ಲೈಕಾ ಪ್ರೊಡಕ್ಷನ್ಸ್ ತೆಕ್ಕೆಗೆ ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾ: ಕೊಟ್ಟಿದ್ದು ಎಷ್ಟು ಕೋಟಿ?

Public TV
2 Min Read
Kabzaa 1 1

ಸ್ಯಾಂಡಲ್ ವುಡ್ ನ ಹೆಸರಾಂತ ನಿರ್ದೇಶಕ ಆರ್.ಚಂದ್ರು  (R. Chandru)ಅವರ, ರಿಯಲ್ ಸ್ಟಾರ್ ಉಪೇಂದ್ರ (Upendra) ಹಾಗೂ ಕಿಚ್ಚ ಸುದೀಪ್ (Sudeep) ಕಾಂಬಿನೇಷನ್ ನ ‘ಕಬ್ಜ’ (Kabzaa) ಸಿನಿಮಾಗೆ ದೇಶಾದ್ಯಂತ ಭಾರೀ ಬೇಡಿಕೆ ಬಂದಿದೆ. ಬಾಲಿವುಡ್ ನಂತರ ತಮಿಳಿನಲ್ಲೂ (Tamil) ಪ್ರತಿಷ್ಠಿತ ಸಂಸ್ಥೆಯೇ ವಿತರಣಾ ಹಕ್ಕು ಪಡೆದುಕೊಂಡಿದೆ. ಈಗಾಗಲೇ ಅದ್ಧೂರಿ ಬಜೆಟ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ಲೈಕಾ ಪ್ರೊಡಕ್ಷನ್ (Lyca Production) ‘ಕಬ್ಜ’ ಚಿತ್ರದ ವಿತರಣಾ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ತಮಿಳಿನಲ್ಲೂ ಕಬ್ಜ ಹವಾ ಕ್ರಿಯೇಟ್ ಮಾಡಿದೆ.

Kabzaa 2 1

ಲೈಕಾ ಸಂಸ್ಥೆಯ ಮುಖ್ಯಸ್ಥ ಸುಭಾಷ್ ಕರಣ್ ಬಹುಕೋಟಿ ನೀಡಿ ವಿತರಣಾ ಹಕ್ಕುಗಳನ್ನು ಖರೀದಿಸಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಆದರೆ, ಎಷ್ಟು ಕೋಟಿಗೆ ಅದು ಸೇಲ್ ಆಗಿದೆ ಎನ್ನುವ ವಿಚಾರವನ್ನು ಮಾತ್ರ ಲೈಕಾ ಸಂಸ್ಥೆ ಬಹಿರಂಗ ಪಡಿಸಿಲ್ಲ. ಮಾರ್ಚ್ 17 ರಂದು ದೇಶಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ತಮಿಳಿನಲ್ಲೇ ಮುನ್ನೂರಕ್ಕೂ ಹೆಚ್ಚು ಥಿಯೇಟರ್ ನಲ್ಲಿ ತೆರೆಕಾಣಲಿದೆಯಂತೆ. ಇದನ್ನೂ ಓದಿ: ನಟಿ ಇಲಿಯಾನ ಡಿ ಕ್ರೂಸ್ ಗೆ ಬ್ಯಾನ್ ಬಿಸಿ: ಫಿಲ್ಮ್ ಚೇಂಬರ್ ನಿರ್ಧಾರ

Kabzaa 3

ಮೊನ್ನೆಯಷ್ಟೇ ಅಮಿತಾಭ್​ ಬಚ್ಚನ್​ ಅವರಿಂದ ಅಧಿಕೃತವಾಗಿ ಟ್ರೈಲರ್ ರಿಲೀಸ್ ಆಗಿದ್ದು ಈ ಟ್ರೇಲರ್​ಗೆ ಎಲ್ಲೆಡೆಯಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಗುತ್ತಿದ್ದು, ಅದರಲ್ಲೂ ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಬಾಲಿವುಡ್​ ನಟ-ನಟಿಯರು ಮತ್ತು ತಂತ್ರಜ್ನರಾದ ಅಜಯ್​ ದೇವಗನ್​, ರಾಕೇಶ್​ ರೋಶನ್​, ಮನೋಜ್​ ಬಾಜಪೇಯಿ, ಶ್ರೇಯಸ್​ ತಲ್ಪಾಡೆ, ಕಶ್ಮೀರಾ ಶಾ, ರೋನಿತ್ ರಾಯ್​, ಮಧುರ್​ ಭಂಡಾರ್ಕರ್​, ಮೀರಾ ಚೋಪ್ರಾ, ಕುನಾಲ್​ ಕೋಹ್ಲಿ ಸೇರಿದಂತೆ ಹಲವರು ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಿಪಡಿಸಿದ್ದಾರೆ. ಚಿತ್ರದ ಪಾತ್ರಗಳು, ಗ್ರಾಫಿಕ್ಸ್​, ಮೇಕಿಂಗ್​ ಎಲ್ಲವೂ ಅದ್ಭುತವಾಗಿದೆ ಎನ್ನುವುದರ ಜತೆಗೆ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

Kabzaa 4

‘ಕಬ್ಜಾ’ ಒಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಉಪೇಂದ್ರ, ಸುದೀಪ್​, ಶಿವರಾಜ್​ಕುಮಾರ್​, ಶ್ರೀಯಾ ಶರಣ್​, ಕಬೀರ್ ದುಹಾನ್​ ಸಿಂಗ್​, ಪ್ರಮೋದ್​ ಶೆಟ್ಟಿ, ನವಾಬ್​ ಷಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *