ChitradurgaDistrictsKarnatakaLatestMain Post

ಸಾಂಪ್ರದಾಯಿಕ ಆಚರಣೆಗೆ ಬ್ರೇಕ್ ಹಾಕಿ ಪೀಠಾರೋಹಣ ಮಾಡಿದ ಮುರುಘಾ ಶರಣರು

ಚಿತ್ರದುರ್ಗ: ಐತಿಹಾಸಿಕ ಹಿನ್ನೆಲೆಯ ಶೂನ್ಯಪೀಠ ಪರಂಪರೆ ಮುರುಘಾ ಮಠದ ಪೀಠಾಧಿಪತಿಗಳು ಪೂರ್ವಜರ ಕಾಲದಿಂದಲೂ ಐಶಾರಾಮಿಯಾದ ಬಂಗಾರ ಕಿರೀಟ ಧರಿಸಿ, ಶರಣರು ಪೀಠಾರೋಹಣ ಮಾಡೋದು ವಾಡಿಕೆಯಾಗಿದೆ. ಆದರೆ ಡಾ.ಶಿವಮೂರ್ತಿ ಮುರುಘಾ ಶರಣರು ಮಾತ್ರ ಈ ಬಾರಿ ಸಾಂಪ್ರದಾಯಿಕ ಆಚರಣೆ ನಿಲ್ಲಿಸಿ, ವೈಚಾರಿಕತೆ ಆಚರಣೆಗೆ ನಾಂದಿ ಹಾಡಿದ್ದಾರೆ.

ಸಾಂಪ್ರದಾಯಿಕ ಆಚರಣೆಗೆ ಬ್ರೇಕ್ ಹಾಕಿ ಪೀಠಾರೋಹಣ ಮಾಡಿದ ಮುರುಘಾ ಶರಣರು

ಪ್ರತಿವರ್ಷವೂ ಬಂಗಾರದ ಸಿಂಹಾಸನದ ಮೇಲೆ ಕುಳಿತು ಪೀಠಾರೋಹಣ ಮಾಡುತಿದ್ದ ಶರಣರು, ಈ ಬಾರಿ ಮರದ ಸಿಂಹಾಸನದ ಮೇಲೆ ಕುಳಿತು ಪೀಠಾರೋಹಣ ಮಾಡಿದರು. ಅಡ್ಡ ಪಲ್ಲಕ್ಕಿಯಲ್ಲಿ ಕುಳಿತು ಮೆರವಣಿಗೆ ನಡೆಸುತ್ತಿದ್ದ ಶರಣರು, ಅದರ ಬದಲಾಗಿ ಪಲ್ಲಕ್ಕಿಯಲ್ಲಿ ವಚನಕಾರರ ವಚನಗಳ ಹಸ್ತಪ್ರತಿಗಳನ್ನಿಟ್ಟು ಮೆರವಣಿಗೆ ನಡೆಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಹೇಳಿದ ತಕ್ಷಣ ಯಾವುದೂ ಸತ್ಯ ಆಗಲ್ಲ: ಬಿ.ಸಿ.ಪಾಟೀಲ್

ಸಾಂಪ್ರದಾಯಿಕ ಆಚರಣೆಗೆ ಬ್ರೇಕ್ ಹಾಕಿ ಪೀಠಾರೋಹಣ ಮಾಡಿದ ಮುರುಘಾ ಶರಣರು

ಪ್ರತಿವರ್ಷದಂತೆ ಈ ವರ್ಷವೂ ಸಹ ದಸರಾ ಹಬ್ಬದ ಮರುದಿನ ಮುರುಘಾ ಶರಣರ ಶೂನ್ಯಪೀಠದ ಪೀಠಾರೋಹಣ ಇಂದು ನಡೆಯಿತು. ಆದರೆ ಪ್ರತಿವರ್ಷ ನಡೆಯುತಿದ್ದ ಶೂನ್ಯ ಪೀಠಾರೋಹಣ ಇಂದು ಅತ್ಯಂತ ಸರಳವಾಗಿ ನೆರವೇರಿತು. ಶೂನ್ಯಪೀಠ ಪರಂಪರೆಯ ಮುರುಘಾ ಮಠದ ಸಂಪ್ರದಾಯದಂತೆ ಗುರುಪೀಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ಬಂಗಾರದ ಕಿರೀಟ ಧಾರಣೆ ಮಾಡದೇ ರುದ್ರಾಕ್ಷಿ ಕಿರೀಟ ಧರಿಸಿ ಪೀಠಾರೋಹಣ ಮಾಡಿದರು.

ಸಾಂಪ್ರದಾಯಿಕ ಆಚರಣೆಗೆ ಬ್ರೇಕ್ ಹಾಕಿ ಪೀಠಾರೋಹಣ ಮಾಡಿದ ಮುರುಘಾ ಶರಣರು

ಬಸವತತ್ವ ಅನುಯಾಯಿಗಳಾದ ಶರಣರು, ಈ ಆಚರಣೆಯಲ್ಲಿ ಸ್ವಲ್ಪ ಬದಲಾವಣೆ ತಂದಿದ್ದು, ಎಲ್ಲ ಕೈ ಬೆರಳುಗಳಿಗೆ ಬಂಗಾರದ ಉಂಗುರಗಳಿದ್ದರೂ, ಅದನ್ನು ಧರಿಸದೆ ಸರಳವಾಗಿ ಆಚರಣೆ ಮಾಡಿಕೊಂಡರು.

ಮೈಸೂರಿಗೆ ತೆರಳಿ ದಸರಾ ಉತ್ಸವ ನೋಡಲಾಗದ ಕೋಟೆನಾಡಿನ ಜನರಿಗೆ ಹಾಗೂ ಮಧ್ಯ ಕರ್ನಾಟಕದ ಜನರಿಗೆ ಶರಣ ಸಂಸ್ಕøತಿ ಉತ್ಸವವೇ ಮಿನಿ ದಸರಾವಾಗಿರುತ್ತೆ. ಇಲ್ಲಿ ಸತತ ಮೂರು ದಶಕಗಳಿಂದ ನಡೆಯುತ್ತಿರುವ ಶರಣ ಸಂಸ್ಕøತಿ ಉತ್ಸವದಲ್ಲಿ ವಿವಿಧೆಡೆಗಳಿಂದ ಮಠಾಧೀಶರು, ಭಕ್ತರು ಹಾಗೂ ಪ್ರವಾಸಿಗರು ಬರುತ್ತಾರೆ. ಇಲ್ಲಿನ ಸೊಬಗು ಹಾಗು ಉತ್ಸವದ ಆಚರಣೆಯಲ್ಲಿ ಭಾಗಿಯಾಗಿ ದಸರಾ ಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ. ಇದನ್ನೂ ಓದಿ: ಭಾರೀ ಮಳೆ ಹಿನ್ನೆಲೆ – ಶಬರಿಮಲೆ ಭಕ್ತರಿಗೆ ಪಂಪಾ ನದಿಗೆ ಇಳಿಯದಂತೆ ಎಚ್ಚರಿಕೆ

ಸಾಂಪ್ರದಾಯಿಕ ಆಚರಣೆಗೆ ಬ್ರೇಕ್ ಹಾಕಿ ಪೀಠಾರೋಹಣ ಮಾಡಿದ ಮುರುಘಾ ಶರಣರು

ಪೂರ್ವಜರ ಕಾಲದ ಸಾಂಪ್ರದಾಯಿಕ ಆಡಂಬರದ ಆಚರಣೆಯನ್ನು ನಿಲ್ಲಿಸಿ, ವೈಚಾರಿಕ ನಡೆಯತ್ತ ಸಾಗುವ ಮೂಲಕ ಮುರುಘಾ ಶರಣರು ಸಾಂಪ್ರದಾಯಿಕ ಆಚರಣೆಗೆ ಬ್ರೇಕ್ ಹಾಕಿದರು. ಕೊರೊನಾ ಸಂಕಷ್ಟದ ವೇಳೆ ಐಶಾರಾಮಿಯಾಗಿ ಬಂಗಾರದ ವಸ್ತ್ರಾಭರಣ ಧರಿಸಿ ಪೀಠಾರೋಹಣ ಮಾಡುವ ಬದಲಾಗಿ, ಸರಳವಾಗಿ ಪೀಠಾರೋಹಣ ಮಾಡುವ ಮೂಲಕ ಭಕ್ತರ ಗಮನ ಸೆಳೆದರು.

Related Articles

Leave a Reply

Your email address will not be published. Required fields are marked *