– ಅಯ್ಯರ್ ಇದು ನಿಮ್ಮ ವರ್ಷ ಎಂದ ವೀರ್
ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಬ್ಯಾಟಿಂಗ್ ಹಾಗೂ ಕೀಪಿಂಗ್ ಮೂಲಕ ಮಿಂಚಿ ಸರಣಿಶ್ರೇಷ್ಠ ಪಡೆದುಕೊಂಡಿರುವ ಕೆ.ಎಲ್.ರಾಹುಲ್, ಏಕದಿನ ಸರಣಿಯಲ್ಲೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.
ಎಲ್ಲ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡುವ ಮೂಲಕ ರಾಹುಲ್ ಭಾರತೀಯ ಕ್ರಿಕೆಟ್ ತಂಡ ಅನೇಕ ಹಿರಿಯ ಆಟಗಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿ, ಕೆ.ಎಲ್.ರಾಹುಲ್ ಅವರನ್ನು ಖಡಕ್ ಲಡ್ಕಾ ರಾಹುಲ್ ಎಂದು ಹೊಗಳಿಸಿದ್ದಾರೆ. ಜೊತೆಗೆ ಶ್ರೇಯಸ್ ಅಯ್ಯರ್ ಅವರಿಗೆ ಇದು ನಿಮ್ಮ ವರ್ಷ ಎಂದು ಪ್ರೋತ್ಸಾಹ ನೀಡಿದ್ದಾರೆ. ಇದನ್ನೂ ಓದಿ: ಮಿಂಚಿನ ವೇಗದಲ್ಲಿ ರನೌಟ್ ಮಾಡಿದ ರಾಹುಲ್- ವಿಡಿಯೋ
Advertisement
Kadak Ladka Rahul -Naam toh suna hi hoga.
Shreyas Iyer, it’s your year !#NZvInd pic.twitter.com/OYupaiDtLC
— Virender Sehwag (@virendersehwag) February 5, 2020
Advertisement
ಹ್ಯಾಮಿಲ್ಟನ್‍ನಲ್ಲಿ ಇಂದು ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಇದಕ್ಕೂ ಮುನ್ನ ಆಡಿದ್ದ ವಿರಾಟ್ ಕೊಹ್ಲಿ ಸೇರಿದಂತೆ ಯಾವುದೇ ಆಟಗಾರರು ಒಂದೇ ಒಂದು ಸಿಕ್ಸ್ ಸಿಡಿಸಿರಲಿಲ್ಲ. ಆದರೆ ರಾಹುಲ್ ಇನ್ನಿಂಗ್ಸ್ ನ 35 ಹಾಗೂ 38ನೇ ಓವರಿನಲ್ಲಿ ನಿರಂತರವಾಗಿ ತಲಾ ಎರಡು ಸಿಕ್ಸರ್ ಸಿಡಿಸಿ ಟೀಂ ಇಂಡಿಯಾದ ಸಿಕ್ಸರ್ ಖಾತೆ ತೆರೆದರು. ಇದನ್ನೂ ಓದಿ: ಕೊನೆಗೂ ತಂಡವನ್ನು ಗೆಲ್ಲಿಸಿದ ರಾಸ್ ಟೇಲರ್- 24 ವೈಡ್ ಎಸೆದ ಟೀಂ ಇಂಡಿಯಾ
Advertisement
ಶ್ರೇಯಸ್ ಅಯ್ಯರ್ ಅವರಿಗೆ ಸಾಥ್ ನೀಡಿದ ರಾಹುಲ್ ಔಟಾಗದೆ 88 ರನ್ (64 ಎಸೆತ, 3 ಬೌಂಡರಿ, 6 ಸಿಕ್ಸರ್) ಚಚ್ಚಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ಅಷ್ಟೇ ಅಲ್ಲದೆ ಐಸಿಸಿ ಸೋಮವಾರ ಬಿಡುಗಡೆ ಮಾಡಿದ್ದ ನೂತನ ಟಿ-20 ರ್ಯಾಕಿಂಗ್ ಪಟ್ಟಿಯಲ್ಲಿ ಕೆ.ಎಲ್.ರಾಹುಲ್ ಅವರು 823 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿ ಇದ್ದಾರೆ. ಇವರನ್ನು ಬಿಟ್ಟರೆ ಟಿ20 ಸ್ಥಿರ ಪ್ರದರ್ಶನ ತೋರುತ್ತಿರುವ ಪಾಕಿಸ್ತಾನದ ಬಾಬರ್ ಅಜಮ್ 879 ಅಂಕಗಳೊಂದಿಗೆ ಮೊದಲನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಈ ಇಬ್ಬರನ್ನು ಬಿಟ್ಟರೆ ಆಸ್ಟ್ರೇಲಿಯಾದ ಆರೋನ್ ಫಿಂಚ್ ಅವರು 810 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿ ಇದ್ದಾರೆ.
Advertisement
ನ್ಯೂಜಿಲೆಂಡ್ ವಿರುದ್ಧ ಟಿ-20 ಸರಣಿಯಲ್ಲಿ ಅದ್ಭುತ ಫಾರ್ಮ್‍ನಲ್ಲಿ ಇದ್ದ ರಾಹುಲ್ ಕೀಪಿಂಗ್, ಬ್ಯಾಟಿಂಗ್ ಮತ್ತು ಕೊನೆಯ ಪಂದ್ಯದಲ್ಲಿ ನಾಯಕತ್ವದ ಜವಾಬ್ದಾರಿ ಹೊತ್ತು ಉತ್ತಮವಾಗಿ ಆಟವಾಡಿದ್ದರು. ಈ ಐದು ಪಂದ್ಯಗಳ ಸರಣಿಯಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ರಾಹುಲ್ ಎರಡು ಅರ್ಧಶತಕ ಮತ್ತು ಒಂದು 40 ಪ್ಲಸ್ ರನ್‍ಗಳ ಸಹಾಯದಿಂದ ಒಟ್ಟು 224 ರನ್ ಹೊಡೆದು ಸರಣಿಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು.