ನವದೆಹಲಿ: ನಾಳೆಯಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಈ ಅಧಿವೇಶನ ರಾಜಕೀಯವಾಗಿ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, ಆಡಳಿತ ಪಕ್ಷದ ಕಾರ್ಯವೈಕರಿ ವಿರುದ್ಧ ಮುಗಿಬೀಳಲು ವಿಪಕ್ಷಗಳು ತಯಾರಿ ನಡೆಸಿಕೊಂಡಿವೆ.
Advertisement
ಕಲಾಪದ ಮೊದಲ ದಿನವೇ ಮೂರು ವಿವಾದಾತ್ಮಕ ಕೃಷಿ ಕಾಯ್ದೆ ಹಿಂಪಡೆಯುವ ವಿಧೇಯಕವನ್ನು ಕೇಂದ್ರ ಸರ್ಕಾರ ಮಂಡಿಸಲಿದೆ. ಹೀಗಾಗಿ ನಾಳೆಯ ಅಧಿವೇಶನದಲ್ಲಿ ಖಡ್ಡಾಯವಾಗಿ ಹಾಜರು ಇರಬೇಕೆಂದು ಬಿಜೆಪಿ ತನ್ನೆಲ್ಲಾ ಸಂಸದರಿಗೆ ವಿಪ್ ಜಾರಿ ಮಾಡಿದೆ. ಮೂರು ಕಾಯ್ದೆಗಳನ್ನು ಹಿಂಪಡೆಯುವ ಮೂಲಕ ಕೃಷಿಕರ ಹೋರಾಟವನ್ನು ಆದಷ್ಟು ಬೇಗ ಮುಗಿಸುವಂತೆ ಓಲೈಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಆದರೆ ಈ ಬಗ್ಗೆ ಚರ್ಚೆಗೆ ಕಾಂಗ್ರೆಸ್ ಪಟ್ಟು ಹಿಡಿಯುವ ಸಂಭವ ಇದೆ. ಇದನ್ನೂ ಓದಿ: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಜಾತೀಯತೆ ನಿರ್ಮೂಲನೆಯಾಗಿಲ್ಲ: ಸುಪ್ರೀಂ ಬೇಸರ
Advertisement
Advertisement
ಕೇಂದ್ರ ಸರ್ಕಾರ ಈ ಹಿಂದೆ ರೈತ ಹೋರಾಟದ ಬಗ್ಗೆ ನೀಡಿದ್ದ ಹೇಳಿಕೆಗಳನ್ನು ಉಲ್ಲೇಖಿಸಿ, ರೈತರ ಜೊತೆ ಯಾವುದೇ ಚರ್ಚೆ ನಡೆಸದೇ, ಸಂಪುಟದ ಅನುಮೋದನೆ ಪಡೆಯದೇ ಮೋದಿ ಮಾಡಿದ ಪ್ರಕಟಣೆಯನ್ನು ಕಾಂಗ್ರೆಸ್ ಪ್ರಶ್ನಿಸಿ, ಕೇಂದ್ರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ತಯಾರಿ ನಡೆಸಿದೆ. ಹೀಗಾಗಿಯೇ ಉಭಯ ಸದನಗಳಲ್ಲಿ ಎಲ್ಲಾ ಸದಸ್ಯರು ಕಡ್ಡಾಯವಾಗಿ ಹಾಜರು ಇರಬೇಕೆಂದು ಎರಡು ಸಾಲಿನ ವಿಪ್ ಜಾರಿ ಮಾಡಿದೆ. ಇನ್ನೂ ಕ್ರಿಪ್ಟೋ ಕರೆನ್ಸಿ ಬಿಲ್, ಎರಡು ರಾಷ್ಟ್ರೀಕೃತ ಬ್ಯಾಂಕ್‍ಗಳ ಖಾಸಗೀಕರಣ ವಿಧೇಯಕ ಸೇರಿ ಒಟ್ಟು 26 ವಿಧೇಯಕಗಳಿಗೆ ಅನುಮೋದನೆ ಪಡೆಯಲು ಕೇಂದ್ರ ಪ್ಲಾನ್ ಮಾಡಿಕೊಂಡಿದೆ. ಇದನ್ನೂ ಓದಿ: ತ್ರಿಪುರ ಸ್ಥಳೀಯ ಸಂಸ್ಥೆಗಳ ಚುನಾವಣೆ: 334ಕ್ಕೆ 329 ಸ್ಥಾನಗಳಲ್ಲಿ ಬಿಜೆಪಿ ಗೆಲುವು, ಎಎಂಸಿಯಲ್ಲಿ ʼಕಮಲʼ ಕ್ಲೀನ್‌ಸ್ವೀಪ್
Advertisement