ಪರೀಕ್ಷೆ ಬರೆಯಲು ಹಾಲ್‍ಟಿಕೆಟ್ ಕೊಟ್ಟಿಲ್ಲವೆಂದು ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ

Public TV
1 Min Read
vlcsnap 2017 06 28 08h34m19s36

– ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಬೆಂಗಳೂರು: ನಗರದ ಕಾಡುಗೋಡಿ ಬಳಿಯ ಎಂವಿಜೆ ಕಾಲೇಜ್‍ನ ಏರೋನಾಟಿಕ್ ಕೋರ್ಸ್ ವಿದ್ಯಾರ್ಥಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

20 ವರ್ಷದ ಲೋಕೇಶ್ ನೇಣಿಗೆ ಶರಣಾದ ವಿದ್ಯಾರ್ಥಿ. ಬಳ್ಳಾರಿ ಮೂಲದ ಲೋಕೇಶ್ ನಾಲ್ಕನೇ ವರ್ಷದ ಸೆಮಿಸ್ಟರ್ ಓದುತ್ತಿದ್ದು, ಚನ್ನಸಂದ್ರದ ಅಪಾರ್ಟ್‍ಮೆಂಟ್‍ನಲ್ಲಿ ನೆಲೆಸಿದ್ದರು. ಆದ್ರೆ ಮಂಗಳವಾರ ಸಂಜೆ ಕಾಲೇಜು ಮುಗಿದ ಬಳಿಕ ಎಆರ್‍ಕೆ ಅಪಾರ್ಟ್‍ಮೆಂಟ್ ಗೆ ತೆರಳಿ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

vlcsnap 2017 06 28 08h33m55s50

ವಿಷಯ ತಿಳಿದ ಸ್ನೇಹಿತರು ಕಾಡುಗೊಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೈದೇಹಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಪರೀಕ್ಷೆಗೆ ಹಾಲ್‍ಟಿಕೆಟ್ ಕೊಟ್ಟಿಲ್ಲ ಅಂತ ಕಳೆದ 15 ದಿನಗಳ ಹಿಂದಷ್ಟೇ ಲೊಕೇಶ್ ಸ್ನೇಹಿತರ ಜೊತೆ ಕಾಲೇಜು ಅವರಣದಲ್ಲಿ ಅಹೋ ರಾತ್ರಿ ಪ್ರತಿಭಟನೆ ನಡೆಸಿದ್ದರು. ಅಷ್ಟಾದ್ರೂ, ಹಾಲ್‍ಟಿಕೆಟ್ ಕೊಟ್ಟಿಲ್ಲ ಅಂತಾ ನೊಂದು ಲೋಕೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ಸ್ನೇಹಿತರು ದೂರಿದ್ದಾರೆ. ಇದೀಗ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

vlcsnap 2017 06 28 08h34m33s185

vlcsnap 2017 06 28 08h35m13s69

vlcsnap 2017 06 28 08h33m50s4

vlcsnap 2017 06 28 08h34m45s45

Share This Article
Leave a Comment

Leave a Reply

Your email address will not be published. Required fields are marked *