ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಕೊರೋನಾ ಕಾಟದ ಹಿನ್ನೆಲೆಯಲ್ಲಿ ನಿಂತಿದ್ದ ಷರಿಷೆ ರಂಗು ಮತ್ತೆ ಬಂದಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ಬಸವನಗುಡಿ ಇಂದು ಕಲರ್ ಫುಲ್ ಆಗಿತು.
Advertisement
ಬಣ್ಣ – ಬಣ್ಣದ ಅಟಿಕೆ, ರುಚಿ ರುಚಿಯಾದ ಬಡವರ ಬಾದಾಮಿ ಕಡಲೆ ಕಾಯಿ, ಲೈಟಿಂಗ್ ನಲ್ಲಿ ಕಂಗೊಳಿಸುವ ಜಾತ್ರೆ ತಿನ್ನಿಸುಗಳು ಹಾಗೂ ಕಲರ್ ಫುಲ್ ದುನಿಯಾ ಅನಾವರಣ. ಬಸವನಗುಡಿ ಸಂಪ್ರದಾಯಿಕ ಕಡಲೆ ಕಾಯಿ ಪರಿಷೆಯ ಪ್ರಯುಕ್ತ ಹಬ್ಬದ ವಾತಾವರಣ ಮನೆ ಮಾಡಿದೆ. ಇದನ್ನೂ ಓದಿ: 9 ದೇಶಗಳಲ್ಲಿ ಓಮಿಕ್ರಾನ್ ಪತ್ತೆ
Advertisement
Advertisement
ನಾಳೆಯಿಂದ ಡಿಸೆಂಬರ್ 1ರವರೆಗೆ ಅಂದರೆ 3 ದಿನ ಈ ಕಡ್ಲೇಕಾಯಿ ಪರಿಷೆ ನಡೆಯಲಿದೆ. ಸಾವಿರಕ್ಕೂ ಹೆಚ್ಚು ಕಡಲೆ ಕಾಯಿ ಮಳಿಗೆಗಳು ಓಪನ್ ಆಗಿದ್ದು. 50 ರೂ.ಗೆ ಸೇರು ಮಾರಾಟವಾಗ್ತಿದೆ. ಭಾನುವಾರವಾದ ಇವತ್ತೇ ಪರಿಷೆ ಸಂಭ್ರಮ ಮನೆ ಮಾಡಿತ್ತು. ಕುಟುಂಬ ಸಮೇತರಾಗಿ ಬಂದು ಕೊರೋನಾ ನಿಯಮವನ್ನೇ ಮರೆತಿದ್ದಾರೆ. ನಾಳೆ ಬೆಳಗ್ಗೆ ಸಂಪ್ರಾಯಿಕವಾಗಿ ಕಡಲೆ ಕಾಗಿ ಪರಿಷೆಗೆ ಚಾಲನೆ ಸಿಗಲಿದೆ. ಇದನ್ನೂ ಓದಿ: ನಾಳೆಯಿಂದ ಚಳಿಗಾಲದ ಅಧಿವೇಶನ – ಆಡಳಿತ ಪಕ್ಷ ವಿರುದ್ಧ ಮುಗಿಬೀಳಲು ವಿಪಕ್ಷ ತಯಾರಿ
Advertisement