ನವದೆಹಲಿ: ಕೊಹ್ಲಿ ಪಂದ್ಯದ ಸಮಯದಲ್ಲಿ ಎದುರಾಳಿಗಳನ್ನು ನಿಂದಿಸುತ್ತಾರೆ. ಆದರೆ ಎದುರಾಳಿಗಳು ನಿಂದಿಸಿದಾಗ ಕೋಪಗೊಳ್ಳುತ್ತಾರೆ. ಹೀಗಾಗಿ ಅವರೊಬ್ಬ ಅಪ್ರಬುದ್ಧ ಆಟಗಾರ ಎಂದು ದಕ್ಷಿಣ ಆಫ್ರಿಕಾದ ಯುವ ವೇಗಿ ಕಗಿಸೋ ರಬಾಡ ಅವರು ಹೇಳಿದ್ದಾರೆ.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪಂದ್ಯದ ವೇಳೆ ಆಕ್ರಮಣಕಾರಿ ವ್ಯಕ್ತಿತ್ವ ತೋರುವ ವಿಚಾರದ ಬಗ್ಗೆ ಮಾತನಾಡಿರುವ ರಬಾಡ ಐಪಿಎಲ್ ವೇಳೆ ತಮ್ಮ ಮತ್ತು ಕೊಹ್ಲಿ ನಡುವಿನ ಘಟನೆಯನ್ನು ಹಂಚಿಕೊಂಡಿದ್ದಾರೆ.
Advertisement
ಕೊಹ್ಲಿ ಪಂದ್ಯದ ವೇಳೆ ಎದುರಾಳಿಗಳನ್ನು ನಿಂದಿಸುತ್ತಾರೆ. ಆದರೆ ಯಾರದರು ಅವರನ್ನು ನಿಂದಿಸಿದರೆ ಕೋಪಗೊಳ್ಳುತ್ತಾರೆ. ಇದೇ ರೀತಿ ಐಪಿಎಲ್‍ನಲ್ಲಿ ಡೆಲ್ಲಿ ಕ್ಯಾಪಿಟಲ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯವೊಂದರಲ್ಲಿ ನನ್ನ ಎಸೆತಕ್ಕೆ ಬೌಂಡರಿ ಬಾರಿಸಿದ ಕೊಹ್ಲಿ ಅವರು ನನ್ನನ್ನು ನಿಂದಿಸಿ ಮಾತನಾಡಿದರು. ನಂತರ ಎಸೆದ ಎಸೆತ ಡಾಟ್ ಅದ ಕಾರಣ ನಾನು ಅವರನ್ನು ನಿಂದಿಸಿದೆ. ಇದನ್ನು ಸಹಿಸಿಕೊಳ್ಳದ ಕೊಹ್ಲಿ ನನ್ನ ಮೇಲೆ ಕೋಪಗೊಂಡರು ಎಂದು ವಿವರಿಸಿದರು.
Advertisement
Advertisement
ವಿರಾಟ್ ಒಬ್ಬ ಅತ್ಯುತ್ತಮ ಆಟಗಾರ. ಒಳ್ಳೆಯ ಬ್ಯಾಟ್ಸ್‌ಮನ್ ಆಕ್ರಮಣಕಾರಿ ಆಟದ ಮೂಲಕ ತಂಡಕ್ಕೆ ಗೆಲುವು ತಂದು ಕೊಡುವ ಅದ್ಭುತ ಆಟಗಾರ. ಆದರೆ ಎದುರಾಳಿಗಳನ್ನು ಜರಿಯುವ ಅವರು ಎದುರಾಳಿಗಳ ಜರಿಯುವಿಕೆಯನ್ನು ಸ್ವೀಕಾರ ಮಾಡುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
ರಬಾಡ ಅವರು 2018ರಲ್ಲಿ ಕೊಹ್ಲಿ ಅವರನ್ನು ಹಿಂದಿಕ್ಕಿ ಐಸಿಸಿಯ ವರ್ಷದ ಆಟಗಾರ ಪ್ರಶಸ್ತಿ ಮತ್ತು ಆದೇ ವರ್ಷ ಅತ್ಯುತ್ತಮ ಟೆಸ್ಟ್ ಆಟಗಾರ ಪ್ರಶಸ್ತಿಯನ್ನು ಕಸಿದುಕೊಂಡಿದ್ದರು.
ಈ ವಿಚಾರದ ಬಗ್ಗೆ ಮಾತನಾಡಿದ ರಬಾಡ, ಕೊಹ್ಲಿ ಅವರು ಕಳೆದ ಐದು ವರ್ಷದಿಂದ ಭಾರತೀಯ ಕ್ರಿಕೆಟ್‍ನ ಆಧಾರ ಸ್ತಂಭ ಅವರು ಈ ಎಲ್ಲಾ ಪ್ರಶಸ್ತಿಗಳಿಗೂ ಅರ್ಹರಾಗಿದ್ದಾರೆ. ಕೊಹ್ಲಿ ಅವರು ಆಡುವ ಆಟದ ವಿಷಯದಲ್ಲಿ ನೀವು ತಪ್ಪು ಹುಡುಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
2019ರ ವಿಶ್ವಕಪ್‍ನ ತನ್ನ ಮೊದಲ ಪಂದ್ಯವನ್ನು ಕೊಹ್ಲಿ ನೇತೃತ್ವದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಜೂನ್ 5 ರಂದು ಆಡಲಿದೆ.