ಓಟಿಟಿಗೆ ಬಂತು ಆರ್.ಚಂದ್ರು ನಿರ್ದೇಶನದ ‘ಕಬ್ಜ’: ಇಂದು ಮತ್ತೊಂದು ಸಿಹಿಸುದ್ದಿ

Public TV
1 Min Read
Kabzaa 1

ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಆರ್.ಚಂದ್ರು (R. Chandru) ಅವರ ‘ಕಬ್ಜ’ (Kabzaa) ಚಿತ್ರವು ಓಟಿಟಿಯಲ್ಲಿ (OTT) ಲಭ್ಯವಿದೆ. ಇಂದಿನಿಂದ ಅಮೆಜಾನ್ ವಿಡಿಯೋ ಪ್ರೈಮ್ ನಲ್ಲಿ ಈ ಸಿನಿಮಾವನ್ನು ನೋಡಬಹುದಾಗಿದೆ. ಕಬ್ಜ ಸಿನಿಮಾ ರಿಲೀಸ್ ಆಗಿ 25 ದಿನಗಳನ್ನು ಪೂರೈಸಿ, 50ನೇ ದಿನದತ್ತ ಮುನ್ನುಗ್ಗುತ್ತಿರುವ  ಈ ಸಂದರ್ಭದಲ್ಲಿ ಚಿತ್ರತಂಡದಿಂದ ಇವತ್ತು ಮಹತ್ವದ ಘೋಷಣೆ ಆಗಲಿದೆ ಎನ್ನಲಾಗುತ್ತಿದೆ.

Kabzaa

ನಿರ್ದೇಶಕ ಆರ್.ಚಂದ್ರು ಇಂದು ಮಹತ್ವದ ಪತ್ರಿಕಾಗೋಷ್ಠಿ ಆಯೋಜನೆ  ಮಾಡಿರುವುದರಿಂದ ಅಭಿಮಾನಿಗಳಿಗೆ ಯಾವ ರೀತಿಯ ಸುದ್ದಿಯನ್ನು ನೀಡಬಹುದು ಎನ್ನುವ ಕಾತುರ ಹೆಚ್ಚಾಗಿದೆ. ಮೂಲಗಳ ಪ್ರಕಾರ ಇಂದು ಅವರು ಕಬ್ಜ 2 ಸಿನಿಮಾದ ಘೋಷಣೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಚಂದ್ರು ಈ ಕುರಿತು ಯಾವುದೇ ಮಾಹಿತಿ ನೀಡದೇ ಇದ್ದರೂ, ಇಂದು ಸಂಜೆ ಸ್ಪಷ್ಟತೆ ಸಿಗಲಿದೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್‌ಗೆ ಜೋಡಿಯಾದ ಆಲಿಯಾ ಭಟ್

Kabzaa

ತನ್ನ ಜೊತೆಗೆ ಕೆಲಸ ಮಾಡಿದ ತಂತ್ರಜ್ಞರನ್ನು ಇಂದು ಗೌರವಿಸುವ ಕಾರ್ಯಕ್ರಮವನ್ನು ಚಂದ್ರು ಇಟ್ಟುಕೊಂಡಿದ್ದು ಜೊತೆಗೆ 25ನೇ ದಿನದ ಸಂಭ್ರಮವನ್ನೂ ಅವರು ಆಚರಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಹೊಸ ಯೋಜನೆಗಳನ್ನು ಅವರು ಮಾಧ್ಯಮದ ಮುಂದೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಜಿಎಫ್ 2 ಸಿನಿಮಾ ರಿಲೀಸ್ ಆದ ದಿನವೂ ಇಂದು ಆಗಿದ್ದರಿಂದ ಸ್ಯಾಂಡಲ್ ವುಡ್ ನಲ್ಲಿ ಡಬಲ್ ಸಂಭ್ರಮ ಮನೆ ಮಾಡಿದೆ.

kabzaa 4 1

ಕಬ್ಜ ಸಿನಿಮಾ ರಿಲೀಸ್ ಆಗಿ ಎರಡನೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿತ್ತು. ನಾನಾ ಕಾರಣಗಳಿಂದಾಗಿ ಈ ಸಿನಿಮಾ ವಿಶೇಷತೆಯನ್ನೂ ಒಳಗೊಂಡಿತ್ತು, ರಿಯಲ್ ಸ್ಟಾರ್ ಉಪೇಂದ್ರ (Upendra), ಕಿಚ್ಚ ಸುದೀಪ್ (Sudeep) ಮತ್ತು ಶಿವರಾಜ್ ಕುಮಾರ್ (Shivaraj Kumar)ಇದೇ ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ನಟಿಸಿ, ಅಭಿಮಾನಿಗಳಿಗೆ ತ್ರಿಬಲ್ ಮನರಂಜನೆಯನ್ನು ನೀಡಿದ್ದರು.

Share This Article