ಕಾಬೂಲ್: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‍ನಲ್ಲಿ ಇಂದು ಬೆಳಿಗ್ಗೆ ಆತ್ಮಾಹುತಿ ದಾಳಿಕೋರನೊಬ್ಬ ಕಾರ್‍ನಲ್ಲಿ ಬಾಂಬ್ ಸ್ಫೋಟಿಸಿದ್ದಾನೆ. ಘಟನೆಯಲ್ಲಿ 24 ಮಂದಿ ಸಾವನ್ನಪ್ಪಿದ್ದು 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸಾವಿನ ಸಂಖ್ಯೆ ಏರಿಕೆಯಾಗೋ ಸಾಧ್ಯತೆಯಿದೆ ಎಂದು ಇಲ್ಲಿನ ಇಂಟೀರಿಯರ್ ಮಿನಿಸ್ಟ್ರಿ ವಕ್ತಾರರು ತಿಳಿಸಿದ್ದಾರೆ.
Advertisement
ಇಲ್ಲಿನ ಉಪ ಸರ್ಕಾರಿ ಮುಖ್ಯ ಕಾರ್ಯನಿರ್ವಾಹಕ ಮೊಹಮ್ಮದ್ ಮೊಹಾಖಿಕ್ ಅವರ ಮನೆಯ ಬಳಿಯೇ ದಾಳಿ ನಡೆದಿದೆ. ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಈ ಪ್ರದೇಶದಲ್ಲಿ ಪ್ರಮುಖವಾಗಿ ಶಿಯೈಟ್ ಹಜಾರಾ ಸಮುದಾಯದವರು ವಾಸವಿದ್ದಾರೆ. ಆದ್ರೆ ದಾಳಿಯ ಉದ್ದೇಶ ಏನೆಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಗಣಿ ಇಲಾಖೆಗೆ ಸೇರಿದ ಚಿಕ್ಕ ಬಸ್‍ವೊಂದನ್ನು ಧ್ವಂಸ ಮಾಡಲಾಗಿದೆ ಎಂದು ವರದಿಯಾಗಿದೆ.
Advertisement
ಎರಡು ವಾರಗಳ ಹಿಂದೆ ಇಲ್ಲಿನ ಮಸೀದಿಯೊಂದರಲ್ಲಿ ದಾಳಿ ನಡೆದು 4 ಜನ ಹತ್ಯೆಯಾಗಿದ್ದರು. ಐಸಿಸ್ ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಇದೀಗ ಎರಡು ವಾರಗಳ ನಂತರ ಮತ್ತೆ ಬಾಂಬ್ ದಾಳಿ ನಡೆದಿದೆ.
Advertisement
NEW: Video shows tow truck carry away charred minibus after suicide bombing kills 12 in Kabul, Afghan officials say. https://t.co/LCZtVEotBC pic.twitter.com/iKLasTPKeG
— ABC News (@ABC) July 24, 2017