ನವದೆಹಲಿ: ಸಾಮಾಜಿಕ ಹೋರಾಟಗಾರ, ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ದಕ್ಷಿಣ ದೆಹಲಿಯ ಸತ್ಯಾರ್ಥಿ ಅವರ ಮನೆಯಲ್ಲಿದ್ದ ನೊಬೆಲ್ ಪ್ರಶಸ್ತಿಪಠಣವನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ.
ಕಳೆದ ರಾತ್ರಿ ಕಳ್ಳನ ನಡೆದಿದ್ದು ಮನೆಯ ಕೆಲಸಗಾರರು ಪ್ರಶಸ್ತಿ ಕಳುವಾಗಿರುವುದನ್ನು ಬಹಿರಂಗಪಡಿಸಿದ್ದಾರೆ. ಸದ್ಯಕ್ಕೆ ಸತ್ಯಾರ್ಥಿ ಅವರು ಮನೆಯಲ್ಲಿಲ್ಲ ಎಂದು ಹೇಳಲಾಗಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತರ ಸಮ್ಮೇಳನದಲ್ಲಿ ಭಾಗವಹಿಸಲು ಅವರು ಲ್ಯಾಟಿನ್ ಅಮೆರಿಕಗೆ ಹೋಗಿದ್ದಾರೆ.
Advertisement
ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ಹೋರಾಡಲು ಬಚ್ಪನ್ ಬಚಾವೋ ಆಂದೋಲನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ 63 ವರ್ಷದ ಸತ್ಯಾರ್ಥಿ ಅವರಿಗೆ 2014ರಲ್ಲಿ ನೊಬೆಲ್ ಗೌರವ ಸಿಕ್ಕಿತ್ತು. ಪಾಕಿಸ್ತಾನದ ಮಲಾಲಾ ಯುಸಾಫ್‍ಝಾಯಿ ಜೊತೆ ಸತ್ಯಾರ್ಥಿ ಅವರು ನೊಬೆಲ್ ಶಾಂತಿ ಪುರಸ್ಕಾರವನ್ನು ಹಂಚಿಕೊಂಡಿದ್ದರು.