಕಾಜಲ್ ಅಗರ್ವಾಲ್ ಹಾಗೂ ಅವರ ಪತಿ ಗೌತಮ್ ಕಿಚ್ಲು ಪೋಷಕರಾಗುತ್ತಿದ್ದೇವೆ ಎಂದು ಘೋಷಿಸಿದ್ದರು. ಕಾಜಲ್ ಹಿಂದಿ, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.