ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಕೊರೊನಾ ಕಾಟದಿಂದ ನಿಂತಿದ್ದ ಕಡಲೆಕಾಯಿ ಷರಿಷೆಗೆ ಮತ್ತೆ ರಂಗು ಬಂದಿದೆ. ಮುಜರಾಯಿ ಇಲಾಖೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ನಡೆಯುವ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಶಾಸಕರಾದ ರವಿಸುಬ್ರಮಣ್ಯ, ಉದಯ್ ಬಿ.ಗರುಡಾಚಾರ್ ಇಂದು ಚಾಲನೆ ನೀಡಿದರು.
Advertisement
ಸಿಲಿಕಾನ್ ಸಿಟಿ ಬೆಂಗಳೂರಿನ ಬಸವನಗುಡಿ ಇಂದು ಕಲರ್ ಫುಲ್ ಆಗಿದೆ. ಬಣ್ಣ-ಬಣ್ಣದ ಅಟಿಕೆ, ರುಚಿ ರುಚಿಯಾದ ಬಡವರ ಬಾದಾಮಿ ಕಡಲೆಕಾಯಿ, ಲೈಟಿಂಗ್‍ನಲ್ಲಿ ಕಂಗೊಳಿಸುವ ಜಾತ್ರೆ ತಿನಿಸುಗಳು ಹಾಗೂ ಕಲರ್ ಫುಲ್ ದುನಿಯಾ ಅನಾವರಣವಾಗಿದೆ. ಬಸವನಗುಡಿ ಸಂಪ್ರದಾಯಿಕ ಕಡಲೆಕಾಯಿ ಪರಿಷೆಯ ಪ್ರಯುಕ್ತ ಹಬ್ಬದ ವಾತಾವರಣ ಮನೆ ಮಾಡಿದೆ. ಕೊರೊನಾ ಮಾರ್ಗಸೂಚಿಯೊಂದಿಗೆ ಕಡಲೆಕಾಯಿ ಪರಿಷೆ ನಡೆಯುತ್ತಿದೆ. ಇದನ್ನೂ ಓದಿ: 2 ವರ್ಷಗಳ ಬಳಿಕ ಕಡಲೇಕಾಯಿ ಪರಿಷೆ – ಬುಲ್ ಟೆಂಪಲ್ ರಸ್ತೆಯಲ್ಲಿ ಕಟ್ಟೆಚ್ಚರ
Advertisement
Advertisement
ಇಂದಿನಿಂದ ಡಿಸೆಂಬರ್ 1ರವರೆಗೆ ಅಂದರೆ 3 ದಿನ ಈ ಕಡಲೆಕಾಯಿ ಪರಿಷೆ ನಡೆಯಲಿದೆ. ಸಾವಿರಕ್ಕೂ ಹೆಚ್ಚು ಕಡಲೆಕಾಯಿ ಮಳಿಗೆಗಳು ಓಪನ್ ಆಗಿದ್ದು. 50ರೂ.ಗೆ ಸೇರು ಮಾರಾಟವಾಗ್ತಿದೆ. ಭಾನುವಾರದಿಂದಲೇ ಪರಿಷೆ ಸಂಭ್ರಮ ಮನೆ ಮಾಡಿತ್ತು. ಕುಟುಂಬ ಸಮೇತರಾಗಿ ಬಂದು ಕೊರೊನಾ ನಿಯಮವನ್ನೇ ಮರೆತು ಕಡಲೆಕಾಯಿ ಖರೀದಿಸಲು ಜನ ಮುಗಿಬಿದ್ದಿದ್ದರು. ಇದನ್ನೂ ಓದಿ: ಮದುವೆಗೂ ಮುನ್ನ ಜಿಮ್‍ನಲ್ಲಿ ವರ್ಕೌಟ್ ಮಾಡಿದ ವಧು – ವೀಡಿಯೋ ವೈರಲ್
Advertisement
ಇಂದು ನಡೆದ ಕಾರ್ಯಕ್ರಮದಲ್ಲಿ ಆಡಳಿತಗಾರರು ರಾಕೇಶ್ ಸಿಂಗ್, ಮುಖ್ಯ ಆಯುಕ್ತರು, ಗೌರವ್ ಗುಪ್ತ, ವಲಯ ಆಯುಕ್ತರು ತುಳಸಿ ಮದ್ದಿನೇನಿ, ವಲಯ ಜಂಟಿ ಆಯುಕ್ತರು ಜಗದೀಶ್ ನಾಯಕ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಸಾಂಪ್ರದಾಯಿಕ ಆಚರಣೆಗೆ ಬ್ರೇಕ್ ಹಾಕಿ ಪೀಠಾರೋಹಣ ಮಾಡಿದ ಮುರುಘಾ ಶರಣರು